ಪ್ರವಾಸ ಎಂದೊಡನೆ ಎಲ್ಲರ ಮನಸ್ಸೂ ಕ್ಷಣ ಉಲ್ಲಸಿತಗೊಳ್ಳುತ್ತದೆ. ಆದರೆ, ಮಧುಮೇಹಿಗಳು ತಮ್ಮ ಕಟ್ಟುನಿಟ್ಟಿನ ಪಥ್ಯಾಹಾರ, ಮಾತ್ರೆಗಳು ಹಾಗೂ ಮುಖ್ಯವಾಗಿ ಇನ್ಸುಲಿನ್ ರಗಳೆಗಳ ಕಾರಣದಿಂದ ಪ್ರವಾಸದ ಪ್ರಯಾಸಕ್ಕೆ ಆತಂಕಕ್ಕೊಳಗಾಗುವುದುಂಟು. ನಿಯಮಿತವಾಗಿ ಇನ್ಸುಲಿನ್ ತೆಗೆದುಕೊಳ್ಳಬೇಕಾದವರು, ಇನ್ಸುಲಿನ್ ಶೇಖರಣೆಯ ಸಮಸ್ಯೆಯಿಂದಾಗಿ ದೀರ್ಘ ಪ್ರಯಾಣಗಳಿಗೆ ಹೋಗಲು ಹಿಂಜರಿಯುವುದುಂಟು.
ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಗೊದ್ರೇಜ್ ಕಂಪನಿಯು, ‘ಗೊದ್ರೇಜ್ ಇನ್ಸುಲಿಕೂಲ್+’ (Godrej InsuliCool+) ಸಾಧನ ಪರಿಚಯಿಸಿದೆ. ಥರ್ಮೋಎಲೆಕ್ಟ್ರಿಕ್ ಕೂಲಿಂಗ್ ತಂತ್ರಜ್ಞಾನವನ್ನು ಹೊಂದಿರುವ ಈ ಕಿಟ್, ಇನ್ಸುಲಿನ್ ಪೆನ್ನುಗಳು ಮತ್ತು ಬಾಟಲಿಗಳನ್ನು ತಂಪಾಗಿರಿಸುವ ಜೊತೆಗೆ, ಪ್ರವಾಸದ ವೇಳೆ ಹೆಗಲಿಗೆ ಹಾಕಿಕೊಂಡು ಹೋಗಲು ಅನುಕೂಲಕರವಾಗಿದೆ. ಇದರ ಸಹಾಯದಿಂದ ಯಾವುದೇ ಭಾಗಕ್ಕೆ, ಯಾವುದೇ ಸಮಯದಲ್ಲಿ ಇನ್ಸುಲಿನ್‌ಗಳನ್ನು ತೆಗೆದುಕೊಂಡು ಪ್ರಯಾಣಿಸಬಹುದು.
ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಶೇಖರಿಸಿಡಲು 2 ರಿಂದ 8 ಡಿಗ್ರಿ ತಾಪಮಾನವನ್ನು ಕಾಪಾಡಬೇಕಾಗುತ್ತದೆ. ಮನೆಯಲ್ಲಿರುವಾಗ ಫ್ರಿಡ್ಜ್‌ನಲ್ಲಿ ಇದನ್ನು ಶೇಖರಿಸಲಾಗುತ್ತದೆ. ಆದರೆ, ಸಭೆ, ಸಮಾರಂಭ, ಪ್ರಯಾಣದ ಸಂದರ್ಭದಲ್ಲಿ ಇನ್ಸುಲಿನ್ ಅನ್ನು ತೆಗೆದುಕೊಂಡು ಹೋಗುವುದು ಮತ್ತು ನಿರ್ವಹಿಸುವುದು ಕಷ್ಟ. ಇನ್ಸುಲಿನ್ ಅವಲಂಬಿತ ಮಧುಮೇಹಿಗಳ ಈ ಸವಾಲುಗಳಿಗೆ ಗೋದ್ರೇಜ್ ಇನ್ಸುಲಿಕೂಲ್+ ಪರಿಹಾರ ಒದಗಿಸುತ್ತದೆ.
ಉತ್ಪನ್ನದ ಆಂತರಿಕ ತಾಪಮಾನ 2 ಡಿಗ್ರಿಯಿಂದ ರಿಂದ 8 ಡಿಗ್ರಿಯ ಮಿತಿಯಲ್ಲಿರುವುದರಿಂದ ಇದನ್ನು ಲಸಿಕೆಗಳು, ಔಷಧಗಳು, ಜೈವಿಕ ಮಾದರಿಗಳನ್ನು ಸಂಗ್ರಹಿಸಲು ಸಹ ಬಳಸಬಹುದು. ಬಾಹ್ಯ ಬ್ಯಾಟರಿ ಪ್ಯಾಕ್ ಮತ್ತು ಕಾರ್ ಚಾರ್ಜರ್ ಇರುವ ಈ ಕಿಟ್ ಅನ್ನು ಮನೆಯಲ್ಲಿ, ಕಚೇರಿಯಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಬಳಸಬಹುದು.
ಇದರಲ್ಲಿ 10 ಮಿಲಿಯ 9 ಬಾಟಲುಗಳನ್ನು ಸಂಗ್ರಹಿಸಬಹುದು. ಇದು ಕೇವಲ 2 ಕೇಜಿಯಷ್ಟು ತೂಕವನ್ನು ಹೊಂದಿದ್ದು, ಪ್ರತ್ಯೇಕ ಬ್ಯಾಗಿನಲ್ಲಿ ಬರುತ್ತದೆ. ಸಾಧನದ ಜೊತೆಗೆ ಚಾರ್ಜರ್ ಮತ್ತು 4 ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ 20,000 ಪವರ್ ಬ್ಯಾಂಕ್ ಬಾಟರಿಯೂ ಇದೆ. ಇದರ ಬೆಲೆ ₹8,499.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.