Redmi Note 12 5G | ಶಓಮಿ ರೆಡ್ಮಿ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ

ಬೆಂಗಳೂರು: ಶಓಮಿ ರೆಡ್ಮಿ ಮತ್ತು ಎಂಐ ಬ್ರ್ಯಾಂಡ್ ಮೂಲಕ ನೂತನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಈ ಬಾರಿ ಶಓಮಿ, ರೆಡ್ಮಿ ನೋಟ್ ಸರಣಿಯಲ್ಲಿ ಮೂರು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ.
ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 Pro ಮತ್ತು ರೆಡ್ಮಿ ನೋಟ್ 12 ಪ್ರೊ ಪ್ಲಸ್ ಎಂಬ ಮೂರು ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಿವೆ.
ರೆಡ್ಮಿ ನೋಟ್ 12 5G
ಶಓಮಿ ರೆಡ್ಮಿ ನೋಟ್ ಸರಣಿಯಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ನೋಟ್ 12, 6.67 ಇಂಚಿನ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ ಜೆನ್. 4 ಪ್ರೊಸೆಸರ್, Adreno™ 619 ಗ್ರಾಫಿಕ್ಸ್ ಬೆಂಬಲ ಹೊಂದಿದೆ. 4 GB ಮತ್ತು 6 GB LPDDR4X RAM ಬೆಂಬಲ ಹೊಂದಿದ್ದು, 128 GB ಸ್ಟೋರೇಜ್ ಇದರಲ್ಲಿದೆ. 5000mAh ಬ್ಯಾಟರಿ, 33W ಫಾಸ್ಟ್ ಚಾರ್ಜಿಂಗ್ ಬೆಂಬಲ ಇದೆ ಎಂದು ಶಓಮಿ ಹೇಳಿದೆ.
ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ, 8+2 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 13 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ.
4 GB+128 GB ಆವೃತ್ತಿಗೆ ₹17,999 ಮತ್ತು 6 GB+128 GB ಮಾದರಿಗೆ ₹19,999 ದರ ಹೊಂದಿದೆ.
Tecno Pova 3 | ಹೊಸ ಸ್ಮಾರ್ಟ್‌ಫೋನ್ ಬೆಲೆ ₹2000 ಇಳಿಕೆ
ರೆಡ್ಮಿ ನೋಟ್ 12 Pro
ಶಓಮಿ ರೆಡ್ಮಿ ನೋಟ್ 12 ಪ್ರೊ ಮಾದರಿ, 6.67 ಇಂಚಿನ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್, ARM Mali-G68 MC4 ಗ್ರಾಫಿಕ್ಸ್ ಬೆಂಬಲ ಹೊಂದಿದೆ. 6 GB ಮತ್ತು 8 GB LPDDR4X RAM ಬೆಂಬಲ ಹೊಂದಿದ್ದು, 128 GB ಮತ್ತು 256 ಜಿಬಿ ಸ್ಟೋರೇಜ್ ಇದರಲ್ಲಿದೆ. 5000mAh ಬ್ಯಾಟರಿ, 67W ಟರ್ಬೋ ಚಾರ್ಜಿಂಗ್ ಬೆಂಬಲ ಇದೆ ಎಂದು ಶಓಮಿ ಹೇಳಿದೆ.
ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ, 50+8+2 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ.
8 GB+256 GB ಆವೃತ್ತಿಗೆ ₹27,999 ಮತ್ತು 8 GB+128 GB ಮಾದರಿಗೆ ₹26,999 ಹಾಗೂ 6 GB+128 GB ಆವೃತ್ತಿಗೆ ₹24,999 ದರ ಹೊಂದಿದೆ.
ಬಜೆಟ್ ಸರಣಿ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್
ರೆಡ್ಮಿ ನೋಟ್ 12 Pro ಪ್ಲಸ್
ಶಓಮಿ ರೆಡ್ಮಿ ನೋಟ್ 12 ಸರಣಿಯಲ್ಲಿ ಬಿಡುಗಡೆಯಾಗಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್ ಇದಾಗಿದೆ. ಹೊಸ ಸ್ಮಾರ್ಟ್‌ಫೋನ್‌ನಲ್ಲಿ 6.67 ಇಂಚಿನ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್, ARM Mali-G68 MC4 ಗ್ರಾಫಿಕ್ಸ್ ಬೆಂಬಲ ಹೊಂದಿದೆ. 8 GB ಮತ್ತು 12 GB LPDDR4X RAM ಬೆಂಬಲ ಹೊಂದಿದ್ದು, 256 ಜಿಬಿ ಸ್ಟೋರೇಜ್ ಇದರಲ್ಲಿದೆ. 4980mAh ಬ್ಯಾಟರಿ, 120W ಹೈಪರ್ ಚಾರ್ಜಿಂಗ್ ಬೆಂಬಲ ಇದೆ ಎಂದು ಶಓಮಿ ಹೇಳಿದೆ.
ಹಿಂಭಾಗದಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ, 8+2 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ.
12 GB+256 GB ಆವೃತ್ತಿಗೆ ₹32,999 ಮತ್ತು 8 GB+256 GB ಮಾದರಿಗೆ ₹29,999 ದರ ಹೊಂದಿದೆ.
Moto G53 5G: 50 ಮೆಗಾಪಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೊಟೊ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.