ಮಂಗಳವಾರ, ಆಗಸ್ಟ್ 20, 2019
22 °C

ಚಂದ್ರಯಾನ–2 | ತಾಂತ್ರಿಕ ದೋಷ ನಿವಾರಣೆ, ಉಡ್ಡಯನಕ್ಕೆ ರಾಕೆಟ್‌ ಸಮರ್ಥ: ಇಸ್ರೊ

Published:
Updated:

ಬೆಂಗಳೂರು: ಚಂದ್ರಯಾನ–2ರ ನೌಕೆಯನ್ನು ಹೊತ್ತು ನಭಕ್ಕೆ ಚಿಮ್ಮಲಿರುವ ರಾಕೆಟ್ ‘ಬಾಹುಬಲಿ’ ಸಮರ್ಥವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ತಿಳಿಸಿದೆ.

ಚಂದ್ರಯಾನ–2 ಮಿಷನ್‌ನ ಉಡ್ಡಯನ ರಾಕೇಟ್‌ನಲ್ಲಿನ ತಾಂತ್ರಿಕ ದೋಷವನ್ನು ಪರೀಕ್ಷಿಸಿ, ಸರಿಪಡಿಸಲಾಗಿದ್ದು, ಅದರ ಕಾರ್ಯಕ್ಷಮತೆ ಸಮರ್ಥವಾಗಿದೆ. ಉಡ್ಡಯನಕ್ಕೆ ಪೂರ್ವ ತಯಾರಿ ಪೂರ್ಣಗೊಂಡಿದೆ ಎಂದು ಇಸ್ರೊ ಟ್ವೀಟ್‌ ಮಾಡಿದೆ.

ಇದೇ 22ರಂದು ಚಂದ್ರಯಾನ–2 ಉಡ್ಡಯನ ಮಾಡಲು ಇಸ್ರೊ ನಿರ್ಧರಿಸಿದೆ. ಅಂದು ಮಧ್ಯಾಹ್ನ 2.43ಕ್ಕೆ ನೌಕೆಯನ್ನು ಹೊತ್ತ ರಾಕೆಟ್ ‘ಬಾಹುಬಲಿ’ ನಭಕ್ಕೆ ಚಿಮ್ಮಲಿದೆ. 

* ಇದನ್ನೂ ಓದಿ: ‘ಚಂದ್ರಯಾನ 2’ ಹೊಸ ಮುಹೂರ್ತ: ಸೋಮವಾರ ಮಧ್ಯಾಹ್ನ 2.43

ಈ ಮುನ್ನ ಜುಲೈ 15ರಂದು ನೌಕೆ ಉಡ್ಡಯನಕ್ಕೆ ಯೋಜಿಸಲಾಗಿತ್ತು. ಆದರೆ ಉಡ್ಡಯನಕ್ಕೆ 56 ನಿಮಿಷಗಳು ಬಾಕಿ ಇರುವಾಗ ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದದ್ದರಿಂದ ರದ್ದುಪಡಿಸಲಾಗಿತ್ತು. ಇದಾದ ಮೂರು ದಿನಗಳ ಬಳಿಕ ಹೊಸ ದಿನಾಂಕವನ್ನು ಇಸ್ರೊ ಪ್ರಕಟಿಸಿತ್ತು.

ಇವನ್ನೂ ಓದಿ...

ಸುದೀರ್ಘ ಬರಹ: ಚಂದ್ರನೂರಿಗೆ ಮತ್ತೊಂದು ಯಾತ್ರೆ

*  ತಾಂತ್ರಿಕ ತೊಂದರೆ ಚಂದ್ರಯಾನ–2ರ ಉಡ್ಡಯನ ರದ್ದು

‘ಇಂದಲ್ಲ ನಾಳೆ ನೀವು ಸಾಧಿಸುತ್ತೀರಿ’ ಇಸ್ರೋ ಬೆಂಬಲಕ್ಕೆ ನಿಂತ ಭಾರತೀಯರು

Post Comments (+)