ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಮೇಲ್ಮೈನ ಶಿಲೆ ಸಂಗ್ರಹಿಸಿ ಭೂಮಿಯತ್ತ ಮುಖ ಮಾಡಿದ ಚೀನಾದ ‘ಚಾಂಗಿ–5’

Last Updated 6 ಡಿಸೆಂಬರ್ 2020, 10:21 IST
ಅಕ್ಷರ ಗಾತ್ರ

ಬೀಜಿಂಗ್‌: ಚಂದ್ರನ ಮೇಲಿನ ಶಿಲೆ ಹಾಗೂ ಮಣ್ಣು ಸೇರಿದಂತೆ ಇತರ ಮಾದರಿಗಳನ್ನು ಭೂಮಿಗೆ ತರುವ ಸಲುವಾಗಿ ಚೀನಾ ಉಡಾವಣೆ ಮಾಡಿರುವ ಗಗನನೌಕೆ ‘ಚಾಂಗಿ–5’ ಈ ಕಾರ್ಯದಲ್ಲಿ ಯಶಸ್ವಿಯಾಗಿದೆ.

ಅಲ್ಲಿನ ಶಿಲೆ, ಮಣ್ಣು ಸಂಗ್ರಹಿಸಿ, ಆರ್ಬಿಟರ್‌ಗೆ ರವಾನಿಸಿದ್ದು, ಈ ಮಾದರಿಗಳನ್ನು ಹೊತ್ತ ಗಗನನೌಕೆ ಭೂಮಿಯತ್ತ ಮುಖಮಾಡಿದೆ.

ಬಾಹ್ಯಾಕಾಶ ಅನ್ವೇಷಣೆ ಆರಂಭಿಸಿ 45 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಚೀನಾ, ಚಂದ್ರನ ಮೇಲ್ಮೈಯಲ್ಲಿನ ಶಿಲೆಗಳನ್ನು ಭೂಮಿಗೆ ತರಲು ಈ ಮಹತ್ವಾಕಾಂಕ್ಷೆ ಕಾರ್ಯಕ್ರಮ ಕೈಗೊಂಡಿದೆ.

ನವೆಂಬರ್‌ 24ರಂದು ಈ ಗಗನನೌಕೆಯನ್ನು ಉಡ್ಡಯನ ಮಾಡಲಾಗಿತ್ತು. ಚಂದ್ರನ ಉತ್ತರಕ್ಕಿರುವ ‘ಓಷನ್‌ ಆಫ್‌ ಸ್ಟಾರ್ಮ್‌’ ಎಂದು ಕರೆಯಲಾಗುವ ಪ್ರದೇಶದ ಬಳಿ ಈ ವ್ಯೋಮನೌಕೆ ಡಿಸೆಂಬರ್‌ 1ರಂದು ಇಳಿಯಿತು. ಗಗನನೌಕೆಯ ಭಾಗವಾದ ‘ಅಸೆಂಡರ್‌’ ಅಲ್ಲಿನ ಮೇಲ್ಮೈಯಲ್ಲಿನ ಶಿಲೆಗಳನ್ನು ಸಂಗ್ರಹಿಸಿತು ಎಂದು ಚೀನಾ ನ್ಯಾಷನಲ್‌ ಸ್ಪೇಸ್‌ ಅಡ್ಮಿನಿಸ್ಟ್ರೇಷನ್‌ (ಸಿಎನ್‌ಎಸ್‌ಎ) ಹೇಳಿದೆ.

ಈ ಶಿಲೆಗಳನ್ನು ಭೂಮಿಗೆ ತರುವ ಕಾರ್ಯವನ್ನು ‘ಆರ್ಬಿಟರ್‌–ರಿಟರ್ನರ್‌’ ನಿಭಾಯಿಸಲಿದೆ.ಅಸೆಂಡರ್‌ ಈ ಮಾದರಿಗಳನ್ನು ‘ಆರ್ಬಿಟರ್‌–ರಿಟರ್ನರ್‌’ಗೆ ವರ್ಗಾಯಿಸಿದೆ. ಒಂದೊಮ್ಮೆ ಇದು ‘ಅಸೆಂಡರ್‌’ನಿಂದ ಬೇರ್ಪಟ್ಟ ನಂತರ, ಈ ಗಗನನೌಕೆ ಭೂಮಿಯತ್ತ ಪ್ರಯಾಣ ಬೆಳೆಸುವುದು ಎಂದೂ ಸಂಸ್ಥೆ ತಿಳಿಸಿದೆ.

ಚೀನಾದ ಪುರಾಣಗಳಲ್ಲಿ ಚಂದ್ರನಿಗೆ ಚಾಂಗಿ ಎಂದು ಕರೆಯಲಾಗುತ್ತದೆ. ಅದೇ ಹೆಸರನ್ನು ಈ ಗಗನನೌಕೆಗೆ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT