ಮಂಗಳವಾರ, ಏಪ್ರಿಲ್ 20, 2021
25 °C

Redmi Note 10: ಶಿಯೋಮಿ ರೆಡ್ಮಿ ನೋಟ್ 10 ಸಿರೀಸ್ ಬಿಡುಗಡೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Credit: Xiaomi India

ಶಿಯೋಮಿ ನೂತನ ನೋಟ್ ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಶಿಯೋಮಿ ರೆಡ್ಮಿ ನೋಟ್ 10, 10 ಪ್ರೊ ಮತ್ತು 10 ಪ್ರೊ ಮ್ಯಾಕ್ಸ್ ಮಾದರಿಗಳು ಮೂರು ವಿವಿಧ ಸ್ಟೋರೇಜ್ ಆವೃತ್ತಿಯಲ್ಲಿ ದೊರೆಯಲಿದೆ.

ಶಿಯೋಮಿ ನೋಟ್ 10 ಆರಂಭಿಕ ಬಜೆಟ್‌ನ ಸ್ಮಾರ್ಟ್‌ಫೋನ್ ಆಗಿದ್ದು, 10 ಪ್ರೊ ಮತ್ತು 10 ಪ್ರೊ ಮ್ಯಾಕ್ಸ್ ಪ್ರೀಮಿಯಂ ಫೀಚರ್ ಮತ್ತು ವಿನ್ಯಾಸ ಹೊಂದಿವೆ. ಅಲ್ಲದೆ, ಡಿಸ್‌ಪ್ಲೇ, ಪ್ರೊಸೆಸರ್ ಮತ್ತು ಬ್ಯಾಟರಿ ವಿಚಾರದಲ್ಲೂ ಆಕರ್ಷಕ ಆಯ್ಕೆಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಹೊಸ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ 6GB + 64GB, 6GB RAM +128GB ಸ್ಟೋರೇಜ್ ಮತ್ತು 8GB + 128GB ಸ್ಟೋರೇಜ್ ಸಹಿತ ಲಭ್ಯವಿದ್ದು, ಬೆಲೆ ಕ್ರಮವಾಗಿ ₹18, 999, ₹ 19,999 ಮತ್ತು ₹ 21, 999 ದರ ಹೊಂದಿದೆ. ಮಾರ್ಚ್ 18ರಿಂದ ಲಭ್ಯವಿದೆ.

ರೆಡ್ಮಿ ನೋಟ್ 10 ಪ್ರೊ ಫೋನ್, 6GB + 64GB, 6GB RAM +128GB ಸ್ಟೋರೇಜ್ ಮತ್ತು 8GB + 128GB ಸ್ಟೋರೇಜ್ ಹೊಂದಿದ್ದು, ಬೆಲೆ ಕ್ರಮವಾಗಿ ₹ 15, 999, ₹16,999 ಮತ್ತು ₹ 18, 999 ದರ ಹೊಂದಿದೆ. ಮಾರ್ಚ್ 17ರಿಂದ ದೊರೆಯಲಿದೆ.

ರೆಡ್ಮಿ ನೋಟ್ 1o ಸ್ಮಾರ್ಟ್‌ಫೋನ್, 4GB RAM + 64GB ಸ್ಟೋರೇಜ್ ಮತ್ತು 6GB RAM + 128GB ಸ್ಟೋರೇಜ್ ಹೊಂದಿದ್ದು, ₹11,999 ಮತ್ತು ₹ 13,999 ದರ ಹೊಂದಿದೆ. ಮಾರ್ಚ್ 16ರಿಂದ ಲಭ್ಯವಾಗಲಿದೆ. ಎಂಐ.ಕಾಂ, ಅಮೆಜಾನ್.ಇನ್, ಎಂಐ ಹೋಮ್ ಮತ್ತು ಎಂಐ ಸ್ಟುಡಿಯೋ ಮೂಲ ಹೊಸ ಶಿಯೋಮಿ ನೋಟ್ ಸರಣಿ ಸ್ಮಾರ್ಟ್‌ಫೋನ್ ದೊರೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು