ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟಿ ಸ್ಕ್ಯಾನ್ ಮೂಲಕ ಈಜಿಪ್ಟ್ ಮಮ್ಮಿಯ ಸಂಶೋಧನೆ ನಡೆಸಿದ ಇಟಲಿ ಆಸ್ಪತ್ರೆ

Last Updated 23 ಜೂನ್ 2021, 12:26 IST
ಅಕ್ಷರ ಗಾತ್ರ

ಬರ್ಗಾಮೊ: ಪ್ರಾಚೀನ ಕಾಲದ ಈಜಿಪ್ಟ್ ಮಮ್ಮಿ ಒಂದನ್ನು ಸಂಶೋಧನೆಯ ಸಲುವಾಗಿ ಇಟಲಿಯ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಪರೀಕ್ಷೆಗೆ ಒಳಪಡಿಸಲಾಗಿದೆ.

ಈಜಿಪ್ಟ್‌ನ ಧರ್ಮಗುರುವಾಗಿದ್ದ ಆಂಖೋಂನ್ಸು ಅವರ ಮಮ್ಮಿಯನ್ನು ಬರ್ಗಾಮೊದ ಸಿವಿಕ್ ಆರ್ಕಿಯಾಲಜಿ ಮ್ಯೂಸಿಯಂನಿಂದ ಮಿಲಾನ್‌ನ ಪೋಲಿಸಿನಿಕೊ ಆಸ್ಪತ್ರೆಗೆ ತಂದು, ಅಧ್ಯಯನ ನಡೆಸುತ್ತಿದ್ದಾರೆ.

3,000 ವರ್ಷಗಳ ಹಳೆಯ ಮಮ್ಮಿ ಇದಾಗಿದ್ದು, ಅಂದಿನ ಜನರ ಜೀವನಶೈಲಿ ಸಹಿತ ವಿವಿಧ ಅಂಶಗಳನ್ನು ಕಂಡುಕೊಳ್ಳಲು ಇದು ನೆರವಾಗಲಿದೆ.

ಮಮ್ಮಿಗಳೆಂದರೆ ಅವುಗಳು ಜೈವಿಕ ಮ್ಯೂಸಿಯಂ ಇದ್ದಂತೆ, ಅವುಗಳ ಮೂಲಕ ವಿವಿಧ ಸಂಗತಿಗಳನ್ನು ನಾವು ತಿಳಿದುಕೊಳ್ಳಬಹುದು ಎಂದು ಮಮ್ಮಿ ಪ್ರಾಜೆಕ್ಟ್ ರಿಸರ್ಚ್‌ನ ನಿರ್ದೇಶಕರಾದ ಸಬೀನಾ ಮಲ್ಗೊರಾ ತಿಳಿಸಿದ್ದಾರೆ.

ಈಜಿಪ್ಟ್ ಧರ್ಮಗುರುವಿನ ಮರಣದ ಬಳಿಕ ದೇಹವನ್ನು ಸಂರಕ್ಷಿಸಲು ಯಾವ ವಿಧಾನ ಅನುಸರಿಸಿದರು ಮತ್ತು ಯಾವ ವಸ್ತು ಬಳಸಲಾಯಿತು ಎನ್ನುವುದನ್ನು ಸಂಶೋಧನೆಯಿಂದ ಕಂಡುಕೊಳ್ಳಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಅಲ್ಲದೆ, ಪ್ರಾಚೀನ ಕಾಲದಲ್ಲಿದ್ದ ಕಾಯಿಲೆಗಳು ಮತ್ತು ಗಾಯಗಳ ಬಗ್ಗೆಯೂ ತಿಳಿಯಲು ಯತ್ನಿಸಲಾಗುತ್ತಿದೆ. ಇದರಿಂದ ಆಧುನಿಕ ವೈದ್ಯ ವಿಜ್ಞಾನ ಮತ್ತು ಸಂಶೋಧನೆಗೆ ಅನುಕೂಲವಾಗಲಿದೆ ಎಂದು ಸಬೀನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT