ಗುರುವಾರ , ಮೇ 13, 2021
35 °C

OnePlus Nord LE: ಸದ್ದಿಲ್ಲದೇ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

OnePlus

ಅಚ್ಚರಿಯ ಘೋಷಣೆಯೆಂಬಂತೆ ಒನ್‌ಪ್ಲಸ್, ಹೊಸ ಸ್ಮಾರ್ಟ್‌ಫೋನ್ ಒಂದನ್ನು ಸದ್ದಿಲ್ಲದೆಯೇ ಗುರುವಾರ ರಾತ್ರಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಬಾರಿ ನಾರ್ಡ್ ಸರಣಿಯಲ್ಲಿ ಒನ್‌ಪ್ಲಸ್ ನಾರ್ಡ್ ಎಲ್‌ಇ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಆದರೆ ಈ ಫೋನ್‌ ವಿಶೇಷತೆಯೇನೆಂದರೆ, ಒಂದೇ ಒಂದು ಸ್ಮಾರ್ಟ್‌ಫೋನ್ ಈ ಸರಣಿಯಲ್ಲಿ ತಯಾರಾಗಿದೆ. ಎಲ್‌ಇ ಅಂದರೆ, ಲಿಟರಲಿ ಒನ್ ಓನ್ಲಿ ಎಡಿಶನ್ ಎಂದು ಒನ್‌ಪ್ಲಸ್ ಹೇಳಿದೆ.

ಒನ್‌ಪ್ಲಸ್ ಕಂಟೆಸ್ಟ್‌ನಲ್ಲಿ ಜಯಗಳಿಸುವ ಓರ್ವ ಲಕ್ಕೀ ವಿನ್ನರ್ ಈ ಸ್ಮಾರ್ಟ್‌ಫೋನ್ ಪಡೆಯಲಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರು ಪ್ರಸ್ತುತ ಬಳಸುತ್ತಿರುವ ಫೋನ್ ಚಿತ್ರವನ್ನು ಪೋಸ್ಟ್ ಮಾಡಬೇಕಿದೆ. ಜತೆಗೆ ಹೊಸ ಒನ್‌ಪ್ಲಸ್ ನಾರ್ಡ್ ಎಲ್‌ಇ ಫೋನ್ ಯಾಕೆ ಅವರಿಗೆ ಇಷ್ಟವೆಂದು ಸಂಕ್ಷಿಪ್ತವಾಗಿ ವಿವರಿಸಬೇಕಿದೆ. ಆಯ್ಕೆಯಾದ ಪೋಸ್ಟ್ ಅದೃಷ್ಠಶಾಲಿಗೆ ಹೊಸ ಒನ್‌ಪ್ಲಸ್ ಫೋನ್ ದೊರೆಯಲಿದೆ.

ಹೊಸ ಒನ್‌ಪ್ಲಸ್ ನಾರ್ಡ್ ಎಲ್‌ಇ ಸ್ಮಾರ್ಟ್‌ಫೋನ್, ಸೀಮಿತ ಆವೃತ್ತಿ ಮತ್ತು ಹಳದಿ-ನೀಲಿ ಸಂಯೋಜನೆಯ ಆಕರ್ಷಕ ಬಣ್ಣ ಹೊಂದಿದೆ, ಅದನ್ನು ಹೊರತುಪಡಿಸಿ, ಉಳಿದಂತೆ ವಿನ್ಯಾಸ ಮತ್ತು ತಾಂತ್ರಿಕ ವೈಶಿಷ್ಟ್ಯದಲ್ಲಿ ಯಾವುದೇ ಬದಲಾವಣೆಯಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು