ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Redmi Note 11: ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಶಓಮಿ

Last Updated 9 ಫೆಬ್ರುವರಿ 2022, 15:45 IST
ಅಕ್ಷರ ಗಾತ್ರ

ಬೆಂಗಳೂರು: ಶಓಮಿ, ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ.

ರೆಡ್ಮಿ ನೋಟ್ ಸರಣಿಯಲ್ಲಿ ಹೊಸ ನೋಟ್ 11 ಬಿಡುಗಡೆಯಾಗಿದೆ. ಜತೆಗೆ ರೆಡ್ಮಿ ನೋಟ್ 11ಎಸ್ ಆವೃತ್ತಿ ಕೂಡ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್‌ನಲ್ಲಿ 6.43 ಇಂಚಿನ ಡಿಸ್‌ಪ್ಲೇ, ಆಂಡ್ರಾಯ್ಡ್ 11 ಆಧಾರಿತ MIUI 13 ಓಎಸ್, 4 GB/6 GB RAM ಹಾಗೂ 64 GB/128 GB ಎಂಬ ಎರಡು ಸ್ಟೋರೇಜ್ ಆಯ್ಕೆ ಗ್ರಾಹಕರಿಗೆ ದೊರೆಯಲಿದೆ.

ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ ಸಿಲಿಕಾನ್, ಅಡ್ರೆನೊ 610 ಪ್ರೊಸೆಸರ್ ಇದೆ. ಜತೆಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ ಜತೆಗೆ 8 ಮೆಗಾಪಿಕ್ಸೆಲ್ + 2+2 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಜತೆಗೆ 13 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ.

ಬೆಲೆ ವಿವರ
ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ದರ 4 GB+ 64 GB ಮಾದರಿಗೆ ₹13,499 ಹಾಗೂ 6 GB+ 64 GB
ಆವೃತ್ತಿಗೆ ₹14,499 ಮತ್ತು 6 GB+ 128 GB ಮಾದರಿಗೆ ₹15,999 ದರವಿದೆ.

ಇದೇ ಸಂದರ್ಭದಲ್ಲಿ ಶಓಮಿ ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ ಪ್ರೊ ಹಾಗೂ ರೆಡ್ಮಿ ಸ್ಮಾರ್ಟ್ ಟಿವಿ X43 ಕೂಡ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT