ಶನಿವಾರ, ಜುಲೈ 31, 2021
25 °C

ಥಾಮ್ಸನ್‌ನಿಂದ ಪ್ರೀಮಿಯಂ ಆಂಡ್ರಾಯ್ಡ್ ಟಿವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎಲೆಕ್ಟ್ರಾನಿಕ್ ಉಪಕರಣಗಳ ತಯಾರಕ ಸಂಸ್ಥೆ ಥಾಮ್ಸನ್ ಈಗ ಪ್ರೀಮಿಯಂ ಸ್ಮಾರ್ಟ್ ಟಿವಿಗಳ ಕ್ಷೇತ್ರಕ್ಕೆ ಲಗ್ಗೆಯಿಟ್ಟಿದ್ದು, 43, 55 ಹಾಗೂ 65 ಇಂಚುಗಳ ಒಎಟಿಹೆಚ್ ಪ್ರೋ ಸರಣಿಯ ಟಿವಿಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಜು.5ರಿಂದ ಫ್ಲಿಪ್‌ಕಾರ್ಟ್ ತಾಣದ ಮೂಲಕ ಮೂರು ಮಾದರಿಯ ಪ್ರೀಮಿಯಂ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗಳು ಲಭ್ಯವಾಗಲಿದ್ದು, ಅನುಕ್ರಮವಾಗಿ ರೂ.24,999, ರೂ. 32999 ಹಾಗೂ ರೂ.52999 ಬೆಲೆ ಘೋಷಿಸಲಾಗಿದೆ.

ಇತ್ತೀಚೆಗಷ್ಟೇ ವಾಷಿಂಗ್ ಮೆಷಿನ್ ಮೂಲಕ ಗೃಹೋಪಯೋಗಿ ವಸ್ತುಗಳ ಮಾರುಕಟ್ಟೆಗೂ ಥಾಮ್ಸನ್ ಪ್ರವೇಶಿಸಿತ್ತು. 'ಗ್ರಾಹಕಸ್ನೇಹಿ ತಂತ್ರಜ್ಞಾನ' ಎಂಬ ತನ್ನ ಸಿದ್ಧಾಂತಕ್ಕೆ ಅನುಗುಣವಾಗಿ ತಮ್ಮ ಸ್ಕ್ರೀನ್ ಅನುಭವವನ್ನು ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಮಟ್ಟಕ್ಕೆ ಏರಿಸಿಕೊಳ್ಳುವಲ್ಲಿ ಈ ಹೊಸ ಸರಣಿಯು ನೆರವಾಗಲಿದೆ ಎಂದು ಥಾಮ್ಸನ್ ಹೇಳಿದೆ. ಚಿಕ್ ರೋಸ್ ಗೋಲ್ಡ್, ಬೆಜೆಲ್-ರಹಿತ ಸ್ಕ್ರೀನ್‌ಗಳಿರುವ ಈ ಟಿವಿ, ಡಾಲ್ಬಿ ಡಿಜಿಟಲ್ ಪ್ಲಸ್, ಡಾಲ್ಬಿ ವಿಷನ್, HDR10, ಬ್ಲೂಟೂತ್ 5.0 ತಂತ್ರಜ್ಞಾನದೊಂದಿಗೆ, ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೊ, ಯೂಟ್ಯೂಬ್ ಮತ್ತು ಪ್ಲೇಸ್ಟೋರ್ ಶಾರ್ಟ್‌ಕಟ್‌ಗಳನ್ನು ಹೊಂದಿದೆ. ಪ್ಯಾರಿಸ್‌ನಲ್ಲಿ ವಿನ್ಯಾಸಗೊಂಡು ಭಾರತದಲ್ಲೇ ತಯಾರಾಗಿರುವ OATH ಪ್ರೊ ಟಿವಿಗಳಲ್ಲಿ ಅಧಿಕೃತ ಆಂಡ್ರಾಯ್ಡ್ 9.0 ಕಾರ್ಯಾಚರಣಾ ವ್ಯವಸ್ಥೆಯಿದ್ದು, HDR ತಂತ್ರಜ್ಞಾನವಿದೆ ಎಂದು ಥಾಮ್ಸನ್ ಹೇಳಿದೆ.

ಅಂತರ್-ನಿರ್ಮಿತ ವೈಫೈ, ಮಲ್ಟಿಪಲ್ ಸ್ಕ್ರೀನ್ ಕಾಸ್ಟಿಂಗ್ ಆಯ್ಕೆಗಳು ಆನ್‌ಲೈನ್ ತರಗತಿಗಳನ್ನು ನೋಡುವುದಕ್ಕೂ ಸೂಕ್ತ. ಈಗಾಗಲೇ ಶೇ.5 ಸ್ಮಾರ್ಟ್ ಟಿವಿ ಮಾರುಕಟ್ಟೆಯ ಪಾಲು ತಮ್ಮದಾಗಿದ್ದು, ಪ್ರೀಮಿಯಂ ಟಿವಿ ವಲಯಕ್ಕೆ ಪ್ರವೇಶಿಸುವುದಕ್ಕೆ ಸಂತೋಷವಾಗುತ್ತಿದೆ ಎಂದು ಭಾರತದಲ್ಲಿ ಥಾಮ್ಸನ್ ಟಿವಿ ಮಾರಾಟದ ಪರವಾನಗಿದಾರ ಸಂಸ್ಥೆ ಎಸ್‌ಪಿಪಿಎಲ್‌ನ ಸಿಇಒ ಅವನೀತ್ ಸಿಂಗ್ ಮರ್ವಾ ಹೇಳಿದ್ದಾರೆ.

5000ಕ್ಕೂ ಹೆಚ್ಚು ಆ್ಯಪ್‌ಗಳು, ಬಹುತೇಕ ಎಲ್ಲ ಸ್ಟ್ರೀಮಿಂಗ್ ವೇದಿಕೆಗಳಾದ ನೆಟ್‌ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ಮುಂತಾದವುಗಳ ಮೂಲಕ 5 ಲಕ್ಷಕ್ಕೂ ಹೆಚ್ಚು ಮೂವೀಗಳು ಲಭ್ಯವಾಗಲಿದ್ದು, ಫೋಟೋ ಮತ್ತು ಹಾಡುಗಳನ್ನು ಕೂಡ ಟಿವಿಗೆ ಕಾಸ್ಟ್ (ಪ್ರಸಾರ) ಮಾಡಬಹುದು. ಗೂಗಲ್ ಅಸಿಸ್ಟೆಂಟ್ ಬೆಂಬಲವಿದ್ದು, ಶಕ್ತಿಶಾಲಿ ಮೀಡಿಯಾಟೆಕ್ ಕ್ವಾಡ್ ಪ್ರೊಸೆಸರ್ ಇದೆ. ಧ್ವನಿ ನಿಯಂತ್ರಿತ ರಿಮೋಟ್, 30 ವ್ಯಾಟ್ಸ್ ಸ್ಪೀಕರ್‌ಗಳು, ಡಾಲ್ಬಿ ಆಡಿಯೋ ಇದರಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು