ಗುರುವಾರ , ಆಗಸ್ಟ್ 11, 2022
23 °C
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಕೆ.ಶಿವನ್‌

ಕೊರೊನಾ ಕಂಟಕ; ‘ಗಗನ‌ಯಾನ‌‘ಕ್ಕೆ ವರ್ಷ ವಿಳಂಬವಾಗುವ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ‘ಗಗನ‌ಯಾನ‌‘ ಯೋಜನೆ ‘ಕೋವಿಡ್‌ 19‘ ಸಾಂಕ್ರಾಮಿಕದ ಪರಿಣಾಮದಿಂದ ಒಂದು ವರ್ಷ ವಿಳಂಬವಾಗುವ ಸಾಧ್ಯತೆ ಇದೆ‘ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಮಾನವರಹಿತ ಬಾಹ್ಯಾಕಾಶ ಹಾರಾಟ ಯೋಜನೆ ಡಿಸೆಂಬರ್ 2020 ಮತ್ತು ಜುಲೈ 2021ಕ್ಕೆ ನಿಗದಿಯಾಗಿತ್ತು. ಮೊದಲ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಯೋಜನೆಯನ್ನು ಡಿಸೆಂಬರ್ 2021ಕ್ಕೆ ನಿಗದಿಪಡಿಸಲಾಗಿತ್ತು. ‘ಕೋವಿಡ್‌19‘ ಸಾಂಕ್ರಾಮಿಕದಿಂದಾಗಿ ಈ ಯೋಜನೆ ವಿಳಂಬವಾಗುತ್ತಿದೆ. ಮುಂದಿನ ವರ್ಷದ ಕೊನೆ ಅಥವಾ ನಂತರ ವರ್ಷದಲ್ಲಿ ಈ ಕಾರ್ಯಾಚರಣೆ ನಡೆಸಲು ಯೋಚಿಸಿದ್ದೇವೆ‘ ಎಂದು ಇಸ್ರೊ ಅಧ್ಯಕ್ಷ  ಕೆ.ಶಿವನ್‌ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಗಗನ‌ಯಾನ‌‘ ಯೋಜನೆ ಪ್ರಕಾರ ಮಾನವ ಸಹಿತ ಗಗನಯಾನಕ್ಕೂ ಮುನ್ನ ಇಸ್ರೊ ಪರೀಕ್ಷಾರ್ಥ ಎರಡು ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಬೇಕಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು