ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Redmi A1+: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಶಓಮಿ

ಶಓಮಿ ನೂತನ ಸ್ಮಾರ್ಟ್‌ಫೋನ್
Last Updated 14 ಅಕ್ಟೋಬರ್ 2022, 11:27 IST
ಅಕ್ಷರ ಗಾತ್ರ

ಬೆಂಗಳೂರು: ಶಓಮಿ ರೆಡ್ಮಿ ಸರಣಿಯಲ್ಲಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ರೆಡ್ಮಿ A1+ ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಬಜೆಟ್ ದರದ ಸ್ಮಾರ್ಟ್‌ಫೋನ್ ಇದಾಗಿದ್ದು, 5,000mAh ಬ್ಯಾಟರಿ ಹೊಂದಿದೆ ಎಂದು ಕಂಪನಿ ಹೇಳಿದೆ.

ಶಓಮಿ ರೆಡ್ಮಿ A1+ ಸ್ಮಾರ್ಟ್‌ಫೋನ್‌ನಲ್ಲಿ 2GB RAM + 32GB ಸ್ಟೋರೇಜ್ ಇದ್ದು, ದೇಶದಲ್ಲಿ ₹6,999 ದರಕ್ಕೆ ದೊರೆಯಲಿದೆ.
3GB + 32GB ಆವೃತ್ತಿಗೆ ₹7,999 ದರ ಇದೆ ಎಂದು ಶಓಮಿ ಹೇಳಿದೆ. ಅಕ್ಟೋಬರ್ 17ರಿಂದ ಶಓಮಿ ಆನ್‌ಲೈನ್ ಮತ್ತು ಸ್ಟೋರ್‌ಗಳಲ್ಲಿ, ಫ್ಲಿಪ್‌ಕಾರ್ಟ್ ಮೂಲಕ ದೊರೆಯಲಿದೆ.

ಕಪ್ಪು, ತಿಳಿ ನೀಲಿ ಮತ್ತು ತಿಳಿ ಹಸಿರು ಬಣ್ಣಗಳಲ್ಲಿ ನೂತನ ಶಓಮಿ ರೆಡ್ಮಿ A1+ ಸ್ಮಾರ್ಟ್‌ಫೋನ್ ದೊರೆಯುತ್ತದೆ.

6.52 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಮೀಡಿಯಾಟೆಕ್ ಹೀಲಿಯೊ A22 ಪ್ರೊಸೆಸರ್ ಜತೆಗೆ 8 ಮೆಗಾಪಿಕ್ಸೆಲ್ ಸಹಿತ ಎರಡು ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಸ ಶಓಮಿ ರೆಡ್ಮಿ A1+ ವಿಶೇಷತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT