ಸೋಮವಾರ, ಸೆಪ್ಟೆಂಬರ್ 20, 2021
23 °C

ಇಸ್ರೊ: ಭೂಚಲನೆ ಅವಲೋಕಿಸುವ ಇಒಎಸ್‌-03 ಉಡ್ಡಯನಕ್ಕೆ ಕ್ಷಣಗಣನೆ ಆರಂಭ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ISRO

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ಭೂಮಿಯ ಅವಲೋಕನ ಉಪಗ್ರಹ ಇಒಎಸ್‌-3 ಗುರುವಾರ ಬೆಳಗ್ಗೆ 5.43ಕ್ಕೆ ಉಡ್ಡಯನ ಕೇಂದ್ರ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ(ಎಸ್‌ಡಿಎಸ್‌ಸಿ)ದಿಂದ ಉಡಾವಣೆಗೊಳ್ಳಲಿದೆ.

ಇಒಎಸ್‌-3 ಉಪಗ್ರಹವು ಪ್ರವಾಹ, ಚಂಡಮಾರುತ ಸೇರಿ ಪ್ರಾಕೃತಿಕ ವಿಕೋಪಗಳನ್ನು ಮುಂದಾಗಿ ಗ್ರಹಿಸಲು ಭೂಚಲನೆಯ ಗತಿ ಅವಲೋಕಿಸಲಿದೆ. ಇದನ್ನು ಜಿಯೋಸಿಂಕ್ರೋನಸ್‌ ಸೆಟಲೈಟ್‌ ಲಾಂಚ್‌ ವೆಹಿಕಲ್‌-ಎಫ್‌10 ಮೂಲಕ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಎಸ್‌ಡಿಎಸ್‌ಸಿಯ 2ನೇ ಲಾಂಚ್‌ಪ್ಯಾಡ್‌ನಿಂದ ಹೊತ್ತೊಯ್ಯಲಿದೆ.

ರಾಷ್ಟ್ರವು ಸ್ವಾತಂತ್ರ್ಯ ದಿನಾಚರಣೆಯನ್ನು ಇಸ್ರೊದ ಸಾಧನೆಯೊಂದಿಗೆ ಆಚರಿಸಲು ಎದುರು ನೋಡುತ್ತಿದೆ. ಈ ನಡುವೆ ಉಡ್ಡಯನ ಸಂದರ್ಭದ ಹವಾಮಾನ ಪರಿಸ್ಥಿತಿ ಕುರಿತು ರಾಷ್ಟ್ರೀಯ ಬಾಹ್ಯಾಕಾಶ ಏಜೆನ್ಸಿ ಎಚ್ಚರಿಕೆ ನೀಡಿದೆ.

'ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರ (ಎಸ್‌ಡಿಎಸ್‌ಸಿ) ಎಸ್ಎಚ್‌ಎಆರ್‌ನಿಂದ ಜಿಎಸ್‌ಎಲ್‌ವಿ-ಎಫ್‌10/ಇಒಎಸ್‌-03 ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ ಇಂದು ಬೆಳಗ್ಗೆ 3.43ಕ್ಕೆ ಆರಂಭಗೊಂಡಿದೆ' ಎಂದು ಇಸ್ರೊ ಟ್ವೀಟ್‌ ಮಾಡಿದೆ. ಉಡ್ಡಯನಕ್ಕೆ ಸಿದ್ಧಗೊಂಡಿರುವ ರಾಕೆಟ್‌ ಫೋಟೊವನ್ನು ಪೋಸ್ಟ್‌ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು