ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Samsung Galaxy F54 ಸ್ಮಾರ್ಟ್‌ಫೋನ್‌ ಈ ಮಾಸಂತ್ಯದಲ್ಲಿ ಬಿಡುಗಡೆ: ಫೀಚರ್ಸ್‌ ಏನೆಲ್ಲಾ?

Published 18 ಮೇ 2023, 14:20 IST
Last Updated 18 ಮೇ 2023, 14:20 IST
ಅಕ್ಷರ ಗಾತ್ರ

ನವದೆಹಲಿ: ಮುಂಚೂಣಿ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಸ್ಯಾಮ್‌ಸಂಗ್‌ ತನ್ನ ಪ್ಯೀಮಿಯಂ ಗ್ಯಾಲಕ್ಸಿ ಎಫ್‌ ಸರಣಿಯ ಗ್ಯಾಲಕ್ಸಿ F54 ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ತಿಂಗಳಾಂತ್ಯದಲ್ಲಿ ಫೋನ್‌ ಮಾರುಕಟ್ಟೆಗೆ ಬರಲಿದೆ.

ಇದರಲ್ಲಿ super-steady OIS ಇರಲಿದ್ದು, ಅನೂಹ್ಯ ಫೋಟೊಗ್ರಫಿ ಅನುಭವಕ್ಕೆ Astrolapse ಫೀಚರ್ ಇರಲಿದೆ. ಮಂದ ಬೆಳಕಿನಲ್ಲೂ ಗುಣಮಟ್ಟದ ಚಿತ್ರ ತೆಗೆಯಲು ಸಾಧ್ಯವಾಗುವಂತ ನೈಟೋಗ್ರಫಿ ಫೀಚರ್‌ ಕೂಡ ಇರಲಿದೆ.

5ಜಿ ಸ್ಮಾರ್ಟ್‌ಫೋನ್‌ ಇದಾಗಿದ್ದು, ಸೂಪರ್ AMOLED+ ಡಿಸ್‌ಪ್ಲೆ ಇದೆ. ಆ್ಯಂಡ್ರಾಯ್ಡ್ 13 OS ಆಪರೇಟಿಂಗ್ ಸಿಸ್ಟಂ ಇರಲಿದೆ.

6.6 ಇಂಚಿನ ಫುಲ್‌ ಎಚ್‌ಡಿ+ ಡಿಸ್ಪ್‌ಪ್ಲೇ ಇರುವುದರಿಂದ ಉತ್ತಮ ವೀಕ್ಷಣೆ ಅನುಭವ ಪಡೆಯಬಹುದಾಗಿದೆ. ಡಿಸ್‌ಪ್ಲೆಗೆ ಗೊರಿಲ್ಲಾ ಗ್ಲಾಸ್‌ 5 ರಕ್ಷಣೆ ಇದೆ.

ಯುವಸಮೂಹವನ್ನು ಗುರಿಯಾಗಿಸಿಕೊಂಡು ಸ್ಯಾಮ್‌ಸಂಗ್‌ ಎಫ್‌ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು 2020ರಲ್ಲಿ ಮಾರುಕಟ್ಟೆಗೆ ‍‍ಪರಿಚಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT