ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎ7 ಬಿಡುಗಡೆ: 10.4 ಇಂಚು ಡಿಸ್‌ಪ್ಲೇ

Last Updated 29 ಸೆಪ್ಟೆಂಬರ್ 2020, 4:05 IST
ಅಕ್ಷರ ಗಾತ್ರ

ಉತ್ಕೃಷ್ಟ ಸ್ಕ್ರೀನ್‌ ಹಾಗೂ ಅಧಿಕ ಸಾಮರ್ಥ್ಯದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ ಎ7 ಭಾರತದಲ್ಲಿ ಬಿಡುಗಡೆಯಾಗಿದೆ.

3ಜಿಬಿ ರ್‍ಯಾಮ್‌ ಮತ್ತು 32ಜಿಬಿ ಸಂಗ್ರಹ ಸಾಮರ್ಥ್ಯವಿದ್ದು, ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ 1ಟಿಬಿ ವರೆಗೂ ಸಂಗ್ರಹ ವಿಸ್ತರಿಸಿಕೊಳ್ಳಬಹುದು. 10.4 ಇಂಚು WUXGA+ಟಿಎಫ್‌ಟಿ ಸ್ಕ್ರೀನ್‌ ಈ ಟ್ಯಾಬ್‌ನ ಪ್ರಮುಖ ಆಕರ್ಷಣೆಗಳಲ್ಲೊಂದು. ಇದು 2000×1200 ಪಿಕ್ಸೆಲ್‌ ರೆಸಲ್ಯೂಷನ್‌ ಹೊಂದಿದೆ.

ವೈಫೈ ಮೂಲಕ ಮಾತ್ರ ಅಂತರ್ಜಾಲ ಸಂಪರ್ಕ ಸಾಧಿಸಬಹುದಾದ ಮಾದರಿ ಹಾಗೂ ಸಿಮ್‌ ಕಾರ್ಡ್‌ ಹಾಕಿ ಡೇಟಾ ಬಳಕೆ ಮಾಡಬಹುದಾದ ಮಾದರಿಯಲ್ಲಿ ಹೊಸ ಟ್ಯಾಬ್‌ ಸಿಗಲಿದ್ದು, ಬೆಲೆ ಕ್ರಮವಾಗಿ ₹17,999 ಹಾಗೂ ₹21,999 ನಿಗದಿಯಾಗಿದೆ. ಡಾರ್ಕ್‌ ಗ್ರೇ, ಸಿಲ್ವರ್‌ ಹಾಗೂ ಗೋಲ್ಡ್‌ ಬಣ್ಣಗಳಲ್ಲಿ ಗ್ಯಾಲಕ್ಸಿ ಟ್ಯಾಬ್‌ ಎ7 ಲಭ್ಯವಿದೆ.

ಟ್ಯಾಬ್‌ 7ಮಿ.ಮೀ ದಪ್ಪ ಹಾಗೂ 477 ಗ್ರಾಂ ತೂಕವಿದ್ದು, ಬಳಕೆಗೆ ಹಗುವೆನಿಸುತ್ತದೆ. ಕ್ವಾಡ್‌ ಸ್ಪೀಕರ್, ಡಾಲ್ಬಿ ಆಟಮ್ಸ್‌ ಸರೌಂಡ್‌ ಸೌಂಡ್‌ನಿಂದ ಸಿನಿಮಾ ವೀಕ್ಷಣೆಯಲ್ಲಿ ಉತ್ತಮ ಅನುಭವ ಸಿಗುತ್ತದೆ. ಕ್ವಾಲ್‌ಕಾಮ್‌ ಸ್ಯಾಪ್‌ಡ್ರ್ಯಾಗನ್‌ 662 ಚಿಪ್‌ಸೆಟ್‌ (ಆಕ್ಟಾ–ಕೋರ್‌ ಪ್ರೊಸೆಸರ್‌) ಹಾಗೂ 7,040ಎಂಎಎಚ್‌ ಬ್ಯಾಟರಿ ಒಳಗೊಂಡಿದೆ.

ಹಿಂಬದಿಯಲ್ಲಿ 8ಎಂಪಿ ಕ್ಯಾಮೆರಾ ಹಾಗೂ ಮುಂದೆ 5ಎಂಪಿ ಕ್ಯಾಮೆರಾ ನೀಡಲಾಗಿದೆ.

ಸ್ಯಾಮ್‌ಸಂಗ್‌ ವೆಬ್‌ಸೈಟ್‌, ಆಯ್ದ ರಿಟೇಲ್‌ ಮಳಿಗೆಗಳು ಹಾಗೂ ಆನ್‌ಲೈನ್‌ ಪೋರ್ಟಲ್‌ಗಳಲ್ಲಿ ಮುಂಚಿತವಾಗಿ ಬುಕ್‌ ಮಾಡಬಹುದಾಗಿದೆ. ಪ್ರೀ ಬುಕ್‌ ಮಾಡಿದರೆ ಕೀಬೋರ್ಡ್‌ ಕವರ್‌ ವಿಶೇಷ ಬೆಲೆಯಲ್ಲಿ ಸಿಗಲಿದೆ ಹಾಗೂ ಕೆಲವು ಬ್ಯಾಂಕ್‌ಗಳ ಮೂಲಕ ಪಾವತಿಗೆ ₹2,000ರ ವರೆಗೂ ಕ್ಯಾಷ್‌ಬ್ಯಾಕ್‌ ಕೊಡುಗೆ ಪ್ರಕಟಿಸಿದೆ.

ಆಟೊ ಹಾಟ್‌ಸ್ಪಾಟ್‌, ಕ್ವಿಕ್‌ ಶೇರ್‌ ಹಾಗೂ ನಾಕ್ಸ್‌ ಸೆಕ್ಯುರಿಟಿಯಂತಹ ಹಲವು ಸೌಲಭ್ಯಗಳಿವೆ. ಟ್ಯಾಬ್‌ ಬಳಕೆದಾರರಿಗೆ ಎರಡು ತಿಂಗಳವರೆಗೂ ಯುಟ್ಯೂಬ್‌ ಪ್ರೀಮಿಯಂ ಬಳಕೆ ಉಚಿತವಾಗಿ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT