ಶಿಯೋಮಿ ರೆಡ್ಮಿಬುಕ್ ಲ್ಯಾಪ್‌ಟಾಪ್ ದೇಶದಲ್ಲಿ ಬಿಡುಗಡೆ: ಬೆಲೆ ವಿವರ

ಬೆಂಗಳೂರು: ವಿವಿಧ ಬಜೆಟ್‌ನ ಸ್ಮಾರ್ಟ್‌ಫೋನ್ ಮೂಲಕ ದೇಶದ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಶಿಯೋಮಿ, ರೆಡ್ಮಿಬುಕ್ ಸರಣಿಯಲ್ಲಿ ಹೊಸ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ.
ಶಿಯೋಮಿ ರೆಡ್ಮಿಬುಕ್ ಪ್ರೊ ಮತ್ತು ರೆಡ್ಮಿಬುಕ್ ಇ ಲರ್ನಿಂಗ್ ಎಡಿಶನ್ ಲ್ಯಾಪ್‌ಟಾಪ್ ದೇಶದ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಇಂಟೆಲ್ ಪ್ರೊಸೆಸರ್ ಸಹಿತ ಲಭ್ಯವಿದೆ.
ಎರಡೂ ಮಾದರಿಗಳಲ್ಲಿ 11th ಜನರೇಶನ್ ಇಂಟೆಲ್ ಕೋರ್ ಪ್ರೊಸೆಸರ್ ಇದ್ದು, 512GB ವರೆಗೆ SSD ಹೊಂದಿದೆ. ಅಲ್ಲದೆ, ಪ್ರೊ ಆವೃತ್ತಿಯನ್ನು ವೃತ್ತಿಪರರನ್ನು ಗಮನದಲ್ಲಿರಿಸಿಕೊಂಡು ತಯಾರಿಸಿದ್ದರೆ, ಇ ಲರ್ನಿಂಗ್ ಆವೃತ್ತಿಯನ್ನು ವಿದ್ಯಾರ್ಥಿಗಳಿಗಾಗಿ ತಯಾರಿಸಿದೆ.
ಶಿಯೋಮಿ ರೆಡ್ಮಿಬುಕ್ ಪ್ರೊ ದರ 8GB RAM + 512GB ಆವೃತ್ತಿಗೆ ₹49,999 ದರವಿದೆ.
ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಸ್ಮಾರ್ಟ್‌ಫೋನ್
ರೆಡ್ಮಿಬುಕ್ ಇ ಲರ್ನಿಂಗ್ 8GB RAM + 512GB ಆವೃತ್ತಿಗೆ ₹41,999 ದರ ನಿಗದಿಪಡಿಸಲಾಗಿದೆ.
ಆಕರ್ಷಕ ವಿನ್ಯಾಸದ ಫಿಟ್ನೆಸ್ ಟ್ರ್ಯಾಕರ್ ಪರಿಚಯಿಸಿದ ಫಿಟ್ಬಿಟ್
ಹೊಸ ಲ್ಯಾಪ್‌ಟಾಪ್ ಆಗಸ್ಟ್ 6ರಿಂದ ಫ್ಲಿಪ್‌ಕಾರ್ಟ್, ಎಂ ಡಾಟ್ ಕಾಂ ಮೂಲಕ ಲಭ್ಯವಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.