ಬುಧವಾರ, ಮಾರ್ಚ್ 29, 2023
23 °C

ಐಫೋನ್‌ 14 ಪ್ರೊ ಕೊರತೆ: ಆ್ಯಪಲ್‌ ಜೊತೆ ಮಾತನಾಡಿದ ರಾಜೀವ್‌ ಚಂದ್ರಶೇಖರ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾಗಿರುವ ಐಫೋನ್‌ 14 ಪ್ರೊ ರಾಷ್ಟ್ರ ರಾಜಧಾನಿಯಲ್ಲಿ ಕೊರತೆ ಕಂಡುಬಂದ ಹಿನ್ನೆಲೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಆ್ಯಪಲ್‌ ಕಂಪನಿ ಜೊತೆ ಮಾತನಾಡಿದ್ದಾರೆ.

ಐಫೋನ್‌ 14 ಪ್ರೊಗೆ ಭಾರಿ ಬೇಡಿಕೆ ಇದೆ ಮತ್ತು ದೆಹಲಿಯಲ್ಲಿ ಉಂಟಾಗಿರುವ ಕೊರತೆಯನ್ನು ಪರಿಹರಿಸಲು ಆ್ಯಪಲ್‌ ಮುಂದಾಗಿದೆ.

ನಾನು ಆ್ಯಪಲ್‌ ಜೊತೆ ಮಾತನಾಡಿದ್ದೇನೆ. ಐಫೋನ್‌ 14 ಪ್ರೊಗೆ ಮಾರುಕಟ್ಟೆಯಲ್ಲಿ ಇರುವ ಬೇಡಿಕೆ ಬಗ್ಗೆ ತಿಳಿಸಿದ್ದೇನೆ. ಕೊರತೆಯನ್ನು ಪರಿಹರಿಸುವಂತೆ ಹೇಳಿದ್ದೇನೆ. ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಐಫೋನ್‌ 14 ಪ್ರೊ ಪೂರೈಕೆ ನಿಟ್ಟಿನಲ್ಲಿ ಆ್ಯಪಲ್‌ ಮುಂದಾಗಿದೆ ಎಂದು ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಐಫೋನ್‌ 14 ಪ್ರೊ ಮತ್ತು ಪ್ರೊ ಮ್ಯಾಕ್ಸ್‌ ಕೊರತೆ ಕಂಡುಬಂದ ಹಿನ್ನೆಲೆ ಗ್ರಾಹಕರಿಂದ ದೂರುಗಳು ಕೇಳಿ ಬಂದಿದ್ದವು. ಖಾಸಗಿ ಮಾರಾಟಗಾರರು ಕಾಳದಂಧೆ ನಡೆಸುತ್ತಿರುವುದಾಗಿಯೂ ದೂರಿದ್ದರು.

ಐಫೋನ್‌ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ಗಳು ಸೆಪ್ಟೆಂಬರ್‌ 16ಕ್ಕೆ ಮಾರುಕಟ್ಟೆಗೆ ಬಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು