ಮಂಗಳವಾರ, ಜೂನ್ 28, 2022
24 °C

ಶಓಮಿ ಎಂಐ ಪ್ಯಾಡ್ 5 ಬಿಡುಗಡೆ: ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ..

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

dh file

ಬೆಂಗಳೂರು: ಶಓಮಿ, ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಎಂಐ ಪ್ಯಾಡ್ 5 ಬಿಡುಗಡೆಗೂ ಮುನ್ನ ಕಂಪನಿ, ಹಲವು ಟೀಸರ್ ಮೂಲಕ ಹೊಸ ಗ್ಯಾಜೆಟ್ ಸುಳಿವು ನೀಡಿತ್ತು.

ಎಂಐ ಪ್ಯಾಡ್ 5, 11 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. 2.96GHz ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 860 ಪ್ರೊಸೆಸರ್ ಜತೆಗೆ ಅಡ್ರೆನೊ 640 ಗ್ರಾಫಿಕ್ಸ್ ಬೆಂಬಲ ಹೊಂದಿದೆ.

ಆ್ಯಂಡ್ರಾಯ್ಡ್ 11 ಆಧಾರಿತ MIUI 13 ಆಪರೇಟಿಂಗ್ ಸಿಸ್ಟಂ, 6 GB LPDDR4X RAM ಜತೆಗೆ 128 GB ಮತ್ತು 256 GB UFS 3.1 ಸ್ಟೋರೇಜ್ ಆಯ್ಕೆಯಲ್ಲಿ ಹೊಸ ಎಂಐ ಪ್ಯಾಡ್ 5 ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹಾಗೂ 8,720mAh ಬ್ಯಾಟರಿ ಜತೆಗೆ 33w ಫಾಸ್ಟ್ ಚಾರ್ಜಿಂಗ್ ಇರುವುದಾಗಿ ಶಓಮಿ ತಿಳಿಸಿದೆ.

ಬೆಲೆ ಮತ್ತು ಲಭ್ಯತೆ
128 GB ಮತ್ತು 256 GB ಎಂಬ ಎರಡು ಸ್ಟೋರೇಜ್ ಆವೃತ್ತಿಗೆ ಅನುಗುಣವಾಗಿ ₹26,999 ಮತ್ತು ₹28,999 ದರ ನಿಗದಿಪಡಿಸಲಾಗಿದ್ದು, ಮೇ 3ರಿಂದ ದೊರೆಯಲಿದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು