ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷುದ್ರಗ್ರಹ ಸ್ಪರ್ಶಿಸಿದ ನಾಸಾ ಗಗನನೌಕೆ

Last Updated 22 ಅಕ್ಟೋಬರ್ 2020, 7:43 IST
ಅಕ್ಷರ ಗಾತ್ರ

ಕೇಪ್‌ ಕ್ಯಾನವೆರಲ್‌(ಅಮೆರಿಕ): ಕ್ಷುದ್ರ ಗ್ರಹವೊಂದಕ್ಕೆ ನಾಸಾದ ಒಸಿರಿಸ್‌–ರೆಕ್ಸ್ ಬಾಹ್ಯಾಕಾಶ ನೌಕೆ ಲಘುವಾಗಿ ಸ್ಪರ್ಶಿಸಿದೆ. ಪರಿಣಾಮವಾಗಿ ಆಕಾಶಕಾಯದ ಮೇಲ್ಮೈನ ಬಂಡೆಗಳು ಪುಡಿಯಾಗಿವೆ. ಈ ನೌಕೆಯು ಭೂಮಿಗೆ ಮರಳುವ ಸಂದರ್ಭದಲ್ಲಿ ಆಕಾಶಕಾಯದ ಅವಶೇಷಗಳನ್ನು ಹೊತ್ತು ತರುವ ಸಾಧ್ಯತೆಯನ್ನು ಈ ವಿದ್ಯಮಾನದಿಂದ ತಿಳಿದುಬರುತ್ತದೆ ಎಂದು ನಾಸಾ ಅಧಿಕಾರಿಗಳು ಹೇಳಿದ್ದಾರೆ.

ಈ ಕ್ಷುದ್ರ ಗ್ರಹದಿಂದಮುಂದಿನ ವಾರದವರೆಗೂ ಎಷ್ಟು ಪ್ರಮಾಣದಲ್ಲಿ ಬಂಡೆಚೂರುಗಳ ಅವಶೇಷಗಳ ಮಾದರಿಯನ್ನು ಸಂಗ್ರಹಿಸಬಹುದೆಂದು ನಾಸಾ ವಿಜ್ಞಾನಿಗಳಿಗೆ ತಿಳಿದಿಲ್ಲ. ಆದರೆ, ಕನಿಷ್ಠ ಹಿಡಿಯಷ್ಟಾದರೂ ಚೂರುಗಳು ಬೇಕಾಗಿವೆ.

ಈ ಬಾಹ್ಯಾಕಾಶ ನೌಕೆ ಮಂಗಳವಾರ ಕಳುಹಿಸಿರುವ ಫೋಟೊ ಮತ್ತು ವಿಡಿಯೊಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ನೌಕೆ ಕ್ಷುದ್ರಗಹದ ಮೇಲ್ಮೈ ಸ್ಪರ್ಶಿಸಿ, ಹೊರಟಿದ್ದು, ಈ ಪ್ರಕಾರ ನಿಗದಿಪಡಿಸಿದ ಗುರಿಯನ್ನು ತಲುಪಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT