ಸೋಮವಾರ, ಜೂನ್ 21, 2021
30 °C

ಟೆಕ್‌ನೊ ಸ್ಮಾರ್ಟ್‌ಫೋನ್‌: ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಕ್‌ನೊ ಸ್ಮಾರ್ಟ್‌ಫೋನ್‌

ಬೆಂಗಳೂರು: ಕೋವಿಡ್-19 ಲಾಕ್‌ಡೌನ್ ನಿಂದಾಗಿ ಮೊಬೈಲ್ ಫೋನ್ ಮಾರಾಟ ಬಹುತೇಕ ಶೂನ್ಯ ಮಟ್ಟಕ್ಕೆ ಇಳಿದಿದ್ದು, ಇದೀಗ ಟ್ರಾನ್ಸಿಯಾನ್ ಕಂಪನಿಯ ಟೆಕ್‌ನೊ ಮೊಬೈಲ್ ಫೋನ್‌ಗಳು ಮನೆ ಬಾಗಿಲಿಗೇ ತಲುಪಲು ಸಜ್ಜಾಗಿವೆ. ಟೆಕ್‌ನೊ ಆರಂಭಿಸಿರುವ ಡೋರ್ ಡೆಲಿವರಿ ಕಾರ್ಯಾಚರಣೆಯಿಂದ 35,000 ರಿಟೇಲ್ ಮಾರಾಟಗಾರರಿಗೆ ಅನುವಾಗಲಿದೆ. 

ಗ್ರಾಹಕರು ಟೆಕ್‌ನೊ ಅಧಿಕೃತ ವೆಬ್‌ಸೈಟ್‌ಗೆ (www.tecno-mobile.in/home-delivery) ಭೇಟಿ ನೀಡಿ, ನಿವಾಸದ ಪಿನ್‌ ಕೋಡ್‌ ನಮೂದಿಸಿ ಸೇವೆ ಪಡೆದುಕೊಳ್ಳಬಹುದು. 

ಸ್ಥಳೀಯ ರಿಟೇಲ್‌ ಮಾರಾಟಗಾರರ ವಿಳಾಸ ಮತ್ತು ಸಂಪರ್ಕ ವಿವರಗಳು ಗ್ರಾಹಕರಿಗೆ ಸಿಗುತ್ತದೆ. ಆಯ್ಕೆ ಮಾಡಿದ ಸ್ಮಾರ್ಟ್‌ಫೋನ್‌ ರಿಟೇಲರ್‌ಗಳಿಂದ ಮನೆಯ ಬಾಗಿಲಿಗೆ ತಲುಪುತ್ತದೆ.  ಆರ್ಡರ್‌ ಮಾಡಿದ 24 ಗಂಟೆಗಳಲ್ಲಿ ಫೋನ್‌ ಮನೆ ಬಾಗಿಲಿಗೆ ತಲುಪುತ್ತದೆ ಎಂದು ಕಂಪನಿ ಹೇಳಿದೆ. 

ಟೆಕ್‌ನೊ ಸ್ಮಾರ್ಟ್ ಫೋನ್‌ನ ಪ್ರಮುಖ ಮಾದರಿಗಳಾದ ಕ್ಯಾಮನ್ 15, ಕ್ಯಾಮನ್ 15ಪ್ರೊ ಹಾಗೂ ಸ್ಪಾರ್ಕ್‌ ಗೊ ಪ್ಲಸ್ ಫೋನ್‌ಗಳು ಸಹ ಡೋರ್ ಡೆಲಿವರಿಗೆ ಲಭ್ಯವಿದೆ.

ಸ್ಟಾರ್ಕ್ ಗೊ ಪ್ಲಸ್ ಮಾದರಿಯ ಮೊಬೈಲ್ ಫೋನ್ ನೊಂದಿಗೆ  ₹799 ಬೆಲೆಯ ಬ್ಲೂಟೂಥ್ ಇಯರ್ ಪೀಸ್ ಉಚಿತವಾಗಿ ಸಿಗಲಿದೆ. ಒಂದು ಬಾರಿ ಸ್ಕ್ರೀನ್ ಬದಲಿಸಿಕೊಡುವ ಹಾಗೂ ವಾರಂಟಿ ಒಂದು ತಿಂಗಳು ವಿಸ್ತರಣೆ (12+1) ಕೊಡುಗೆ ಇದೆ. 
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು