ಶನಿವಾರ, ಮೇ 15, 2021
26 °C

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ51 ಬಿಡುಗಡೆ: 48 ಎಂಪಿ ಕ್ಯಾಮೆರಾ; ಬೆಲೆ ₹ 23,999 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸ್ಯಾಮ್‌ಸಂಗ್‌ ಎ ಸೀರೀಸ್‌ನ ಹೊಸ ಫೋನ್‌ ಭಾರತದಲ್ಲಿ ಬಿಡುಗಡೆ ಮಾಡಿದೆ. 'ಗ್ಯಾಲಕ್ಸಿ ಎ51' ಫೋನ್‌ನಲ್ಲಿ ಭಾರತೀಯ ಗ್ರಾಹಕರ ಗಮನ ಸೆಳೆಯುವಂತಹ ವಿಶೇಷ ಆಯ್ಕೆಗಳನ್ನು ಕ್ಯಾಮೆರಾ ಬಳಕೆಯಲ್ಲಿ ನೀಡಲಾಗಿದೆ. 

ಇನ್ಫಿನಿಟಿ ಒ–ಡಿಸ್‌ಪ್ಲೇ, ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ ಎ51 ಕಳೆದ ತಿಂಗಳು ವಿಯೆಟ್ನಾಂನಲ್ಲಿ ಬಿಡುಗಡೆಯಾಗಿತ್ತು. ಈಗಾಗಲೇ ದೇಶದಲ್ಲಿ ಗ್ಯಾಲಕ್ಸಿ ಎ50 ಮತ್ತು ಎ50ಎಸ್‌ ಸ್ಮಾರ್ಟ್‌ಫೋನ್‌ ಪ್ರಿಯರ ಗಮನ ಸೆಳೆದಿದ್ದು, ಅವುಗಳ ಅಪ್‌ಗ್ರೇಡ್‌ ಅವತರಣಿಕೆಯಾಗಿ ಎ51 ಹೊರಬಂದಿದೆ. 

6 ಜಿಬಿ ರ್‍ಯಾಮ್‌ ಮತ್ತು 128 ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಫೋನ್‌ಗೆ ಆರಂಭಿಕ ₹ 23,999 ಬೆಲೆ ನಿಗದಿ ಪಡಿಸಲಾಗಿದೆ. ನೀಲಿ, ಬಿಳಿ ಹಾಗೂ ಬ್ಲ್ಯಾಕ್‌ ಪ್ರಿಸಮ್‌ ಕ್ರಷ್‌ ಬಣ್ಣಗಳಲ್ಲಿ ಲಭ್ಯವಿದ್ದು, ಜನವರಿ 31ರಿಂದ ಖರೀದಿಗೆ ಸಿಗಲಿದೆ. 

ಅಮೆಜಾನ್‌ ಪೇ ಮೂಲಕ ಹಣ ಪಾವತಿಸಿದರೆ ಶೇ 5ರಷ್ಟು ಕ್ಯಾಷ್‌ ಬ್ಯಾಕ್‌ ಹಾಗೂ ಒಂದು ಬಾರಿ ಸ್ಕ್ರೀನ್‌ ರೀಪ್ಲೇಸ್‌ಮೆಂಟ್‌ ಕೊಡುಗೆಯನ್ನು ನೀಡಿದೆ. 

ಗ್ಯಾಲಕ್ಸಿ ಎ51ನಲ್ಲಿ ಏನೆಲ್ಲ ಇದೆ?

* ಎರಡು ಸಿಮ್‌ (ನ್ಯಾನೊ) ಬಳಕೆಗೆ ಅವಕಾಶ

* ಆ್ಯಂಡ್ರಾಯ್ಡ್‌ 10 ಆಪರೇಟಿಂಗ್‌ ಸಿಸ್ಟಮ್‌

* 6.5 ಇಂಚು ಸೂಪರ್‌ ಅಮೊಲೆಡ್‌ ಫುಲ್‌ ಎಚ್‌ಡಿ+ ಇನ್ಫಿನಿಟಿ–ಒ ಡಿಸ್‌ಪ್ಲೇ

* ಡಿಸ್‌ಪ್ಲೇಯಲ್ಲೇ ಪಿಂಗರ್‌ಪ್ರಿಂಟ್‌ ಸೆನ್ಸರ್‌

* ಆಕ್ಟಾಕೋರ್‌ ಎಕ್ಸಿನೋಸ್‌ 9611 ಪ್ರೊಸೆಸರ್‌

* 6 ಜಿಬಿ ರ್‍ಯಾಮ್‌ / 8 ಜಿಬಿ ರ್‍ಯಾಮ್‌

* 48 ಮೆಗಾ ಪಿಕ್ಸೆಲ್‌ ಪ್ರೈಮರಿ ಕ್ಯಾಮೆರಾ, 12 ಎಂಪಿ ಅಲ್ಟ್ರಾ ವೈಡ್‌ ಆ್ಯಂಗಲ್‌, 5 ಎಂಪಿ ಮ್ಯಾಕ್ರೋ, 5 ಎಂಪಿ ಡೆಪ್ತ್‌ ಸೆನ್ಸರ್‌ 

* 32 ಎಂಪಿ ಸೆಲ್ಫಿ ಕ್ಯಾಮೆರಾ

* 128 ಜಿಬಿ ಸಂಗ್ರಹ ಸಾಮರ್ಥ್ಯ (512 ಜಿಬಿ ವರೆಗೂ ಸಂಗ್ರಹ ವಿಸ್ತರಿಸುವ ಸಾಮರ್ಥ್ಯ)

* 4,000 ಎಂಎಎಚ್‌ (19 ಗಂಟೆ ಬ್ಯಾಟರಿ ಚಾರ್ಜ್‌ ಉಳಿಯುತ್ತೆ)

* ಯುಎಸ್‌ಬಿ ಟೈಪ್‌–ಸಿ ಪೋರ್ಟ್‌,  15 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು