ಮಂಗಳವಾರ, ಸೆಪ್ಟೆಂಬರ್ 28, 2021
21 °C

ಶಿಯೋಮಿ ನೂತನ ಎಂಐ ಟಿವಿ ಬಿಡುಗಡೆ: ದೇಶದಲ್ಲಿ ಬೆಲೆ ಎಷ್ಟಿದೆ?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

MI Store Screengrab

ಬೆಂಗಳೂರು: ದೇಶದ ಟಿವಿ ಮಾರುಕಟ್ಟೆಗೆ ಶಿಯೋಮಿ ನೂತನ ಟಿವಿ ಒಂದನ್ನು ಪರಿಚಯಿಸಿದೆ.

ಶಿಯೋಮಿ ಎಂಐ ಸ್ಮಾರ್ಟ್ ಟಿವಿ ಸರಣಿಯಲ್ಲಿ ಹೊಸದಾಗಿ ಎಂಐ TV 4C ಬಿಡುಗಡೆ ಆಗಿದ್ದು, 32 ಇಂಚಿನ ಡಿಸ್‌ಪ್ಲೇ ಹೊಂದಿದೆ.

ಆಂಡ್ರಾಯ್ಡ್ ಓಎಸ್ ಹೊಂದಿರುವ ಶಿಯೋಮಿ ಸ್ಮಾರ್ಟ್ ಟಿವಿ, ಕ್ರೋಮ್‌ಕಾಸ್ಟ್ ಮತ್ತು ಗೂಗಲ್ ಅಸಿಸ್ಟೆಂಟ್ ಬೆಂಬಲ ಹೊಂದಿದೆ.

ಬೆಲೆ ವಿವರ

ಶಿಯೋಮಿ ಎಂಐ TV 4C ₹15,999 ದರ ಹೊಂದಿದೆ. ಹೊಸ ಟಿವಿ ಫ್ಲಿಪ್‌ಕಾರ್ಟ್ ಮತ್ತು ಎಂಐ ಡಾಟ್ ಕಾಂ ಮೂಲಕ ದೊರೆಯಲಿದೆ. ಜತೆಗೆ ಆರಂಭಿಕ ಕೊಡುಗೆಯಾಗಿ ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಶೇ 10 ಡಿಸ್ಕೌಂಟ್ ಕೂಡ ದೊರೆಯಲಿದೆ.

ನೂತನ ಶಿಯೋಮಿ ಎಂಐ TV 4C ಯಲ್ಲಿ 1 GB RAM ಮತ್ತು 8 GB ಸ್ಟೋರೇಜ್ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು