ಡೈಮೆನ್ಸಿಟಿ 8100 ಒಕ್ಟಾ ಕೋರ್ ಪ್ರೊಸೆಸರ್ ಜತೆಗೆ ಮಾಲಿ–G510 MC6 GPU ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಆ್ಯಂಡ್ರಾಯ್ಡ್ 12 ಆಧಾರಿತ ರಿಯಲ್‌ಮಿ ಓಎಸ್ ಹೊಸ GT Neo 3 ಸ್ಮಾರ್ಟ್‌ಫೋನ್ ವಿಶೇಷತೆಯಾಗಿದೆ ಎಂದು ಕಂಪನಿ ಹೇಳಿದೆ.
8GB ಮತ್ತು 12GB RAM ಹಾಗೂ 128 GB ಮತ್ತು 256 GB ಸ್ಟೊರೇಜ್ ಎಂಬ ಎರಡು ಆಯ್ಕೆಗಳಲ್ಲಿ ನೂತನ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ. 500mAh ಬ್ಯಾಟರಿ ಹಾಗೂ 80W ಫಾಸ್ಟ್ ಚಾರ್ಜಿಂಗ್ ಬೆಂಬಲ ನೂತನ ಸ್ಮಾರ್ಟ್‌ಫೋನ್‌ನಲ್ಲಿದೆ.
ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಜತೆಗೆ 8+2 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದರಲ್ಲಿದೆ.
ಬೆಲೆ ವಿವರ 8 GB RAM + 128 GB ಮಾದರಿಗೆ ₹36,999 ಹಾಗೂ 12 GB RAM + 256 GB ಆವೃತ್ತಿಗೆ ₹38,999 ದರ ಹೊಂದಿದೆ. ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಸ್ಟೋರ್ ಮೂಲಕ ಮೇ 4ರಿಂದ ಲಭ್ಯವಾಗಲಿದೆ.