ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ‘ಒನ್‌ಪ್ಲಸ್’ ಸರ್ವೀಸ್‌

Last Updated 9 ಮಾರ್ಚ್ 2020, 16:13 IST
ಅಕ್ಷರ ಗಾತ್ರ

ಒನ್‍ಪ್ಲಸ್ ಮೊಬೈಲ್‌ ಫೋನ್‌ ಕಂಪನಿ ಇದೇ ಮೊದಲ ಬಾರಿಗೆ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ರಿಪೇರಿ ಮಾಡುವ ಹೊಸ ಸೇವೆ ಆರಂಭಿಸಿದೆ. ಹಾರ್ಡ್‌ವೇರ್‌ ಜತೆಗೆ ಸಾಫ್ಟ್‌ವೇರ್‌ ರಿಪೇರಿಯನ್ನೂಈ ಸೇವೆ ಒಳಗೊಂಡಿದೆ.

‌ಉತ್ಪನ್ನಗಳ ಮಾರಾಟದ ನಂತರ ತನ್ನ ಗ್ರಾಹಕರಿಗೆ ಉತ್ತಮ ಮತ್ತು ವಿಶಿಷ್ಟ ಸೇವಾ ಅನುಭವ ನೀಡುವುದು ಈ ಯೋಜನೆಯ ಮೂಲ ಉದ್ದೇಶ. ಜತೆಗೆ ಪ್ರಾಡಕ್ಟ್ ಆಫರ್‌ ಜತೆಗೆ ಬ್ರ್ಯಾಂಡ್‍ ಜನಪ್ರಿಯತೆಯನ್ನು ಸಕ್ರಿಯವಾಗಿಟ್ಟುಕೊಳ್ಳುವುದು ಈ ವಿನೂತನ ಪ್ರಯತ್ನದ ಆಶಯವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬೆಂಗಳೂರು, ಮುಂಬೈ, ದೆಹಲಿ, ಹೈದ್ರಾಬಾದ್, ಚೆನ್ನೈ ಮತ್ತು ಪುಣೆಯಲ್ಲಿಆರು ತಿಂಗಳಿಂದ ಈ ಸೇವೆಯನ್ನು ಪ್ರಾಯೋಗಿಕವಾಗಿ ಜಾ‌ರಿಗೆ ತಂದಿದೆ. ಸದ್ಯದಲ್ಲೇ 1 ಮತ್ತು 2 ನೇ ದರ್ಜೆಯ ನಗರಗಳಿಗೂ ಇದನ್ನು ವಿಸ್ತರಿಸುವ ಯೋಚನೆಯಿದೆ.

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ‘ಒನ್‍ಪ್ಲಸ್ ಕೇರ್ ಆ್ಯಪ್‘ ಅನ್ನು ಗ್ರಾಹಕರು ಡೌನ್‍ಲೋಡ್ ಮಾಡಿಕೊಂಡು ಈ ಸೇವೆ ಪಡೆಯಬಹುದು. ಅಲ್ಲಿ ರಿಪೇರಿ ಮಾಡಲು ಎಂಜಿನಿಯರ್ ಭೇಟಿ ನೀಡಬೇಕಾದ ಸಮಯ ನಮೂದು ಮಾಡಬಹುದು. ಇದಲ್ಲದೇ, ಒನ್‍ಪ್ಲಸ್ ತನ್ನ ಗ್ರಾಹಕರಿಗೆ ಉಚಿತ ಪಿಕ್-ಅಪ್ ಮತ್ತು ಡ್ರಾಪ್-ಆಫ್ ಸೇವೆಯನ್ನೂ ಸಹ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT