ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗ್ಯಾಲಕ್ಸಿ ಎಂ' ಸರಣಿಯ ಎರಡು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್

ಅಕ್ಷರ ಗಾತ್ರ

ಗುರುಗ್ರಾಮ: ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಉಪಕರಣಗಳ ಬ್ರ್ಯಾಂಡ್‌ ಸ್ಯಾಮ್‌ಸಂಗ್‌, ಜುಲೈ 14ರಂದು 'ಗ್ಯಾಲಕ್ಸಿ ಎಂ 13 5ಜಿ' (Galaxy M13 5G) ಮತ್ತು 'ಗ್ಯಾಲಕ್ಸಿ ಎಂ 13' (Galaxy M13) ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಸ್ಯಾಮ್‌ಸಂಗ್‌ನ 'ಗ್ಯಾಲಕ್ಸಿ ಎಂ' (Galaxy M) ಸರಣಿಯು ದೇಶದಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರಾಂಡ್‌ ಆಗಿದೆ. ಕೌಂಟರ್‌ಪಾಯಿಂಟ್‌ ಅಧ್ಯಯನದ ಪ್ರಕಾರ, 2019ರಲ್ಲಿ ಮಾರುಕಟ್ಟಿಗೆ ಬಂದ ಈ ಸರಣಿಯ ಸುಮಾರು 4.2 ಕೋಟಿ ಫೋನ್‌ಗಳನ್ನು ದೇಶದಲ್ಲಿ ಮಾರಾಟ ಮಾಡಲಾಗಿದೆ. ಈ ಸರಣಿಗೆ ಇದೀಗ ಸೇರ್ಪಡೆಯಾಗಿರುವ ಹೊಸ ಉತ್ಪನ್ನಗಳು ಸಾಟಿಯಿಲ್ಲದ ಮತ್ತಷ್ಟು ಅತ್ಯುತ್ತಮಅನುಭವ ನೀಡಲು ಸಜ್ಜಾಗಿವೆ.

'Galaxy M13 5G' ಫೋನ್‌ನಲ್ಲಿ ಡೈಮೆನ್ಸಿಟಿ 700 ಪ್ರೊಸೆಸರ್‌ ಅಳವಡಿಸಲಾಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. 12GB RAM ನೀಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಸ್ಟೋರೇಜ್‌ ಅನ್ನು 1TB ವರೆಗೆ ವಿಸ್ತರಿಸಬಹುದಾಗಿದೆ. ಇದರ 11 5G ಬ್ಯಾಂಡ್‌ಗಳ ಬೆಂಬಲದೊಂದಿಗೆ ಎಲ್ಲಿಯೂ, ಯಾವಾಗ ಬೇಕಾದರೂ ಸಂಪರ್ಕ ಸಾಧಿಸಬಹುದಾಗಿದೆ. ಕ್ರಾಂತಿಕಾರಿ 5ಜಿ ನೆಟ್‌ವರ್ಕ್‌, ವೇಗದ ಡೌನ್‌ಲೋಡ್ ಮತ್ತು ವಿಡಿಯೊ ಕಾನ್ಫರೆನ್ಸ್‌ನಂತಹ ಅತ್ಯುತ್ತಮ ಸೇವೆಗಳನ್ನು ಒದಗಿಸಲಿದೆ.

Galaxy M13 ಸರಣಿಯು ಸೆಗ್ಮೆಂಟ್‌–ಫಸ್ಟ್‌ ಆಟೊ ಡೇಟಾ ಸ್ವಿಚಿಂಗ್‌ ವೈಶಿಷ್ಟ್ಯದೊಂದಿಗೆ ಲಭ್ಯವಾಗಲಿದೆ. ಇದರಿಂದಾಗಿ ಮೊಬೈಲ್‌ನಲ್ಲಿನ ಪ್ರೈಮರಿ ಸಿಮ್‌ ನೆಟ್‌ವರ್ಕ್‌ ಇಲ್ಲದ ಪ್ರದೇಶದಲ್ಲಿದ್ದರೂ, ಗ್ರಾಹಕರು ಸೆಕೆಂಡರಿ ಸಿಮ್‌ನ ಡೇಟಾ ಬಳಸಿಕೊಂಡು ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತದೆ.

Galaxy M13 5G, 6.5ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದರೆ,Galaxy M136.6 ಇಂಚಿನಎಚ್‌ಡಿ+ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ.ಈ ಎರಡೂ ಮಾದರಿಗಳು6000mAh ಬ್ಯಾಟರಿ ಸಾಮರ್ಥ್ಯ ಹಾಗೂ 15W ಅಡಾಪ್ಟಿವ್ ಫಾಸ್ಟ್ ಚಾರ್ಜರ್‌ ಸೌಲಭ್ಯ ಹೊಂದಿವೆ.50MPಪ್ರೈಮರಿ ಕ್ಯಾಮೆರಾ ಮತ್ತು 5MP ಅಲ್ಟ್ರಾ ವೈಡ್‌ ಲೆನ್ಸ್‌ ಹೊಂದಿದ್ದು, ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ.

ಆಕರ್ಷಕ ವಿನ್ಯಾಸ ಹೊಂದಿರುವ Galaxy M13 ಮಿಡ್‌ನೈಟ್‌ ಬ್ಲೂ, ಅಕ್ವಾ ಗ್ರೀನ್‌ ಮತ್ತು ಸ್ಟಾರ್‌ಡಸ್ಟ್‌ ಬ್ರೌನ್‌ ಬಣ್ಣಗಳಲ್ಲಿ ಲಭ್ಯವಿದೆ.

4GB+64GB ಸಾಮರ್ಥ್ಯದGalaxy M13 5G ಫೋನ್‌ ಅನ್ನು ₹13,999 ಕ್ಕೆ ಖರೀದಿಸಬಹುದಾಗಿದೆ. 6GB+128GB ಆವೃತ್ತಿಗೆ ₹15,999 ದರವಿದೆ.Galaxy M13 ಪೋನ್‌ನ4GB+64GB ಆವೃತ್ತಿಯು ₹11,999 ಮತ್ತು6GB+128GB ಆವೃತ್ತಿಯು ₹13,999ಕ್ಕೆ ದೊರೆಯುತ್ತದೆ.

ಈ ಫೋನ್‌ಗಳನ್ನು ಸ್ಯಾಮ್‌ಸಂಗ್‌.ಕಾಂ, ಅಮೆಜಾನ್‌ ಮತ್ತು ಆಯ್ದ ಸ್ಟೋರ್‌ಗಳಲ್ಲಿ ಜುಲೈ 23ರಿಂದ ಖರೀದಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT