ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7.4 ಕೋಟಿ ಭಾರತೀಯರ ಆನ್‌ಲೈನ್‌ ಖಾತೆಗಳಿಗೆ ಸ್ಥಳೀಯ ಮಟ್ಟದ ಅಪಾಯ: Kaspersky

Published 20 ಫೆಬ್ರುವರಿ 2024, 11:42 IST
Last Updated 20 ಫೆಬ್ರುವರಿ 2024, 11:42 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದ ಆನ್‌ಲೈನ್ ಬಳಕೆದಾರರಲ್ಲಿ 7.43 ಕೋಟಿಯಷ್ಟು (ಶೇ 34) ಜನರ ಖಾತೆಗಳಿಗೆ 2023ರಲ್ಲಿ ಸ್ಥಳೀಯ ಮಟ್ಟದಲ್ಲಿ ಸೈಬರ್ ದಾಳಿಯ ಅಪಾಯ ಎದುರಾಗಿತ್ತು’ ಎಂದು ಜಾಗತಿಕ ಸೈಬರ್ ಭದ್ರತೆ ಹಾಗೂ ಡಿಜಿಟಲ್ ಖಾಸಗಿತನ ಕಂಪನಿ ಕ್ಯಾಸ್ಪರ್ಸ್ಕಿ (Kaspersky) ಹೇಳಿದೆ.

ಬಳಕೆದಾರರ ಕಂಪ್ಯೂಟರ್‌ಗೆ ಬಾಹ್ಯವಾಗಿ ಅಳವಡಿಸಿದ್ದ ಪೆನ್‌ಡ್ರೈವ್, ಕ್ಯಾಮೆರಾಗಳ ಸ್ಮೃತಿಕೋಶ, ಫೋನ್‌, ಬಾಹ್ಯ ಹಾರ್ಡ್‌ಡ್ರೈವ್‌ಗಳ ಮೂಲಕ ಕೆಲ ದುರುದ್ದೇಶ ಪೂರಿತ ತಂತ್ರಾಂಶಗಳನ್ನು ಬಳಸಿ ದಾಳಿ ನಡೆಸಿದ ಪ್ರಕರಣಗಳ ಕುರಿತು ಕ್ಯಾಸ್ಪರ್ಸ್ಕಿ ಅಧ್ಯಯನ ನಡೆಸಿತ್ತು. ಅದರ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿದೆ.

ಒಟ್ಟು 7.43 ಕೋಟಿ ದಾಳಿಯನ್ನು ಕ್ಯಾಸ್ಪರ್ಸ್ಕಿ ಪತ್ತೆಮಾಡಿ, ಅವುಗಳನ್ನು ತಡೆಹಿಡಿದಿದೆ. ಸೈಬರ್ ಭದ್ರತೆಯ ಪ್ರಮಾಣದಲ್ಲಿ ಭಾರತವನ್ನು 80ನೇ ಸ್ಥಾನದಲ್ಲಿ ಕಂಪನಿ ಇರಿಸಿದೆ.

2023ರಲ್ಲಿ ಸೈಬರ್ ಭದ್ರತೆಯ ಮಾರುಕಟ್ಟೆಯು 6.06 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದಷ್ಟು ವಹಿವಾಟು ನಡೆಸಿದೆ. ಕಂಪ್ಯೂಟರ್‌ಗಳ ಮೂಲಕ ಬಳಸಲಾಗುವ ಡಿಜಿಟಲ್ ಖಾತೆಗಳಿಗೆ ಬಾಹ್ಯವಾಗಿ ಬಳಸುವ ಸಾಧನಗಳಿಂದಲೇ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚು. ಇದು ಐಟಿ ಕ್ಷೇತ್ರದಲ್ಲಿ ಬಹುದೊಡ್ಡ ಸವಾಲಾಗಿದೆ. ಇದರಿಂದಾಗಿ ಶೇ 67ರಷ್ಟು ಭಾರತೀಯ ಕಂಪನಿಗಳು ಸೈಬರ್ ಭದ್ರತೆಯನ್ನು ಹೊರಗುತ್ತಿಗೆ ನೀಡುತ್ತಿವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಡಿಜಿಟಲ್ ಸಂಪರ್ಕ ದಾಪುಗಾಲಿಡುತ್ತಿರುವ ಜತೆಯಲ್ಲೇ ಸೈಬರ್ ಅಪಾಯ ಮಟ್ಟವೂ ನಿರಂತರವಾಗಿ ಹೆಚ್ಚಾಗುತ್ತದೆ. ಕೃತಕ ಬುದ್ಧಿಮತ್ತೆಯ ಬೆಳವಣಿಗೆ ಮತ್ತು ಡಿಜಿಟಲ್ ಪಾವತಿಯ ಅಳವಡಿಸಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸೈಬರ್ ಭದ್ರತೆಯ ಪ್ರಮಾಣವನ್ನು ಹೆಚ್ಚಿಸುವ ಗುರುತರ ಜವಾಬ್ದಾರಿ ಸೇವಾದಾರರ ಮೇಲಿದೆ. ಇದರಿಂದ ಗ್ರಾಹಕರ ದತ್ತಾಂಶಗಳ ನಿರ್ವಹಣೆ ಮತ್ತು ನಂಬಿಕೆ ಉಳಿಸಿಕೊಳ್ಳಲು ಸಾಧ್ಯ’ ಎಂದು ಕ್ಯಾಸ್ಪರ್ಸ್ಕಿ ಸಂಸ್ಥೆಯ ದಕ್ಷಿಣ ಏಷ್ಯಾದ ಮುಖ್ಯ ವ್ಯವಸ್ಥಾಪಕ ಜಯದೀಪ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT