₹ 6,499ಕ್ಕೆ ಟೆಕ್ನೊ ‘ಸ್ಪಾರ್ಕ್ ಗೊ2020’ ಮೊಬೈಲ್

ಬೆಂಗಳೂರು: ಜಾಗತಿಕ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಟೆಕ್ನೊ, ಭಾರತದ ಮಾರುಕಟ್ಟೆಗೆ ಸ್ಪಾರ್ಕ್ ಸರಣಿಯಲ್ಲಿ ‘ಸ್ಪಾರ್ಕ್ ಗೊ 2020’ ಹ್ಯಾಂಡ್‌ಸೆಟ್ ಬಿಡುಗಡೆ ಮಾಡಿದೆ. ಇದರ ಬೆಲೆ ₹ 6,499 ಇದೆ.
5 ಸಾವಿರ ಎಂಎಎಚ್ ಬ್ಯಾಟರಿ, 6.52 ಇಂಚು ಡಿಸ್‌ಪ್ಲೇ, 13 ಎಂಪಿ ಎಐ ಡ್ಯುಯಲ್ ರಿಯರ್ ಕ್ಯಾಮೆರಾದೊಂದಿಗೆ, ಏಕಕಾಲಕ್ಕೆ ಎರಡು ಬ್ಲೂಟೂತ್ ಅಥವಾ ಮೂರು ಬ್ಲೂಟೂತ್ ಸ್ಪೀಕರ್‌ಗೆ ಸಂಪರ್ಕಿಸುವ ಸೌಲಭ್ಯವನ್ನೂ ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.
‘ದೇಶದಲ್ಲಿ 50 ಲಕ್ಷ ಗ್ರಾಹಕರನ್ನು ಹೊಂದಿದ್ದು, ಸಾಕಷ್ಟು ಜನಪ್ರಿಯತೆ ಗಳಿಸುತ್ತಿದ್ದೇವೆ. ಬ್ಯಾಟರಿ, ಡಿಸ್‌ಪ್ಲೇ, ಕ್ಯಾಮೆರಾ ಮತ್ತು ಹೋಲಿಸಲಾಗದ ಬೆಲೆಯಿಂದ ಸ್ಪಾರ್ಕ್ ಗೊ2020 ಹ್ಯಾಂಡ್‌ಸೆಟ್ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ವಿಶ್ವಾಸವಿದೆ’ ಎಂದು ಟ್ರಾನ್ಶನ್ ಇಂಡಿಯಾದ ಸಿಇಒ ಅರ್ಜಿತ್ ತಲಪಾತ್ರಾ ಹೇಳಿದರು.
ವೈಶಿಷ್ಟ್ಯ
ಡಿಸ್‌ಪ್ಲೇ – 6.52 ಇಂಚು ಎಚ್‌ಡಿ ಪ್ಲಸ್ ಡಾಟ್ ನಾಚ್
ಹಿಂಬದಿ ಕ್ಯಾಮೆರಾ – 13ಎಂಪಿ ಡ್ಯುಯಲ್ ಎಐ ಕ್ಯಾಮೆರಾ ವಿತ್ ಡ್ಯುಯಲ್ ಫ್ಲಾಷ್
ಮುಂಬದಿ ಕ್ಯಾಮೆರಾ – 8ಎಂಪಿ
ಮೆಮೊರಿ – 2ಜಿಬಿ ರ್‍ಯಾಮ್ & 32 ಜಿಬಿ ರೋಮ್. 256 ಜಿಬಿವರೆಗೆ ವಿಸ್ತರಣೆ ಸಾಧ್ಯ
ಬ್ಯಾಟರಿ – 5000 ಎಂಎಎಚ್ ಬ್ಯಾಟರಿ
ಒಎಸ್ – ಆಂಡ್ರಾಯ್ಡ್ 10 (ಗೊ ಆವೃತ್ತಿ) ಅಧಾರಿತ HiOS 6.2
ಪ್ರೊಸೆಸರ್ – ಹೀಲಿಯೊ ಎ20, ಕ್ವಾಡ್ ಕೋರ್ 1.8 ಗಿಗಾ ಹರ್ಟ್ಸ್ ಸಿಪಿಯು
ಮಲ್ಟಿ ಕಾರ್ಡ್ ಸ್ಲಾಟ್ – ಡ್ಯುಯಲ್ ನ್ಯಾನೊ ಸಿಮ್ + 1 ಎಸ್‌ಡಿ ಕಾರ್ಡ್ ಸ್ಲಾಟ್
ಬೆಲೆ – 6,499
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.