ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ಬೇಕೆಂದರೆ ಇಂಟರ್ನೆಟ್ನಲ್ಲಿ ಹೆಚ್ಚಿನವರು ಹುಡುಕುವುದು ವಿಕಿಪೀಡಿಯ ಜಾಲತಾಣದಲ್ಲಿ. ವಿಶ್ವದ ಅತಿದೊಡ್ಡ ಆನ್ಲೈನ್ ಕೋಶವಾಗಿ ಬೆಳೆದಿರುವ ವಿಕಿಪೀಡಿಯ ಆರಂಭವಾಗಿ 25 ವರ್ಷಗಳು ಸಂದಿವೆ. 2001ರ ಜನವರಿ 15ರಂದು ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸಿಂಗರ್ ಎನ್ನುವವರು ಆರಂಭಿಸಿದ್ದರು.

ಅಮೆರಿಕದ ಈ ಉದ್ಯಮಿಗಳು ಆರಂಭದಲ್ಲಿ ‘ನ್ಯೂಪೀಡಿಯ’ ಎನ್ನುವ ವಿಶ್ವಕೋಶವನ್ನು ಆರಂಭಿಸಿದ್ದರು. ಇದರಲ್ಲಿ ತಜ್ಞರ ಮೂಲಕ ಲೇಖನ, ಬರಹ, ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸಲಾಗುತ್ತಿತ್ತು. ಆದರೆ ಈ ಪ್ರಕ್ರಿಯೆ ನಿಧಾನವಾಗುತ್ತಿದ್ದ ಕಾರಣ ವಿಕಿಪೀಡಿಯವನ್ನು ಆರಂಭಿಸಿದ್ದರು..

‘ಇದರಲ್ಲಿ ಜಗತ್ತಿನಲ್ಲಿರುವ ಯಾರಾದರೂ ಲೇಖನ ಬರೆಯಬಹುದು’ ಎಂಬ ಹೊಸ ಆಲೋಚನೆಯೊಂದಿಗೆ ಆರಂಭವಾಗಿತ್ತು.
ವಿಕಿ ಮತ್ತು ಎನ್ಸೈಕ್ಲೋಪೀಡಿಯಾ ಸೇರಿ ವಿಕಿಪೀಡಿಯ ಹುಟ್ಟಿಕೊಂಡಿತ್ತು. ವಿಕಿ ಎಂದರೆ ಹವಾಯಿಯನ್ ಭಾಷೆಯಲ್ಲಿ ತ್ವರಿತ ಎಂಬ ಅರ್ಥವಿದೆ. ಎನ್ಸೈಕ್ಲೋಪೀಡಿಯಾ ಎಂದರೆ ಮಾಹಿತಿಗಳ ಸಂಗ್ರಹ. ವಿಕಿಪೀಡಿಯ ವೇಗವಾಗಿ ಮಾಹಿತಿ ನೀಡಲಿದೆ ಎನ್ನುವುದನ್ನು ಸೂಚಿಸುತ್ತದೆ ಎನ್ನಲಾಗಿದೆ.

ಉಚಿತ ಮಾಹಿತಿ ನೀಡುವುದು

ವಿಕಿಪೀಡಿಯದ ಮೂಲ ಉದ್ದೇಶವೇ ಉಚಿತವಾಗಿ ಮಾಹಿತಿ ಎಲ್ಲರಿಗೂ ಸಿಗುವಂತೆ ಮಾಡುವುದಾಗಿತ್ತು. ಇಂಟರ್ನೆಟ್ ಇರುವ ಎಲ್ಲರೂ ಉಚಿತವಾಗಿ ಮಾಹಿತಿ ಪಡೆಯಬಹುದು. ಪ್ರಸ್ತುತ ಕನ್ನಡ, ಇಂಗ್ಲಿಷ್ ಸೇರಿ 300ಕ್ಕೂ ಹೆಚ್ಚು ಭಾಷೆಗಳಲ್ಲಿ ವಿಕಿಪೀಡಿಯದಲ್ಲಿ ಮಾಹಿತಿ ಲಭ್ಯವಿದ್ದು, ಲಕ್ಷಾಂತರ ವಿಷಯಗಳ ಕುರಿತು ಮಾಹಿತಿ, ಲೇಖನವನ್ನು ಒಳಗೊಂಡಿದೆ.

ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಕಲೆ, ಸಂಸ್ಕೃತಿ, ಕ್ರೀಡೆ, ಆರೋಗ್ಯ, ಪ್ರಚಲಿತ ಸಂಗತಿ ಹೀಗೆ ವಿವಿಧ ರೀತಿಯ ವಿಷಯಗಳ ಬಗ್ಗೆ ವಿಕಿಪೀಡಿಯ ಇತಿಹಾಸ ಸಹಿತವಾಗಿ ಮಾಹಿತಿ ನೀಡುತ್ತದೆ.

ವಿಕಿ ಹೇಗೆ ಕಾರ್ಯನಿರ್ವಹಿಸುತ್ತದೆ?

ವಿಕಿಪೀಡಿಯದಲ್ಲಿ ಯಾರು ಬೇಕಾದರೂ ಲೇಖನ, ಮಾಹಿತಿ ಬರೆಯಬಹುದು ಮತ್ತು ಈಗಾಗಲೇ ಇರುವ ಮಾಹಿತಿಯನ್ನು ತಿದ್ದಬಹುದು. ಹಾಗೆಂದ ಮಾತ್ರಕ್ಕೆ ತಪ್ಪು ಮಾಹಿತಿ ನೀಡುವಂತಿಲ್ಲ. ಬರೆಯುವ, ಹಂಚಿಕೊಳ್ಳುವ, ತಿದ್ದುವ ಪ್ರತಿ ಮಾಹಿತಿಗೂ ನಂಬಿಕೆಗೆ ಅರ್ಹವಾಗಿರುವ ಮೂಲಗಳು ಅಗತ್ಯವಾಗಿರುತ್ತದೆ. ಒಂದು ವೇಳೆ ತಪ್ಪು ಮಾಹಿತಿ ಹಾಕಿರುವುದು ಕಂಡುಬಂದರೆ ವಿಕಿಪೀಡಿಯ ಸಂಪಾದಕರು ಅದನ್ನು ತಕ್ಷಣ ತಿದ್ದುಪಡಿ ಮಾಡುತ್ತಾರೆ. ಪ್ರತಿ ಬದಲಾವಣೆಯೂ ದಾಖಲಾಗುತ್ತದೆ.

ವಿಕಿಪೀಡಿಯ ಫೌಂಡೇಶನ್ ಎನ್ನುವ ಲಾಭರಹಿತ ಸಂಸ್ಥೆ ಈ ಜಾಲತಾಣದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. 2003ರಲ್ಲಿ ಇದು ಆರಂಭವಾಗಿದ್ದು, ವಿಕಿಪೀಡಿಯಗೆ ತಾಂತ್ರಿಕ ಬೆಂಬಲ, ಕಾನೂನು ರಕ್ಷಣೆಯ ನೆರವು ನೀಡುತ್ತದೆ. ಬಳಕೆದಾರರ ದೇಣಿಗೆಗಳಿಂದಲೇ ವಿಕಿಪೀಡಿಯ ಕಾರ್ಯನಿರ್ವಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.