ಸೋಮವಾರ, ಡಿಸೆಂಬರ್ 6, 2021
27 °C

ಟೆಕ್ನೊನಿಂದ ಸ್ಪಾರ್ಕ್‌ 6 ಏರ್‌, ಮಿನಿಪಾಡ್‌ ಎಂ1

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಾಗತಿಕ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿರುವ ಟೆಕ್ನೊ, ಸ್ಪಾರ್ಕ್ 6 ಏರ್‌ ಸ್ಮಾರ್ಟ್‌ಫೋನ್‌ ಮತ್ತು ಮಿನಿಪಾಡ್‌ ಎಂ1 ಸಿಂಗಲ್‌ ಇಯರ್‌ ವಯರ್‌ಲೆಸ್‌ ಇಯರ್‌ಫೊನ್‌ ಬಿಡುಗಡೆ ಮಾಡಿದೆ.

‘ಮನೆಯಿಂದಲೇ ಕೆಲಸ ಮಾಡುವುದು ಸಹಜವಾಗುತ್ತಿರುವ ಈ ಸಂದರ್ಭದಲ್ಲಿ ಟೆಕ್ನೊ ಕಂಪನಿಯು ಕನೆಕ್ಟೆಡ್‌ ಡಿವೈಸ್‌ಗಳನ್ನು ಬಿಡುಗಡೆ ಮಾಡುವುದರತ್ತ ಗಮನ ಹರಿಸಿದೆ. ಇದೇ ಉದ್ದೇಶದಿಂದ ಮಿನಿಪಾಡ್‌ ಮತ್ತು ಹೈಪಾಡ್‌ ನೀಡಲಾಗಿದೆ. ₹10 ಸಾವಿರ ಬೆಲೆಯ ಒಳಗಡೆ ಅತ್ಯುತ್ತಮ ಸಾಧನಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ. ಈ ಮೂಲಕ ನಮ್ಮ ಗ್ರಾಹಕರಿಗೆ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಅನುಭವ ಸಿಗುವಂತೆ ಮಾಡಲಾಗುವುದು’ ಎಂದು ಟ್ರಾನ್ಶನ್‌ ಇಂಡಿಯಾದ ಸಿಇಒ ಅರ್ಜಿತ್‌ ತಲಪಾತ್ರಾ ತಿಳಿಸಿದ್ದಾರೆ.

‘ಕಡಿಮೆ ಬೆಲೆಯಲ್ಲಿ 7 ಇಂಚು ಎಚ್‌ಡಿ ಪ್ಲಸ್‌ ಡಾಟ್‌ ಡಿಸ್‌ಪ್ಲೇ ಮತ್ತು 6,000 ಎಂಎಎಚ್‌ ಬ್ಯಾಟರಿ ಹೊಂದಿರುವ ಮೊಟ್ಟ ಮೊದಲ ಫೋನ್‌ ಟೆಕ್ನೊ ಸ್ಪಾರ್ಕ್‌ 6 ಏರ್‌ ಆಗಿದೆ. ದೊಡ್ಡ ಪರದೆ ಮತ್ತು ಅತ್ಯುತ್ತಮ ಬ್ಯಾಟರಿ ಇರುವ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಇದು ಹೊಸ ಟ್ರೆಂಡ್‌ ಸೃಷ್ಟಿಸಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಮರ್ಥ್ಯ ಎಷ್ಟು?
ಮಿನಿಪಾಡ್‌ ಎಂ1: 50 ಎಂಎಎಚ್‌ ಬ್ಯಾಟರಿ ಇದೆ.  ಒಂದು ಬಾರಿ ಚಾರ್ಜ್‌ ಮಾಡಿದರೆ 6 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್‌ ಸಾಮರ್ಥ್ಯ ಹೊಂದಿದೆ. ಕರೆ ಸ್ವೀಕರಿಸಲು ಅಥವಾ ರಿಜೆಕ್ಟ್ ಮಾಡಲು, ಹಾಡನ್ನು ಬದಲಿಸಲು ಹೀಗೆ ಇನ್ನೂ ಹಲವು ಕೆಲಸಗಳಿಗೆ ಸ್ಮಾರ್ಟ್‌ ಟಚ್‌ ಕಂಟ್ರೋಲ್‌ ನೆರವಾಗುತ್ತದೆ. ನೀರಿನಿಂದ ರಕ್ಷಣೆ ನೀಡಲು ಐಪಿಎಕ್ಸ್‌4 ಸುರಕ್ಷತೆ ಇದೆ. ಬೆಲೆ ₹ 799.

ವೈಶಿಷ್ಟ್ಯ
ಡಿಸ್‌ಪ್ಲೇ; 7 ಇಂಚು ಎಚ್‌ಡಿ ಪ್ಲಸ್‌ ಡಾಟ್‌ ನಾಚ್‌ ಡಿಸ್‌ಪ್ಲೇ
ಕ್ಯಾಮೆರಾ: 13 ಎಂಪಿ ಎಐ ಟ್ರಿಪಲ್‌ ಕ್ಯಾಮೆರಾ ವಿತ್ ಕ್ವಾಡ್ ಫ್ಲ್ಯಾಷ್‌
ಸೆಲ್ಫಿ: 8 ಎಂಪಿ, ಡ್ಯುಯಲ್‌ ಫ್ಲ್ಯಾಷ್
ಮೆಮೊರಿ: 2ಜಿಬಿ ರ್‍ಯಾಮ್‌ ಮತ್ತು 32 ಜಿಬಿ ರೋಮ್. 1ಟಿಬಿ ವರೆಗೆ ವಿಸ್ತರಣೆ ಸಾಧ್ಯ
ಬ್ಯಾಟರಿ: ಲಿ ಪಾಲಿಮರ್‌ 6,000 ಎಂಎಎಚ್‌.
ಒಸ್‌: ಆಂಡ್ರಾಯ್ಡ್‌ 10 (ಗೊ ಎಡಿಷನ್‌) ಆಧಾರಿತ HIOS 6.2
ಪ್ರೊಸೆಸರ್‌: ಹೀಲಿಯೊ A22, ಕ್ವಾಡ್‌ ಕೋರ್‌ 2ಗಿಗಾ ಹರ್ಟ್ಸ್‌ ಸಿಪಿಯು
ಬೆಲೆ: ₹ 7,999

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು