ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒನ್‌ಪ್ಲಸ್‌ 8ಟಿ 5ಜಿ ಸ್ಮಾರ್ಟ್‌ಫೋನ್‌

Last Updated 21 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಒನ್‌ಪ್ಲಸ್‌ ಕಂಪನಿಯು ಪ್ರೀಮಿಯಂ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಒನ್‌ಪ್ಲಸ್‌ 8ಟಿ 5ಜಿ ಬಿಡುಗಡೆ ಮಾಡಿದೆ. ಇದರ ಬೆಲೆ 12+256ಜಿಬಿಗೆ ₹ 45,999 ಹಾಗೂ 8+128ಜಿಬಿಗೆ ₹ 42,999 ಇದೆ.

ಮುಂದಿನ ಪೀಳಿಗೆಯ ತಂತ್ರಜ್ಞಾನಗಳಾದ 120ಹರ್ಟ್ಸ್‌ ಫ್ಲ್ಯುಯೆಡ್‌ ಅಮೊಎಲ್‌ಇಡಿ ಡಿಸ್‌ಪ್ಲೇ ಮತ್ತು ವೇಗದ ಚಾರ್ಜಿಂಗ್‌ಗೆ ವಾರ್ಪ್‌ ಚಾರ್ಜ್‌ 65 ಹೊಂದಿದೆ.

ಆಂಡ್ರಾಯ್ಡ್‌ 11 ಆಧಾರಿತ ಆಕ್ಸಿಜನ್‌ 11 ಒಎಸ್‌ನಿಂದ ಕಾರ್ಯಾಚರಿಸುತ್ತದೆ. 6.55 ಇಂಚು ಡಿಸ್‌ಪ್ಲೇ, 20:9 ಆಸ್ಪೆಕ್ಟ್‌ ರೇಶಿಯೊ ಹೊಂದಿದೆ. ಬ್ಯಾಟರಿ ಸಾಮರ್ಥ್ಯ 4,500 ಎಂಎಎಚ್‌ ಇದೆ. 15 ನಿಮಿಷ ಚಾರ್ಜ್‌ ಮಾಡಿದರೆ ದಿನವಿಡೀ ಬಳಸಬಹುದು ಎಂದು ಕಂಪನಿ ತಿಳಿಸಿದೆ. 48ಎಂಪಿ ಕ್ಯಾಡ್‌ ಕ್ಯಾಮೆರಾ, 16 ಎಂಪಿ ಫ್ರಂಟ್‌ ಕ್ಯಾಮೆರಾ ಒಳಗೊಂಡಿದೆ.

‘ಒನ್‌ಪ್ಲಸ್‌ 8ನ ಯಶಸ್ಸಿನ ನಂತರ ಇದನ್ನು ಹೊರತಂದಿದ್ದು, ಶಕ್ತಿಶಾಲಿ ಹಾರ್ಡ್‌ವೇರ್‌ ಮತ್ತು ನಾಜೂಕಾಗಿ ಕೆಲಸ ಮಾಡುವ ಸಾಫ್ಟ್‌ವೇರ್‌ ಒಳಗೊಂಡಿದೆ’ ಎಂದು ಕಂಪನಿಯ ಸ್ಥಾಪಕ ಪೀಟ್‌ ಲಾವ್ ತಿಳಿಸಿದಾರೆ.

ಒನ್‌ಪ್ಲಸ್‌ ಬಡ್ಸ್‌ ಜೆಡ್‌: ವಯರ್‌ಲೆಸ್‌ ಇನ್‌ ಇಯರ್‌ ಹೆಡ್‌ಫೋನ್‌ ಬೆಲೆ ₹3,190 ಇದೆ. 20 ಗಂಟೆಗಳ ಪ್ಲೇಬ್ಯಾಕ್‌ ಸಾಮರ್ಥ್ಯ ಹೊಂದಿದೆ. ಬ್ಲುಟೂತ್‌ 5.0, ನಾಯ್ಸ್‌ ರಿಡಕ್ಷನ್‌ ಗುಣಮಟ್ಟ ಉತ್ತಮವಾಗಿದೆ. ಕಾನ್ಫರೆನ್ಸ್‌ ಕಾಲ್‌, ಮೂವಿ ನೋಡಲು ಉತ್ತಮ ಆಯ್ಕೆ ಇದಾಗಿದೆ ಎಂದು ಕಂಪನಿ ಹೇಳಿದೆ.

ಪವರ್‌ಬ್ಯಾಂಕ್‌: 10,000 ಎಂಎಎಚ್‌ ಸಾಮರ್ಥ್ಯದ ಪವರ್‌ಬ್ಯಾಂಕ್‌ 2 ಇನ್‌ 1 ಚಾರ್ಜಿಂಗ್‌ ಕೇಬಲ್‌ ವಿತ್ ಡ್ಯುಯಲ್‌ ಮೈಕ್ರೊ ಯುಎಸ್‌ಬಿ/ಟೈಪ್‌ ಸಿ ಇಂಟರ್‌ಫೇಸ್‌ ಹೊಂದಿದೆ. ಬೆಲೆ ₹ 1,299.

ಬುಲೆಟ್ಸ್‌: ಒನ್‌ಪ್ಲಸ್‌ ಬುಲೆಟ್ಸ್‌ ವಯರ್‌ಲೆಸ್‌ ಜೆಡ್‌: ಇದು ಬಾಸ್‌ ಎಡಿಷನ್‌ ಆಗಿದ್ದು, 10 ನಿಮಿಷ ಚಾರ್ಜ್‌ ಮಾಡಿದರೆ 10 ಗಂಟೆ ಪ್ಲೇಬ್ಯಾಕ್‌ ಮಾಡಬಹುದು ಎಂದು ಕಂಪನಿ ಹೇಳಿದೆ. ಬೆಲೆ ₹ 1,999.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT