ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳ ಗ್ರಹದ ಮೇಲೆ 90 ದಿನ ಪೂರೈಸಿದ ರೋವರ್‌ ಅತ್ಯುತ್ತಮ ಸ್ಥಿತಿಯಲ್ಲಿದೆ: ಚೀನಾ

Last Updated 22 ಆಗಸ್ಟ್ 2021, 12:55 IST
ಅಕ್ಷರ ಗಾತ್ರ

ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿದಿದ್ದ ಚೀನಾದ ಜುರಾಂಗ್‌ ರೋವರ್‌(ಬಾಹ್ಯಾಕಾಶ ನೌಕೆ) 90 ದಿನಗಳನ್ನು ಪೂರೈಸಿದೆ.

'ಆಗಸ್ಟ್‌ 15ಕ್ಕೆ 90 ದಿನಗಳನ್ನು ಪೂರೈಸಿರುವ ರೋವರ್‌ ಅತ್ಯುತ್ತಮ ಸ್ಥಿತಿಯಲ್ಲಿದೆ' ಎಂದು ಚೀನಾ ತಿಳಿಸಿದೆ.

ಕಳೆದ ಮೇ ತಿಂಗಳಲ್ಲಿ ರೊಬೋಟ್ ನಿಯಂತ್ರಿತ ರೋವರ್‌ ಅನ್ನು ಮಂಗಳ ಗ್ರಹಕ್ಕೆ ಕಳಿಸುವಲ್ಲಿ ಚೀನಾ ಯಶಸ್ವಿಯಾಗಿತ್ತು.

ಮಂಗಳ ಗ್ರಹದಲ್ಲಿರುವ ನೀರು, ಆಮ್ಲಜನಕದ ಪ್ರಮಾಣ ಮತ್ತು ವಿದ್ಯುತ್ ಉತ್ಪಾದನೆ ಮಾಡುವುದು ಹೇಗೆಂದು ಕಂಡುಕೊಳ್ಳುವುದು ಜುರಾಂಗ್‌ ರೋವರ್‌ ಯೋಜನೆಯ ಭಾಗವಾಗಿದೆ.

ಸೌರಶಕ್ತಿ ಚಾಲಿತ ಆರು ಚಕ್ರಗಳ ಜುರಾಂಗ್‌ ರೋವರ್‌ 240 ಕಿ.ಗ್ರಾಂ ತೂಕವನ್ನು ಹೊಂದಿದೆ. ಇದರಲ್ಲಿ ಆರು ವೈಜ್ಞಾನಿಕ ಸಾಧನಗಳನ್ನು ಅಳವಡಿಸಲಾಗಿದೆ.

ಮಂಗಳ ಗ್ರಹಕ್ಕೆ ರೋವರ್‌ ಅನ್ನು ಕಳುಹಿಸಿ ಯಶಸ್ವಿಯಾದ ಎರಡನೇ ದೇಶವೆಂದು ಚೀನಾ ಖ್ಯಾತಿ ಪಡೆದಿದೆ. ಈ ಮೊದಲು ಅಮೆರಿಕದ ನಾಸಾ ಸಂಸ್ಥೆಯು ಮಂಗಳ ಗ್ರಹಕ್ಕೆ ರೋವರ್‌ ಅನ್ನು ಕಳುಹಿಸುವಲ್ಲಿ ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT