ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಲ್‌ಮಿ ಎಕ್ಸ್‌3, ಎಕ್ಸ್‌3 ಸೂಪರ್‌ಝೂಮ್

Last Updated 28 ಜೂನ್ 2020, 15:07 IST
ಅಕ್ಷರ ಗಾತ್ರ

ಪ್ರಮುಖ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿರುವ ರಿಯಲ್‌ಮಿ, ಭಾರತದ ಮಾರುಕಟ್ಟೆಗೆ ರಿಯಲ್‌ಮಿ ಎಕ್ಸ್‌3 ಮತ್ತು ಎಕ್ಸ್‌3 ಸೂಪರ್‌ಝೂಮ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ವಿಭಾಗದಲ್ಲಿ ಟ್ರೂ ವೈರ್‌ಲೆಸ್‌ ಸ್ಟೀರಿಯೊ (ಟಿಡಬ್ಲ್ಯುಎಸ್‌), ಇಯರ್‌ಬಡ್ಸ್‌ ಮತ್ತು ಬ್ಯಾಕ್‌ಪ್ಯಾಕ್‌ ಸಹ ಬಿಡುಗಡೆ ಮಾಡಿದೆ. ಇಯರ್‌ಬಡ್ಸ್‌ ಬೆಲೆ ₹ 1,999 ಮತ್ತು ಬ್ಯಾಕ್‌ಪ್ಯಾಕ್‌ ಬೆಲೆ ₹ 1,499 ಇದೆ. ಇದೇ 30ರಿಂದ ರಿಯಲ್‌ಮಿ ಡಾಟ್‌ಕಾಂ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಆರಂಭವಾಗಲಿದೆ.

‘ಭಾರತದಲ್ಲಿ ವಹಿವಾಟು ಆರಂಭಿಸಿ ಜಗತ್ತಿನಾದ್ಯಂತ ವಿಸ್ತರಿಸಲಾಗಿದೆ. ಒಟ್ಟಾರೆ 27 ಮಾರುಕಟ್ಟೆಯಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯ ಇವೆ. 2018ರಲ್ಲಿ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿ ಪ್ರಯಾಣ ಆರಂಭಿಸಿ, ಇದೀಗ ಈ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ತಂತ್ರಜ್ಞಾನ ಕ್ಷೇತ್ರದಲ್ಲಿ ಟ್ರೆಂಡ್‌ ಸೆಟರ್‌ ಬ್ರ್ಯಾಂಡ್‌ ಆಗಿ ಹೊರಹೊಮ್ಮಿದ್ದೇವೆ’ ಎಂದು ರಿಯಲ್‌ಮಿ ಇಂಡಿಯಾದ ಸಿಇಒ ಮಾಧವ್‌ ಸೇಠ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT