ಸೋಮವಾರ, ಡಿಸೆಂಬರ್ 5, 2022
25 °C

ನಥಿಂಗ್ ಇಯರ್ 1 ಇಯರ್‌ಫೋನ್ ಬೆಲೆ ವಿವರ ಬಿಡುಗಡೆ: ಜುಲೈ 27ರಂದು ಮಾರುಕಟ್ಟೆಗೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Flipkart Image

ಬೆಂಗಳೂರು: ‘ನಥಿಂಗ್ ಇಯರ್ 1’ ನೂತನ ಇಯರ್‌ಫೋನ್ ಜುಲೈ 27ರಂದು ದೇಶದ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.

ಫ್ಲಿಪ್‌ಕಾರ್ಟ್ ಮೂಲಕ ನೂತನ ಟ್ರೂ ವೈರ್‌ಲೆಸ್ ಇಯರ್‌ಫೋನ್ ಲಭ್ಯವಾಗಲಿದ್ದು, ₹5,999 ರೂ. ದರ ಇರಲಿದೆ.

ಒನ್‌ಪ್ಲಸ್ ಸಹ ಸಂಸ್ಥಾಪಕ ಕಾರ್ಲ್ ಪೈ ಅವರಿಂದ ಹೊಸ ಉತ್ಪನ್ನ ‘ನಥಿಂಗ್’ ಮಾರುಕಟ್ಟೆ ಪ್ರವೇಶಿಸುತ್ತಿದೆ. ಬಿಡುಗಡೆಗೂ ಮೊದಲೇ ಫ್ಲಿಪ್‌ಕಾರ್ಟ್‌ನಲ್ಲಿ ಹೊಸ ಇಯರ್‌ಫೋನ್ ದರ ವಿವರ ಪ್ರಕಟಿಸಲಾಗಿದೆ.

ನೂತನ ನಥಿಂಗ್ ಇಯರ್ 1 ಇಯರ್‌ಫೋನ್‌ನಲ್ಲಿ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಸೌಲಭ್ಯವೂ ಇದ್ದು, ದೇಶದಲ್ಲಿ ಸ್ಪರ್ಧಾತ್ಮಕ ದರದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಈಗಾಗಲೇ ಒಪ್ಪೋ, ರಿಯಲ್‌ಮಿ ಮತ್ತು ಒನ್‌ಪ್ಲಸ್ ಬಿಡುಗಡೆ ಮಾಡಿರುವ ಇಯರ್‌ಫೋನ್ ಜತೆಗೆ ನಥಿಂಗ್ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು