ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಕೊ’ದಲ್ಲಿ ನಿಷೇಧಿತ ಚೀನಾ ಆ್ಯಪ್

Last Updated 10 ಜುಲೈ 2020, 6:50 IST
ಅಕ್ಷರ ಗಾತ್ರ

ನಾಲ್ಕು ದಿನಗಳ ಹಿಂದೆಯಷ್ಟೇ ಪೊಕೊ ಕಂಪನಿಯು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ ‘ಎಂ‌2 ಪ್ರೊ’ ಸ್ಮಾರ್ಟ್‌ಫೋನ್‌ನಲ್ಲಿ ನಿಷೇಧಿತಚೀನಾ ಆ್ಯಪ್‌ಗಳಿರುವ ಸಂಗತಿ ಬೆಳಕಿಗೆ ಬಂದಿದೆ.

ಭಾರತ ಸರ್ಕಾರ ಈ ಆ್ಯಪ್‌ಗಳನ್ನು ನಿಷೇಧಿಸುವ ಮೊದಲೇ ಚೀನಾದ ಕೆಲವು ಆ್ಯಪ್‌ಗಳನ್ನು ಮೊಬೈಲ್‌ನಲ್ಲಿ ಅಳವಡಿಸಲಾಗಿತ್ತು ಎಂದು ಕಂಪನಿಯು ಗ್ರಾಹಕರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಸಮಜಾಯಿಷಿ ನೀಡಿದೆ.

ಹೊಸದಾಗಿ ಬಿಡುಗಡೆಯಾದ ಮೊಬೈಲ್ ಫೀಚರ್‌ಗಳನ್ನು ಯೂಟ್ಯೂಬರ್‌ಗಳು ಚೆಕ್‌ ಮಾಡುವಾಗ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ನಿಷೇಧಿತ ಆ್ಯಪ್‌ಗಳಿರುವುದು ಬೆಳಕಿಗೆ ಬಂದಿತ್ತು. ಹೊಸದಾಗಿ ಮಾರುಕಟ್ಟೆಗೆ ಬಂದ ಗ್ಯಾಜೆಟ್‌ಗಳ ಬಗ್ಗೆ ‌ವಿಮರ್ಶೆ ಬರೆಯುವ ಯೂಟ್ಯೂಬರ್‌ಗಳು ಈ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಕಂಪನಿಯ ಗಮನ ಸೆಳೆದಿದ್ದರು.

ಪೊಕೊ ಎಂ2 ಪ್ರೊ ಕೆಲವು ಮೊಬೈಲ್‌ಗಳಲ್ಲಿ ಭಾರತ ಸರ್ಕಾರ ನಿಷೇಧಿಸಿರುವ ಚೀನಾದ ’ಹಲೊ’ ಮತ್ತು ’ಕ್ಲೀನ್’‌ ಮಾಸ್ಟರ್‌ ಆ್ಯಪ್‌ಗಳು ಹಾಗೆಯೇ ಉಳಿದುಕೊಂಡಿದ್ದು, ಈ ಅಚಾರ್ತುಯ ಕಂಪನಿಯನ್ನು ಪೇಚಿಗೆ ಸಿಲುಕಿಸಿದೆ.

‘ಗ್ರಾಹಕರ ಖಾಸಗಿತನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಗ್ರಾಹಕರ ಖಾಸಗಿತನ ಮತ್ತು ದತ್ತಾಂಶ ರಕ್ಷಣೆ ನಮ್ಮ ಮೊದಲ ಆದ್ಯತೆ. ಗ್ರಾಹಕರ ಖಾಸಗಿ ಮಾಹಿತಿ ಮತ್ತು ಡೇಟಾಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಕೂಡಲೇ ಸಾಫ್ಟ್‌ವೇರ್‌ ಅಪ್‌ಡೇಟ್‌ ಮೂಲಕ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಪೊಕೊ ಇಂಡಿಯಾ ತನ್ನ ಗ್ರಾಹಕರಿಗೆ ಭರವಸೆ ನೀಡಿದೆ. ಆ ಮೂಲಕ ವಿವಾದ ಸೃಷ್ಟಿಯಾಗದಂತೆ ನೋಡಿಕೊಳ್ಳುತ್ತಿದೆ.

ಶಿಯೊಮಿ ಕಂಪನಿಯಿಂದ ಹೊರಬಂದು ಸ್ವಂತ ಬ್ರ್ಯಾಂಡ್‌‌ ರೂಪಿಸಿಕೊಂಡಿರುವ ಪೊಕೊ ಕಂಪನಿಯು ಇದೇ ವರ್ಷ ‘ಎಕ್ಸ್‌2’ ಮತ್ತು ‘ಎಂ‌2 ಪ್ರೊ’ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. 20 ಸಾವಿರ ರೂಪಾಯಿ ಬೆಲೆಯೊಳಗೆ ದೊರೆಯುವ ಉತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಈ ಎರಡೂ ಫೋನ್‌ಗಳಿವೆ.

ಚೀನಾ ಆ್ಯಪ್‌ ಮತ್ತು ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ತೀವ್ರಗೊಂಡ ನಂತರ ಚೀನಾ ಮೊಬೈಲ್ ಕಂಪನಿಗಳು ಇಕ್ಕಟ್ಟಿಗೆ ಸಿಲುಕಿವೆ. ಭಾರತದ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಚೀನಾ ಮೂಲದಶಿಯೊಮಿ (Xiaomi) ಕಂಪನಿಯ ಮೊಬೈಲ್ ಸ್ಟೋರ್‌ಗಳಲ್ಲಿ ಈಗ ‘ಮೇಡ್ ಇನ್ ಇಂಡಿಯಾ’ ಬ್ಯಾನರ್‌ಗಳು ರಾರಾಜಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT