ಬುಧವಾರ, ಮೇ 25, 2022
24 °C

ಭೂಮಿಯ ಸಮೀಪ ವೇಗವಾಗಿ ಹಾದು ಹೋಗಲಿದೆ ಬೃಹತ್‌ ಕ್ಷುದ್ರಗ್ರಹ: ನಾಸಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

iStock

ವಾಷಿಂಗ್ಟನ್‌: ಕ್ಷುದ್ರಗ್ರಹವೊಂದು ಭೂಮಿಯ ಸಮೀಪದಲ್ಲೇ ವೇಗವಾಗಿ ಹಾದು ಹೋಗಲಿದೆ. ಹೀಗೆ ಹಾದು ಹೋದ ಕ್ಷುದ್ರಗ್ರಹವು ಪುನಃ ಭೂಮಿಯನ್ನು ಸಮೀಪಿಸಲು ಶತಮಾನವನ್ನೇ ತೆಗೆದುಕೊಳ್ಳಲಿದೆ.

7482 (1994 ಪಿಸಿ1) ಎಂದು ಗುರುತಿಸಲ್ಪಟ್ಟಿರುವ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ನಾಸಾದ 'ಆ್ಯಸ್ಟೆರಾಯ್ಡ್‌ ವಾಚ್‌' ಟ್ವೀಟರ್‌ನಲ್ಲಿ ತಿಳಿಸಿದೆ.

'ಸುಮಾರು 1 ಕಿ.ಮೀ.ನಷ್ಟು ವಿಸ್ತಾರವಾಗಿರುವ 1994 ಪಿಸಿ1 ಕ್ಷುದ್ರಗ್ರಹವು ಭೂಮಿಯಿಂದ ಸುಮಾರು 12 ಲಕ್ಷ ಮೈಲಿ ದೂರದಲ್ಲಿ ಸುರಕ್ಷಿತವಾಗಿ ಹಾರಿ ಹೋಗಲಿದೆ' ಎಂದು ಆ್ಯಸ್ಟೆರಾಯ್ಡ್‌ ವಾಚ್‌ ಮಾಹಿತಿ ನೀಡಿದೆ. ಭಾರತೀಯ ಕಾಲಮಾನ ಬುಧವಾರ ನಸುಕಿನ ಜಾವ 2.45ಕ್ಕೆ ಗಂಟೆಗೆ 45,000 ಮೈಲಿ ವೇಗದಲ್ಲಿ ಭೂಮಿಯನ್ನು ಹಾದು ಹೋಗಲಿದೆ.

ಕ್ಷುದ್ರಗ್ರಹ ಭೂಮಿಯ ಸಮೀಪ ವೇಗವಾಗಿ ಹಾದು ಹೋಗುವ ವಿಚಾರ ತಿಳಿಯುತ್ತಿದ್ದಂತೆ ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗೆ ತೆರೆಕಂಡ 'ಡೋಂಟ್‍‌ ಲುಕ್‌ ಅಪ್‌' ಸಿನಿಮಾವನ್ನು ಜನ ನೆನಪಿಸಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಕ್ಷುದ್ರಗ್ರಹಗಳು ಸಮೀಪಿಸುವುದನ್ನು ಇಬ್ಬರು ವಿಜ್ಞಾನಿಗಳು ಅಮೆರಿಕ ಸರ್ಕಾರಕ್ಕೆ ಮನದಟ್ಟು ಮಾಡುವುದು ಸಿನಿಮಾದಲ್ಲಿದೆ.

1994ರಲ್ಲಿ ಖಗೋಳಶಾಸ್ತ್ರಜ್ಞ ರಾಬರ್ಟ್‌ ಮೆಕ್‌ನಾಟ್‌ ಕ್ಷುದ್ರಗ್ರಹ 7482 (1994 ಪಿಸಿ1) ಅನ್ನು ಪತ್ತೆ ಹಚ್ಚಿದ್ದಾರೆ. ಬುಧವಾರ ಭೂಮಿಯ ಸಮೀಪದಲ್ಲಿ ಹಾದು ಹೋಗುವ 1994 ಪಿಸಿ 1 ಮುಂದಿನ ಶತಮಾನದ ವರೆಗೆ ಇತ್ತ ಸುಳಿಯುವುದಿಲ್ಲ. ಒಂದು ದಶಕದಿಂದ ನಾಸಾದ ಗ್ರಹಸಂಬಂಧಿ ರಕ್ಷಣಾ ತಂಡ ಈ ಕ್ಷುದ್ರಗ್ರಹದ ಮೇಲೆ ಅಧ್ಯಯನ ನಡೆಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು