ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

10,000 mAh ಸಾಮರ್ಥ್ಯದ ವೈರ್‌ಲೆಸ್ ಪವರ್ ಬ್ಯಾಂಕ್ ಪರಿಚಯಿಸಿದ ಯುನಿಕ್ಸ್

Published 24 ಜೂನ್ 2024, 13:21 IST
Last Updated 24 ಜೂನ್ 2024, 13:21 IST
ಅಕ್ಷರ ಗಾತ್ರ

ಮುಂಬೈ: ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್‌ ಪರಿಕರಗಳ ಪ್ರಮುಖ ಬ್ರ್ಯಾಂಡ್‌ ಯುನಿಕ್ಸ್‌, ನೂತನ ವೈರ್‌ಲೆಸ್ ಪವರ್ ಬ್ಯಾಂಕ್ 'UX-1533' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಬಹುಪಯೋಗಿ ಪವರ್‌ ಬ್ಯಾಂಕ್‌, ಟೈಪ್‌–ಸಿ ಹಾಗೂ ಯುಎಸ್‌ಬಿ ಪೋರ್ಟ್ಸ್‌ ಬೆಂಬಲಿತ 22 ವ್ಯಾಟ್‌ ವೇಗದ ಚಾರ್ಜಿಂಗ್‌ ಸೌಕರ್ಯವನ್ನು ಹೊಂದಿದೆ. ಸದ್ಯ ಕಪ್ಪು, ಬಿಳಿ ಮತ್ತು ನೇರಳೆ ಬಣ್ಣಗಳಲ್ಲಿ ತಯಾರಿಸಲಾಗಿರುವ ಈ ಉತ್ಪನ್ನ, ಯುನಿಕ್ಸ್‌ನ ಅಧಿಕೃತ ವೆಬ್‌ಸೈಟ್‌ ಹಾಗೂ ರೀಟೇಲ್‌ ಮಳಿಗೆಗಳಲ್ಲಿ ₹ 2,399ಕ್ಕೆ ಹಾಗೂ ಒಂದು ವರ್ಷ ವಾರಂಟಿಯೊಂದಿಗೆ ಲಭ್ಯವಿದೆ.

ಕೇವಲ 123 ಗ್ರಾಂ ತೂಕವಿರುವ ಇದನ್ನು ಎಲ್ಲೆಡೆ ಸುಲಭವಾಗಿ ಕೊಂಡೊಯ್ಯಬಹುದು. ಸುರಕ್ಷಿತ ಚಾರ್ಜಿಂಗ್‌ ಅನ್ನು ಖಾತ್ರಿಪಡಿಸಲು 'ಮ್ಯಾಗ್‌ಸೇಫ್‌' ತಂತ್ರಜ್ಞಾನ, ಮ್ಯಾಗ್ನೆಟಿಕ್‌ ಗ್ರಿಪ್‌ ಒಳಗೊಂಡಿರುವ ಈ ಪವರ್‌ಬ್ಯಾಂಕ್‌ ಗ್ರಾಹಕರಿಗೆ ಸಾಟಿಯಿಲ್ಲದ ಅನುಭವ ನೀಡುತ್ತದೆ.

10,000 ಎಂಎಎಚ್‌ ಸಾಮರ್ಥ್ಯದ ಲೀಥಿಯಂ ಅಯಾನ್‌ ಬ್ಯಾಟರಿ, Qi ಇಂಟರ್‌ಫೇಸ್‌ ಆಧಾರಿತ ವೈರ್‌ಲೆಸ್‌ ಚಾರ್ಜಿಂಗ್‌ ತಂತ್ರಜ್ಞಾನ ಇದರಲ್ಲಿದೆ. 45 ನಿಮಿಷಗಳಲ್ಲಿ ಶೇ 80ರಷ್ಟು ಬ್ಯಾಟರಿ ಚಾರ್ಜ್‌ ಆಗುವ ಈ ಪವರ್‌ ಬ್ಯಾಂಕ್‌, ಯಾವುದೇ ಸ್ಮಾರ್ಟ್‌ಫೋನ್‌ ಅನ್ನು 30 ನಿಮಿಷಗಳಲ್ಲೇ ಶೇ 50ರಷ್ಟು ಚಾರ್ಜ್‌ ಮಾಡಬಲ್ಲದು.

ವೈರ್‌ಲೆಸ್‌ ಚಾರ್ಜಿಂಗ್‌ ಸೌಕರ್ಯ ಮತ್ತು ಟೈ–ಎ ಅಥವಾ ಟೈಪ್‌–ಸಿ ಪೋರ್ಟ್‌ ಬೆಂಬಲದೊಂದಿಗೆ ಎಲ್ಲ ಡಿವೈಸ್‌ಗಳಿಗೂ ಹೊಂದಿಕೆಯಾಗುವಂತೆ ಈ ಸಾಧನವನ್ನು ವಿನ್ಯಾಸ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT