ಭಾನುವಾರ, ಆಗಸ್ಟ್ 14, 2022
28 °C

ಮಂಗಳ–ಶುಕ್ರ ಗ್ರಹಗಳ ಸಂಯೋಗ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಂಗಳ-ಶುಕ್ರ ಗ್ರಹಗಳು ಜುಲೈ13ರಂದು ಸನಿಹ ಬರಲಿದ್ದು (ಕಂಜಂಕ್ಷನ್‌), ಭೂಮಿಯಿಂದ ಆಗಸವನ್ನು ನೋಡಿದಾಗ ಅವು ಅತ್ಯಂತ ಸನಿಹವಿದ್ದಂತೆ ಕಾಣಲಿದೆ. ಖಗೋಳಾಸಕ್ತರಿಗೆ ಇದು ಒಂದು ಅಪರೂಪದ ದೃಶ್ಯವಾಗಿದೆ.

ಗ್ರಹಗಳನ್ನು ಬರಿಗಣ್ಣು, ದುರ್ಬೀನು ಅಥವಾ ದೂರದರ್ಶಕದಿಂದ ನೋಡಬಹುದು. ಶುಭ್ರ ಆಕಾಶವಿದ್ದರೆ ಅಂದು ರಾತ್ರಿ 7.20ಕ್ಕೆ ಪಶ್ಚಿಮ ಮತ್ತು ವಾಯವ್ಯ ದಿಕ್ಕಿನ ನಡುವೆ ‘ಮಂಗಳ–ಶುಕ್ರ ಸಂಯೋಗ’ದೊಂದಿಗೆ ಬಾಲಚಂದ್ರ ಮತ್ತು ಮಖಾ ನಕ್ಷತ್ರ ಕಾಣಬಹುದು. ನಂತರದ ದಿನಗಳಲ್ಲಿ ಈ ಗ್ರಹಗಳು ದೂರವಾಗುತ್ತವೆ.

ಖಗೋಳಾಸಕ್ತರು ಈ ಘಟನೆಯ ಫೋಟೊಗಳನ್ನು outreach@iiap.res.in ಗೆ ಕಳುಹಿಸಬಹುದಾಗಿದೆ. ಉತ್ತಮ ಚಿತ್ರಗಳನ್ನು ಬೆಂಗಳೂರಿನ ಐಐಎ ಆನ್‍ಲೈನಲ್ಲಿ ಪ್ರಕಟಿಸಲಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಲಿಕುಳ: ವೀಕ್ಷಣೆಗೆ ಲಭ್ಯ‌

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಮೃಗಾಲಯ, ಲೇಕ್‍ಗಾರ್ಡನ್, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ, ಸಂಸ್ಕೃತಿ ಗ್ರಾಮ ಮತ್ತು ವಿಜ್ಞಾನಕೇಂದ್ರ ವಿಭಾಗಗಳನ್ನು (ತಾರಾಲಯ ಹೊರತುಪಡಿಸಿ) ಸಾರ್ವಜನಿಕರ ವೀಕ್ಷಣೆಗಾಗಿ ಜುಲೈ 14ರಿಂದ ತೆರೆಯಲಾಗುತ್ತದೆ.

ವೀಕ್ಷಕರು ಕಡ್ಡಾಯವಾಗಿ ಸುರಕ್ಷಿತ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ವೀಕ್ಷಿಸಬಹುದು ಎಂದು ಪ್ರಾಧಿಕಾರದ ಆಯುಕ್ತ ವೆಂಕಟೇಶ್.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು