ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Samsung Galaxy A05 ಬಿಡುಗಡೆ: ಬೆಲೆ? ವೈಶಿಷ್ಟ್ಯತೆಗಳೇನು?

Published 28 ನವೆಂಬರ್ 2023, 7:38 IST
Last Updated 28 ನವೆಂಬರ್ 2023, 7:38 IST
ಅಕ್ಷರ ಗಾತ್ರ

ಗುರ್‌ಗಾಂವ್‌: ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಇಂದು ತನ್ನ ಜನಪ್ರಿಯ ಗ್ಯಾಲಕ್ಸಿ A ಸರಣಿಗೆ ಹೊಸ ಸೇರ್ಪಡೆಯಾದ Galaxy A05 ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. 6.7 ಇಂಚಿನ HD+ ಡಿಸ್ಪ್ಲೆ, 5000 mAh ಬ್ಯಾಟರಿ ಮತ್ತು 50MP ವೈಡ್ ಆಂಗಲ್ ಕ್ಯಾಮೆರಾ ಹೊಂದಿರುವ ಇದು ಉತ್ತಮ ವೀಕ್ಷಣಾ ಅನುಭವ ಮತ್ತು ಛಾಯಾಗ್ರಹಣ ಸಾಮರ್ಥ್ಯಗಳನ್ನು ಗ್ರಾಹಕರಿಗೆ ಒದಗಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಇದು ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ.

‘Galaxy A05ಯು ಶಕ್ತಿಯುತ ತಂತ್ರಜ್ಞಾನ ಹೊಂದಿರುವ ಮತ್ತು ಕೈಗೆಟುಕುವ ಬೆಲೆಯ ಬೆಲೆಯಲ್ಲಿ ಸಿಗಲಿದೆ. ವಿಭಿನ್ನ ಆವಿಷ್ಕಾರಕ್ಕೆ ಮೀಸಲಾಗಿರುವ ಈ ಸಾಧನವು ಬೃಹತ್ 5000 mAh ಬ್ಯಾಟರಿ, ಪ್ರಭಾವಶಾಲಿ 6.7 ಇಂಚಿನ HD+ ಡಿಸ್ಪ್ಲೆ, ಮೀಡಿಯಾ ಟೆಕ್ G85 ಪ್ರೊಸೆಸರ್ ಮತ್ತು ಐಕಾನಿಕ್ ಗ್ಯಾಲಕ್ಸಿ ಸಿಗ್ನೇಚರ್ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ’ ಎಂದು ಅಕ್ಷಯ್ ಎಸ್ ರಾವ್ ಹೇಳಿದ್ದಾರೆ.

ವೈಶಿಷ್ಟ್ಯಗಳೇನು?

  • Galaxy A05 ಮೀಡಿಯಾ ಟೆಕ್ G85 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. MediaTek G85 ಪ್ರೊಸೆಸರ್ ವರ್ಧಿತ ಶಕ್ತಿ ಮತ್ತು ವೇಗವನ್ನು ಒದಗಿಸುತ್ತದೆ, ಪರಿಣಾಮಕಾರಿ ಬಹು-ಕಾರ್ಯವನ್ನು ಸಕ್ರಿಯಗೊಳಿಸುತ್ತದೆ, 4GB+64 GB ಮತ್ತು 6GB+128GB. RAM ಹೊಂದಿದ್ದು, 6 GB ವರೆಗಿನ ಹೆಚ್ಚುವರಿ ವರ್ಚುವಲ್ RAM ಅನ್ನು ಒದಗಿಸುತ್ತದೆ. 

  • Galaxy A05  ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ 50MP ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿದೆ. 2MP ಡೆಪ್ತ್-ಸೆನ್ಸಿಂಗ್ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮರಾ ಹೊಂದಿದೆ.

  • Galaxy A05ಯು 5000 mAh ಬ್ಯಾಟರಿಯೊಂದಿಗೆ ಬರುತ್ತದೆ ಅದು ಸುಲಭವಾಗಿ ಎರಡು ದಿನಗಳವರೆಗೆ ಇರುತ್ತದೆ.

  • ಫೇಸ್ ಅನ್‌ಲಾಕ್ ವೈಶಿಷ್ಟ್ಯದೊಂದಿಗೆ Galaxy A05 ನಾಲ್ಕು ವರ್ಷಗಳ ಸೆಕ್ಯುರಿಟಿ ಅಪ್ಡೇಟ್‌ ಮತ್ತು 2 ಜನರೇಶನ್ OS ಅಪ್ಡೇಟ್‌ಅನ್ನು ಹೊಂದಿದೆ.

ಬೆಲೆ ಎಷ್ಟು?

Galaxy A05 ಫೋನ್‌ 6GB + 128 GB ಪ್ರಕಾರಗಳಲ್ಲಿ  ₹12,499 ಮತ್ತು 4GB + 64 GB ಪ್ರಕಾರಗಳಲ್ಲಿ  ₹9,999 ಬೆಲೆಯದ್ದಾಗಿದೆ. ಮಾರುಟಕಟೆಯಲ್ಲಿನ Samsung ಶಾಪ್‌ಗಳಲ್ಲಿ, Samsung.com ಮತ್ತು ಇತರ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಲಭ್ಯವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT