ಕಳೆದ ಒಂದೂವರೆ ವರ್ಷದಿಂದ ಜನರೇಟಿವ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ನಲ್ಲಿ ಅಪಾರ ಬೆಳವಣಿಗೆಗಳು ಉಂಟಾಗಿವೆ. ಹೊಸ ಹೊಸ ಕಂಪೆನಿಗಳು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಅಭಿವೃದ್ಧಿಪಡಿಸುವ ಹಲವು ಹಂತಗಳಲ್ಲಿ ತೊಡಗಿಸಿಕೊಂಡಿವೆ. ಓಪನ್ ಎ.ಐ. ತನ್ನ ಮೊದಲ ಮಾದರಿಯನ್ನು 2023ರ ನವೆಂಬರ್ನಲ್ಲಿ ಬಿಡುಗಡೆ ಮಾಡಿದ ನಂತರ ಬಹಳ ಬೆಳವಣಿಗೆಗಳು ಘಟಿಸಿದವು. ಗೂಗಲ್ ತನ್ನ ‘ಜೆನ್ಎಐ’ ಅನ್ನು ಬಿಡುಗಡೆ ಮಾಡಿ, ‘ಓಪನ್ಎಐ’ಗೆ ಸ್ಫರ್ಧೆ ಒಡ್ಡಿತು. ಅದರ ನಂತರ ಕೆಲವು ತಿಂಗಳುಗಳ ಹಿಂದೆ ಚೀನಾದ ಹೈ ಫ್ಲೈಯರ್ ಕಂಪೆನಿಯ ಮಾಲೀಕತ್ವದಲ್ಲಿ ಡೀಪ್ಸೀಕ್ ಅತಿ ಕಡಿಮೆ ವೆಚ್ಚದಲ್ಲಿ ತನ್ನದೇ ಮಾದರಿಯ ಜೆನ್ಎಐ ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ಕ್ರಾಂತಿಯನ್ನೇ ಉಂಟುಮಾಡಿತು.

ಆದರೆ, ಈ ಎಲ್ಲ ಬೆಳವಣಿಗೆಗಳಾಚೆಗೆ ಇದರ ನೈಜ ಮತ್ತು ವಾಣಿಜ್ಯ ಬಳಕೆಯಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಕಾಣಿಸುತ್ತಿಲ್ಲ. ಅಂದರೆ, ಒಂದು ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಬಿಡುಗಡೆಯಾದಾಗ ಅಥವಾ ನಂತರದಲ್ಲಿ ಅದನ್ನು ವಿವಿಧ ರೀತಿಯಲ್ಲಿ ಉಚಿತವಾಗಿ, ಸಣ್ಣ ಮಟ್ಟದಲ್ಲಿ ಬಳಕೆ ಮಾಡುತ್ತಿದ್ದಾರೆಯೇ ಹೊರತು ಅದು ವಾಸ್ತವಿಕ ಬಳಕೆಗೆ ಬಂದಿದ್ದು ಕಡಿಮೆ.

ಅಲ್ಲದೆ, ಇನ್ನೊಂದು ಸ್ತರದಲ್ಲಿ ಇದರ ಅತಿಯಾದ ಬಳಕೆಯೂ ನಡೆಯುತ್ತಿದೆ! ಕಳೆದ ಆರೆಂಟು ತಿಂಗಳಲ್ಲಿ ಹತ್ತಾರು ಸ್ಟಾರ್ಟಪ್ ಕಂಪೆನಿಗಳು ಸೇಲ್ಸ್ ಡೆವಲಪ್ಮೆಂಟ್ ಪ್ರತಿನಿಧಿಗಳಿಗೆ ಬದಲಿಯಾಗಿ ‘ಎಐ ಚಾಟ್ಬಾಟ್’ಗಳನ್ನು ಅಭಿವೃದ್ಧಿಪಡಿಸಿವೆ. ಇವು ದೊಡ್ಡ ದೊಡ್ಡ ಕಂಪೆನಿಗಳಿಗೆ ‘ನಿಮ್ಮ ಮಾರಾಟ ಪ್ರತಿನಿಧಿಗಳ ಬದಲಿಗೆ ಈ ಎಐ ಪ್ರತಿನಿಧಿಗಳನ್ನು ಬಳಸಿ. ಕಡಿಮೆ ಖರ್ಚಿನಲ್ಲಿ ಇವು ಮನುಷ್ಯರಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ’ ಎಂದು ಪ್ರಚಾರ ಮಾಡುತ್ತಿವೆ. ಇವರ ಪ್ರಚಾರದ ಸಾಮಗ್ರಿಗಳು, ವೀಡಿಯೊಗಳು ಎಷ್ಟು ಹೌದೆನ್ನಿಸುವಂತೆ ಇವೆಯೆಂದರೆ, ಕಂಪೆನಿಗಳು ನಂಬಿ ಈ ಎಐ ರೆಪ್ರೆಸೆಂಟೇಟಿವ್ಗಳನ್ನು ಖರೀದಿಸುತ್ತಿವೆ. ಈಗ ಎದ್ದಿರುವ ಎಐ ಅಲೆಯೂ ಅವರನ್ನು ಇನ್ನಷ್ಟು ಮನವೊಲಿಸುತ್ತಿವೆ.

ಆದರೆ, ಈ ಎ. ಪ್ರತಿನಿಧಿಗಳನ್ನು ಬಳಸಲು ತೊಡಗಿದ ಕೆಲವೇ ವಾರಗಳಲ್ಲಿ ಕಂಪೆನಿಗಳಿಗೆ ಇವು ಮಾನವಷ್ಟು ಪರಿಣಾಮಕಾರಿಯಲ್ಲ ಎಂಬುದು ತಿಳಿಯುತ್ತಿದೆ. ಹೀಗಾಗಿ, ಮತ್ತದೇ ಸೇಲ್ಸ್ ಟೀಮ್ಗೇ ಮೊರೆ ಹೋಗುತ್ತಿವೆ.

ಈ ಬಗ್ಗೆ ಉದ್ಯಮ ವಲಯದಲ್ಲಿ ಭಾರಿ ಚರ್ಚೆಯೂ ನಡೆದಿದೆ. ಕೆಲವರು ಈ ಎಐ ‘ಎಸ್ಡಿಆರ್’ಗೆ ಎಂದರೆ, ‘ಎಐ ಸೇಲ್ಸ್ ಡೆವಲಪ್ಮೆಂಟ್ ರೆಪ್ರೆಸೆಂಟೇಟಿವ್’ಗಳಿಗೇ ಎಲ್ಲವನ್ನೂ ಹಸ್ತಾಂತರಿಸಿ, ಇಡೀ ಮಾರಾಟ ವಿಭಾಗವನ್ನೇ ಬರಖಾಸ್ತುಗೊಳಿಸುವುದರ ಬದಲಿಗೆ, ಎಐ ಅನ್ನು ಕೆಲವು ಕಡೆಗಳಲ್ಲಿ ಬಳಸಿಕೊಂಡು ಉತ್ತಮವಾಗಿ ಸಂಶೋಧನೆ ನಡೆಸಿ, ಸಂಭಾವ್ಯ ಗ್ರಾಹಕರನ್ನು ಗುರುತಿಸಿ ಅವರ ಜೊತೆಗೆ ಮಾತುಕತೆ ನಡೆಸುವುದಕ್ಕೆ ಮನುಷ್ಯರನ್ನೇ ನಿಯೋಜಿಸುವುದು ಮತ್ತು ಮನುಷ್ಯರೇ ಮಾರಾಟದ ಅಂತಿಮ ನಿರ್ಧಾರವನ್ನು ಮಾಡುವುದು ಉತ್ತಮ ಎಂಬ ನಿಲುವಿಗೂ ಬಂದಿದ್ದಾರೆ.

ಸೇಲ್ಸ್ ಪಿಚ್ನಲ್ಲಿ ಮನುಷ್ಯರನ್ನೇ ಬಳಸಿಕೊಂಡು, ಡೇಟಾ ವಿಶ್ಲೇಷಣೆಯಲ್ಲಿ ಎಐ ಬಾಟ್ಗಳನ್ನು ಬಳಸಿಕೊಳ್ಳುವುದು ಹೆಚ್ಚು ಉತ್ತಮ ಎಂದು ಬಹಳ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ, ಈಗ ತಲೆ ಎತ್ತಿರುವ ಹತ್ತಾರು ಎಐ ಸ್ಟಾರ್ಟಪ್ಗಳು ಎಐ ಎಸ್ಡಿಆರ್ಗಳನ್ನು ಮಾರಾಟ ಮಾಡುತ್ತಿದ್ದರೂ, ಇನ್ನು ಕೆಲವೇ ವರ್ಷಗಳಲ್ಲಿ ಅವು ಬಾಗಿಲು ಹಾಕಿಕೊಂಡು ಹೋಗುವ ಸಾಧ್ಯತೆಯೇ ಹೆಚ್ಚಿದೆ. ಏಕೆಂದರೆ, ಮಾನವನಿಗೆ ಸಂಪೂರ್ಣವಾಗಿ ಪರ್ಯಾಯವಾಗದೇ ಇರುವುದರಿಂದ ಆರಂಭದಲ್ಲಿ ಎಐ ಅಲೆಯಲ್ಲಿ ಕಂಪನಿಗಳು ಇದನ್ನು ಬಳಸಿದರೂ, ಅದರಿಂದ ಭಾರಿ ಪ್ರಯೋಜನವಾಗದು ಎಂದು ಕಂಡುಬರುತ್ತಿದ್ದಂತೆ ಈ ಎಐ ಎಸ್ಡಿಆರ್ಗಳನ್ನು ಬಿಟ್ಟು ಅಥವಾ ಭಾಗಶಃ ಅವುಗಳನ್ನು ಬಳಸಿಕೊಂಡು ಪ್ರಮುಖ ಸೇಲ್ಸ್ ನಿರ್ಧಾರಗಳಲ್ಲಿ ಮನುಷ್ಯರನ್ನೇ ಬಳಸಿಕೊಳ್ಳಲಿವೆ.

ಏನಿದು ಎಐ ಸೇಲ್ಸ್ ಪ್ರತಿನಿಧಿ?

ಸಾಮಾನ್ಯವಾಗಿ ಕಂಪೆನಿಗಳು ಸೇಲ್ಸ್ಗೆ ಲೀಡ್ಗಳು ಡಿಜಿಟಲ್ ರೂಪದಲ್ಲಿ ಪಡೆದುಕೊಳ್ಳುತ್ತವೆ. ನಾವು ಯಾವತ್ತೋ ಕಾರು ಇನ್ಶೂರೆನ್ಸ್ ಬಗ್ಗೆ ಹುಡುಕಿರುತ್ತೇವೆ. ನಮ್ಮ ಕಾರು ಇನ್ಶುರೆನ್ಸ್ ಮುಕ್ತಾಯವಾಗುವುದಕ್ಕೂ ಒಂದು ತಿಂಗಳು ಮೊದಲೇ ದೇಶದಲ್ಲಿ ಇರುವ ಎಲ್ಲ ಇನ್ಶುರೆನ್ಸ್ ಕಂಪೆನಿಗಳೂ ಒಮ್ಮೆ ಫೋನ್ ಮಾಡಿ, ‘ನಮ್ಮ ಕಂಪೆನಿಯ ಇನ್ಶುರೆನ್ಸ್ ಅನ್ನೇ ಖರೀದಿ ಮಾಡಿ’ ಎಂದು ದುಂಬಾಲು ಬೀಳುತ್ತವೆ. ಕಂಪೆನಿಗೆ ಸೇಲ್ಸ್ ಡೇಟಾ ವಿವಿಧ ಮೂಲದಿಂದ ಸಿಗುತ್ತವೆ. ಅದಕ್ಕೆ ವಿವಿಧ ಮಾನದಂಡಗಳನ್ನು ಹಾಕಿ, ಹೆಕ್ಕಿ ತೆಗೆದು, ಯಾರು ಸಂಭಾವ್ಯ ಗ್ರಾಹಕರು ಎಂಬುದನ್ನು ಕಂಡುಕೊಂಡು ಅವರನ್ನು ಸಂಪರ್ಕಿಸಿ, ತಮ್ಮ ಉತ್ಪನ್ನಗಳ ಬಗ್ಗೆಯೋ ಅಥವಾ ಸೇವೆಗಳ ಬಗ್ಗೆಯೋ ಅವರಿಗೆ ತಿಳಿಸುವ ಕೆಲಸವನ್ನು ಈ ಮಾರಾಟ ಪ್ರತಿನಿಧಿಗಳು ಮಾಡುತ್ತಾರೆ.

ಇಲ್ಲಿ ಎಐ ಪ್ರವೇಶಿಸಿದಾಗ ಈ ಅಷ್ಟೂ ಕೆಲಸವನ್ನು ಅಂದರೆ, ಡೇಟಾವನ್ನು ವಿಶ್ಲೇಷಿಸಿ, ಯಾರು ಸಂಭಾವ್ಯ ಗ್ರಾಹಕರು ಎಂಬುದನ್ನು ಗುರುತಿಸುವುದು ಮತ್ತು ಅವರಿಗೆ ಕರೆ ಮಾಡುವುದು ಅಥವಾ ಇಮೇಲ್ ಮೂಲಕ ಅವರನ್ನು ಸಂಪರ್ಕಿಸುವುದು ಅಥವಾ ಇತರ ವಿಧಾನದ ಮೂಲಕ ಅವರನ್ನು ಸಂಪರ್ಕಿಸುವುದೆಲ್ಲವನ್ನೂ ಎಐ ಮಾಡುತ್ತದೆ.

ಆದರೆ, ಮನುಷ್ಯನಲ್ಲಿರುವ ಸಂವೇದನೆಯನ್ನು ಅಥವಾ ಮಾನವೀಯ ಸ್ಪರ್ಶ ಈ ಸೇಲ್ಸ್ ಪಿಚ್ನಲ್ಲಿ ಮುಖ್ಯವಾಗಿರುತ್ತದೆ. ಎಐನಲ್ಲಿ ಇರುವ ಕೊರತೆಯೇ ಅದು. ‘ಜೆನ್ ಎಐ’ ಬಂದಮೇಲೆ ಸ್ವಲ್ಪ ಮಾನವೀಯತೆ ಎಐಗೆ ಬಂದಿದ್ದರೂ, ಅದು ಮನುಷ್ಯನ ಮಟ್ಟಕ್ಕೆ ಇನ್ನೂ ಬಂದಿಲ್ಲ. ಹೀಗಾಗಿ, ಸೇಲ್ಸ್ ಪಿಚ್ ಮಾಡುವಲ್ಲಿ ಅದು ಇನ್ನೂ ಹಿಂದೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.