Xiaomi Mi 10i: ದೇಶದ ಮಾರುಕಟ್ಟೆಗೆ ಶಿಯೋಮಿ ಹೊಸ ಫೋನ್

ಶಿಯೋಮಿಯ ಜನಪ್ರಿಯ ಎಂಐ ಸರಣಿಯಲ್ಲಿ ಆಕರ್ಷಕ ಫೋನ್ ಒಂದನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಶಿಯೋಮಿ ಎಂಐ ಮತ್ತು ರೆಡ್ಮಿ ಫೋನ್ ಹೆಚ್ಚು ಮಾರಾಟ ದಾಖಲೆ ಕೂಡ ಹೊಂದಿದೆ. ಈ ಬಾರಿ ಎಂಐ ಸರಣಿಯಲ್ಲಿ ಶಿಯೋಮಿ ಹೊಸದಾಗಿ Mi 10i ಫೋನ್ ಪರಿಚಯಿಸಿದೆ.
ಬೆಲೆ ಮತ್ತು ಲಭ್ಯತೆ
ಹೊಸ ಶಿಯೋಮಿ Mi 10i ಫೋನ್, ದೇಶದಲ್ಲಿ ಮೂರು ಆವೃತ್ತಿಯಲ್ಲಿ ಬಿಡುಗಡೆಯಾಗಿದೆ. ಜನವರಿ 8ರಿಂದ ಹೊಸ ಫೋನ್ ದೇಶದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಅಮೆಜಾನ್.ಇನ್, ಎಂಐ.ಕಾಂ, ಎಂಐ ಹೋಮ್ ಮೂಲಕ ಹೊಸ ಶಿಯೋಮಿ Mi 10i ಫೋನ್ ಖರೀದಿಸಬಹುದು.
6 GB+64 GB ಮಾದರಿಗೆ ₹20,999, 6 GB+128 GB ಆವೃತ್ತಿಗೆ ₹21,999 ಮತ್ತು 8 GB+128 GB ಆವೃತ್ತಿಗೆ ₹23,999 ದರವಿದೆ. ಮಿಡ್ ನೈಟ್ ಬ್ಲ್ಯಾಕ್, ಅಟ್ಲಾಂಟಿಕ್ ಬ್ಲೂ ಮತ್ತು ಪೆಸಿಫಿಕ್ ಸನ್ ರೈಸ್ ಎಂಬ ಮೂರು ಬಣ್ಣಗಳಲ್ಲಿ ಹೊಸ ಫೋನ್ ದೊರೆಯಲಿದೆ.
ಡಿಸ್ಕೌಂಟ್ ಆಫರ್
ಹೊಸ ಶಿಯೋಮಿ Mi 10i ಫೋನ್ ಖರೀದಿಗೆ ಗ್ರಾಹಕರು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಎಂಐ.ಕಾಂ ಮತ್ತು ಅಮೆಜಾನ್ ಮೂಲಕ ಇಎಂಐ ಆಯ್ಕೆಯಡಿ ಖರೀದಿಸಿದರೆ 2,000 ರೂ. ಡಿಸ್ಕೌಂಟ್ ಆರಂಭಿಕ ಕೊಡುಗೆಯ ಪ್ರಯೋಜನ ಪಡೆಯಬಹುದು.
What makes #ThePerfect10 oh-so-perfect?
Killer specs ✅
Great price ✅✅6GB + 64GB at ₹2⃣0⃣,9⃣9⃣9⃣
6GB + 128GB at ₹2⃣1⃣,9⃣9⃣9⃣
8GB + 128GB at ₹2⃣3⃣,9⃣9⃣9⃣The #Mi10i comes at an affordable rate making it a perfect gift for the new year. pic.twitter.com/hKBdpTWhOc
— Mi India #Mi10i is Here! (@XiaomiIndia) January 5, 2021
ಚೀನಾ ಮೂಲದ ಎಂಟು ಆ್ಯಪ್ಗಳಿಗೆ ನಿಷೇಧ ಹೇರಿದ ಡೊನಾಲ್ಡ್ ಟ್ರಂಪ್
ಶಿಯೋಮಿ Mi 10i ತಾಂತ್ರಿಕ ವೈಶಿಷ್ಟ್ಯ
ಹೊಸ ಶಿಯೋಮಿ ಫೋನ್ 5G ಬೆಂಬಲ ಹೊಂದಿದ್ದು, ಒನ್ ಪ್ಲಸ್ ನಾರ್ಡ್ ಮತ್ತು ಮೋಟೊ ಜಿ 5G ಫೋನ್ ಗೆ ಸ್ಪರ್ಧೆ ಒಡ್ಡಲಿದೆ.
ಡಿಸ್ಪ್ಲೇ: 6.67 ಇಂಚಿನ ಫುಲ್ HD+ ಡಿಸ್ಪ್ಲೇ ಮತ್ತು120Hz ರಿಫ್ರೆಶ್ ರೇಟ್, HDR10+ ಹೊಂದಿದೆ.
ಪ್ರೊಸೆಸರ್: ಒಕ್ಟಾ ಕೋರ್ Snapdragon 750G SoC ಮತ್ತು Adreno 619 GPU ಬೆಂಬಲ ಹೊಂದಿದೆ.
RAM+ಮೆಮೊರಿ: 6GB+64GB, 6GB+128GB ಹಾಗೂ 8GB+128GB
ಓಎಸ್: Android 10 ಆಧಾರಿತ MIUI 12
ಹಿಂಬದಿ ಕ್ಯಾಮರಾ: 108+8+2+2 ಮೆಗಾಪಿಕ್ಸೆಲ್ ಹಿಂಬದಿ ಕ್ವಾಡ್ ಕ್ಯಾಮರಾ
ಸೆಲ್ಫಿ ಕ್ಯಾಮರಾ: 16 ಮೆಗಾಪಿಕ್ಸೆಲ್
ಬ್ಯಾಟರಿ: 4820mAh ಬ್ಯಾಟರಿ ಜತೆಗೆ 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.
Samsung Galaxy 2021: ಸ್ಯಾಮ್ಸಂಗ್ ಹೊಸ ಗ್ಯಾಲಕ್ಸಿ S21 ಬಿಡುಗಡೆಗೆ ಸಜ್ಜು
It's here and it's #ThePerfect10! 💪
Experience the outstanding all-rounder 1️⃣0️⃣8️⃣MP Quad Camera, blazing fast @Qualcomm Snapdragon 750G, 4820mAh battery with 33W fast charging and much more starting at ₹2️⃣0️⃣9️⃣9️⃣9️⃣
First sale on https://t.co/D3b3QtmvaT & @amazonIN on 8th Jan. pic.twitter.com/0FS3sal35r
— Mi India #Mi10i is Here! (@XiaomiIndia) January 6, 2021
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.