ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ರ ಆರಂಭದಲ್ಲಿ ಚಂದ್ರಯಾನ–3: ಕೇಂದ್ರ ಸಚಿವ ಜಿತೇಂದ್ರ ಸಿಂಗ್

Last Updated 7 ಸೆಪ್ಟೆಂಬರ್ 2020, 1:12 IST
ಅಕ್ಷರ ಗಾತ್ರ

ನವದೆಹಲಿ: ‘ಚಂದ್ರಯಾನ–3’ ಯೋಜನೆ 2021ರ ಆರಂಭದಲ್ಲಿ ಸಾಕಾರಗೊಳ್ಳಲಿದೆ ಎಂದು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಮುಂದಿನ ಬಾರಿ ‘ಚಂದ್ರಯಾನ–2’ರಂತೆ ಆರ್ಬಿಟರ್ ಇರುವುದಿಲ್ಲ. ಲ್ಯಾಂಡರ್ ಮತ್ತು ರೋವರ್ ಇರಲಿದೆ ಎಂದೂ ಅವರು ತಿಳಿಸಿದ್ದಾರೆ.

‘ಚಂದ್ರಯಾನ–2’ ಯೋಜನೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಂಡಿತ್ತು. ಆದರೆ, ಸಾಫ್ಟ್‌ ಲ್ಯಾಂಡಿಂಗ್ (ಮೃದು ನೆಲಸ್ಪರ್ಶ) ಯಶಸ್ವಿಯಾಗಿರಲಿಲ್ಲ. ಹೀಗಾಗಿ 2020ರ ಅಂತ್ಯದ ವೇಳೆಗೆ ‘ಚಂದ್ರಯಾನ–3’ ಯೋಜನೆಯಡಿ ಉಪಗ್ರಹ ಉಡಾವಣೆ ಮಾಡುವುದಾಗಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೊ ಹೇಳಿತ್ತು. 2020ರ ನವೆಂಬರ್‌ನಲ್ಲಿ ‘ಚಂದ್ರಯಾನ–3’ ಸಾಕಾರಗೊಳ್ಳಬಹುದು ಎಂದೂ ಇಸ್ರೊ ವಿಜ್ಞಾನಿಗಳು ಈ ಹಿಂದೆ ತಿಳಿಸಿದ್ದರು. ಆದರೆ, ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಯೋಜನೆ ವಿಳಂಬಗೊಂಡಿದೆ.

‘ಚಂದ್ರಯಾನ–3’ ಬಹುತೇಕ ‘ಚಂದ್ರಯಾನ–2’ರಂತಯೇ ಇರಲಿದೆ. ಈ ಯೋಜನೆಯಲ್ಲಿಯೂ ಲ್ಯಾಂಡರ್ ಮತ್ತು ರೋವರ್ ಇರಲಿವೆ. ಆದರೆ, ಆರ್ಬಿಟರ್ ಇರುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT