ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೊ Y12G ದೇಶದ ಮಾರುಕಟ್ಟೆಗೆ ಬಿಡುಗಡೆ: ಇಲ್ಲಿದೆ ಬೆಲೆ ವಿವರ

Last Updated 5 ಆಗಸ್ಟ್ 2021, 8:35 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ವಿವೊ ನೂತನ ಉತ್ಪನ್ನ ಪರಿಚಯಿಸಿದೆ.

ವೈ ಸರಣಿಯಲ್ಲಿ ವಿವೊ Y12G ಗ್ಯಾಜೆಟ್ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದು, ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಜತೆಗೆ ಬಜೆಟ್ ದರದಲ್ಲಿ ವಿವಿಧ ಫೀಚರ್‌ಗಳನ್ನು ಪರಿಚಯಿಸಿದೆ.

ಹಿಂಭಾಗದಲ್ಲಿ ಎರಡು ಕ್ಯಾಮರಾ, ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇ ಇದರ ವಿಶೇಷತೆಯಾಗಿದೆ.

ವಿವೊ Y12G ಸ್ಮಾರ್ಟ್‌ಫೋನ್ 3 GB RAM + 32 GB ಸ್ಟೋರೇಜ್ ಆವೃತ್ತಿಗೆ ದೇಶದಲ್ಲಿ ₹10,990 ದರವಿದೆ. ಗ್ಲೇಸಿಯರ್ ಬ್ಲೂ ಮತ್ತು ಫ್ಯಾಂಟಮ್ ಬ್ಲ್ಯಾಕ್ ಎನ್ನುವ ಎರಡು ಬಣ್ಣಗಳಲ್ಲಿ ಹೊಸ ವಿವೊ Y12G ದೊರೆಯಲಿದೆ.

ಆನ್‌ಲೈನ್ ಮತ್ತು ಸ್ಟೋರ್‌ ಮೂಲಕ ನೂತನ ವಿವೊ Y12G ಸ್ಮಾರ್ಟ್‌ಫೋನ್ ದೊರೆಯಲಿದೆ.

ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 439 ಪ್ರೊಸೆಸರ್, ಹಿಂಭಾಗದಲ್ಲಿ 13+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಹಾಗೂ 8 ಮೆಗಾಪಿಕ್ಸೆಲ್ ಸೆಲ್ಫಿ, 5000mAh ಬ್ಯಾಟರಿ ಇದರ ವಿಶೇಷತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT