ನಮ್ಮ ದೇಹದ ಒಳ–ಹೊರಗಿನ ಬಾಧೆಗಳಿಗೆ ಮನಸ್ಸೇ ಕೇಂದ್ರಸ್ಥಾನವೆನ್ನುವುದು ನಿಚ್ಚಳ. ಸಕಾರಾತ್ಮಕ ವಾತಾವರಣದಿಂದ ಮನಸ್ಸೆಂಬ ಕೇಂದ್ರಕ್ಕೆ ಸ್ಥೈರ್ಯ ನೀಡುವುದು ಚಿಕಿತ್ಸೆಗೆ ಅತ್ಯವಶ್ಯಕ.

ಸಹಿಸಲಾರದ ಹೊಟ್ಟೆಯ ಬೇನೆಯಿಂದ ನೀವು ಬಳಲುತ್ತಿರುವಿರೆಂದು ಕಲ್ಪಿಸಿಕೊಳ್ಳಿ. ತಕ್ಷಣಕ್ಕೆ ಯಾವ ಔಷಧವೂ ಸಿಗುವಂತಿಲ್ಲ; ವೈದ್ಯರೂ ಲಭ್ಯರಿಲ್ಲ. ಆಗ ನಿಮ್ಮ ಪ್ರೀತಿಪಾತ್ರರಾದ ಮಡದಿಯೋ ಗಂಡನೋ ತಾಯಿಯೋ ಅಥವಾ ಮಿತ್ರರೋ ಬಿಸಿಯ ನೀರಿಗೆ ಒಂದಷ್ಟು ಶುಂಠಿಯ ರಸವನ್ನು ಸೇರಿಸಿ, ಸಮಾಧಾನದ ಮಾತುಗಳನ್ನಾಡುತ್ತ ಪ್ರೀತಿಯಿಂದ ಅದನ್ನು ನಿಮಗೆ ಕುಡಿಸಬಹುದು. ಅದನ್ನು ಸೇವಿಸಿದ ಬಳಿಕ ಕೆಲವೇ ನಿಮಿಷಗಳಲ್ಲಿ ಆ ಬೇನೆಯು ಶಮನವಾಗಿಬಿಡುತ್ತದೆ. ನೋವಿಲ್ಲದೆ ನೀವು ನಿರಾಳರಾಗುವಿರಿ. ಅದಕ್ಕೆ ಕಾರಣ ನೀವು ಕುಡಿದ ಬಿಸಿನೀರಿನಲ್ಲಿದ್ದ ಶುಂಠಿಯ ರಸವೇ? ಅದರ ಶಾಖವೇ? ವಸ್ತುತಃ ಅದು ನಿಮಗಿದ್ದ ಬೇನೆಗೆ ಔಷಧವೇ ಆಗಿಲ್ಲದಿರಬಹುದು. ಆದರೂ ನೋವು ಮಾಯವಾಯಿತಲ್ಲ! ಇದಾವುದೂ ಅಲ್ಲದೆ ನೀವು ಅದನ್ನು ಔಷಧವೆಂದು ಭಾವಿಸುವ ನಂಬಿಕೆಯಿಂದ ಬೇನೆ ತಗ್ಗಿತೆ? ಹೀಗಾಗುವುದು ಸಾಧ್ಯ. ವಿಜ್ಞಾನಿಗಳು ಇದನ್ನು ‘ಪ್ಲಾಸಿಬೊ ಪರಿಣಾಮ’ ಎನ್ನುವರು.

ಪ್ಲಾಸಿಬೊ: ಹಾಗೆಂದರೇನು?

ಯಾವುದೇ ರೋಗದ ಚಿಕಿತ್ಸೆಯ ಅಂಗವಾಗಿ ರೋಗಿಗೆ ಕೊಡಲಾಗುವ, ನೋಡಲು ಮಾತ್ರ ಔಷಧದಂತೆ ಕಾಣುವ ಪದಾರ್ಥವು ‘ಪ್ಲಾಸಿಬೊ’ ಎಂದೆನಿಸಿಕೊಳ್ಳುತ್ತದೆ. ಅದರಲ್ಲಿ ಔಷಧೀಯ ಗುಣವಿರಲೇಬೇಕೆಂದಿಲ್ಲ, ಹಾನಿಕಾರಕವಲ್ಲದಿದ್ದರೆ ಸಾಕು. ಹಾಗಾಗಿ ಅದನ್ನು ನಿರುಪದ್ರವಿ ನಕಲಿ ಔಷಧ ಎನ್ನಲಡ್ಡಿಯಿಲ್ಲ. ರೋಗಿಗೆ ಅದನ್ನು ಕೊಡುವಾಗ ಪ್ರೀತಿ, ಭರವಸೆ, ಸಮಾಧಾನ, ಸಾಂತ್ವನದ ಮಾತುಗಳನ್ನಾಡುತ್ತ ಒಂದಷ್ಟು ಆರೈಕೆ ಮಾಡಿದರೆ ರೋಗಿಯ ಮನಸ್ಸು ಅದನ್ನು ಔಷಧ ಎಂದೇ ನಂಬುತ್ತದೆ. ಮನಸ್ಸಿನ ಈ ನಂಬಿಕೆಯು ರೋಗದ ನಿವಾರಣೆಗೆ ಸಹಕಾರಿಯಾಗುತ್ತದೆ. ಮನಸ್ಸಿನ ಸಂಕಲ್ಪ ಮತ್ತು ನಿರ್ದೇಶನದಂತೆ ದೇಹವು ವರ್ತಿಸುತ್ತದೆ ಎನ್ನುವುದು ಈ ವಿದ್ಯಮಾನದಿಂದ ಸ್ಪಷ್ಟವಾಗುತ್ತದೆ. ಮಾತ್ರವಲ್ಲ, ಬೇನೆಯ ಪರಿಹಾರಕ್ಕಾಗಿ ದೇಹಕ್ಕೆ ಹೊರಗಿನಿಂದ ಕೊಡುವ ಔಷಧಗಳು ಎಷ್ಟು ಆವಶ್ಯಕವೊ, ಮಾನಸಿಕ ನೆಲೆಯಲ್ಲಿ ಭರವಸೆಯ ಮಾತುಗಳೊಂದಿಗೆ ಪ್ರೀತಿಯ ಆರೈಕೆಯೂ ಅಷ್ಟೇ ಅವಶ್ಯಕವೆನ್ನುವುದು ವೇದ್ಯವಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಯಂತ್ರಗಳ ಮೇಲಿನ ಅವಲಂಬನೆ ಹೆಚ್ಚಾಗುತ್ತ, ಮಾತ್ರೆ, ಚುಚ್ಚುಮದ್ದು, ಶಸ್ತ್ರಚಿಕಿತ್ಸೆಗಳಿಂದ ಮಾತ್ರ ರೋಗಪರಿಹಾರ ಸಾಧ್ಯವೆಂದು ಭಾವಿಸಿದ್ದೇವೆ. ಆದರೆ ಸಕಾರಾತ್ಮಕ ಚಿಂತನೆ, ಆರೈಕೆ, ಮಾನಸಿಕ ಸ್ಥೈರ್ಯಗಳನ್ನು ಚಿಕಿತ್ಸೆಯ ಪ್ರಧಾನ ಅಂಶಗಳಾಗಿ ಆಧುನಿಕ ವೈದ್ಯಕೀಯ ವಿಜ್ಞಾನವು ಗಂಭೀರವಾಗಿ ಪರಿಗಣಿಸುತ್ತಿದೆ.

ನಂಬಿಕೆ - ಚಿಕಿತ್ಸೆಗೆ ಅಡಿಪಾಯ

ನಂಬಿಕೆಯನ್ನು ಇದ್ದ ಹಾಗೆಯೇ ಒಪ್ಪದೇ ಅದನ್ನು ಪ್ರಶ್ನಿಸಿ, ಪ್ರಯೋಗಗಳಿಂದ ಪರೀಕ್ಷಿಸಿ ಅದರಲ್ಲಿ ನಿರೀಕ್ಷಿತ ಸತ್ಯಾಂಶವಿದ್ದರೆ ಮಾತ್ರ ಸ್ವೀಕರಿಸುವುದು ವಿಜ್ಞಾನದ ಮಾರ್ಗ. ಆದರೆ ಪ್ಲಾಸಿಬೊ ವಿಚಾರದಲ್ಲಿ ವಿಜ್ಞಾನವು ರೋಗಿಯ ನಂಬಿಕೆಯನ್ನೂ ಒಪ್ಪುತ್ತದೆ. ಹೀಗೆಂದ ಮಾತ್ರಕ್ಕೆ ಪ್ಲಾಸಿಬೊದಿಂದ ಹೃದಯಾಘಾತ, ಕಾನ್ಸರ್ನಂಥ ಗಂಭೀರ ಸಮಸ್ಯೆಗಳನ್ನು ಬಗೆಹರಿಸಬಹುದೆನ್ನುವುದು ತಪ್ಪಾಗುತ್ತದೆ. ಪ್ಲಾಸಿಬೊ ಒಂದರಿಂದಲೇ ರೋಗದ ನಿವಾರಣೆಯಾಗದು. ಅದು ರೋಗದಿಂದ ಉಂಟಾಗುವ ನೋವನ್ನು ಅಥವಾ ಇತರ ಲಕ್ಷಣಗಳನ್ನು ತಗ್ಗಿಸಬಹುದಷ್ಟೆ. ನಮ್ಮ ಮಿದುಳು ನೋವನ್ನು ಗ್ರಹಿಸುವ ಪ್ರಕ್ರಿಯೆಯನ್ನು ಪ್ಲಾಸಿಬೊ ಖಂಡಿತವಾಗಿಯೂ ಪ್ರಭಾವಿಸುತ್ತದೆ. ನೋವನ್ನು ನಿವಾರಿಸಿ ಸಕಾರಾತ್ಮಕ ಭಾವನೆಗಳನ್ನು ಪ್ರಚೋದಿಸುವ ‘ಎಂಡಾರ್ಫಿನ್’ ಮತ್ತು ‘ಡೋಪಮಿನ್’ಗಳು ನಮ್ಮ ದೇಹದೊಳಗೆ ಬಿಡುಗಡೆಯಾಗುವಲ್ಲಿ ಪ್ಲಾಸಿಬೊ ಮತ್ತು ಅದನ್ನು ರೋಗಿಗೆ ನೀಡುವ ವಿಧಾನಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಸಂಶೋಧನೆಯಲ್ಲಿ

ಔಷಧಗಳನ್ನು ತಯಾರಿಸುವ ಮೊದಲು ಅದರ ತಯಾರಕರು ಸುದೀರ್ಘವಾದ ಪ್ರಯೋಗಸರಣಿಯನ್ನು ನಡೆಸುತ್ತಾರೆ. ಇದನ್ನು ಔಷಧೋದ್ಯಮದಲ್ಲಿ ‘ಕ್ಲಿನಿಕಲ್ ಟ್ರಯಲ್ಸ್’ ಎನ್ನುವರು. ಇಂತಹ ಪ್ರಯೋಗಗಳಲ್ಲಿ ಸ್ಥೂಲವಾಗಿ ಎರಡು ಗುಂಪುಗಳ ರೋಗಿಗಳಿರುತ್ತಾರೆ. ಒಂದು ಗುಂಪಿನ ರೋಗಿಗಳಿಗೆ ಔಷಧವನ್ನು ನೀಡುತ್ತ ಅದರ ಪರಿಣಾಮವನ್ನು ದಾಖಲಿಸುವರು. ಮತ್ತೊಂದು ಗುಂಪಿನಲ್ಲಿಯ ರೋಗಿಗಳಿಗೆ ಔಷಧ ಎಂದು ಹೇಳಿ ಪ್ಲಾಸಿಬೊಗಳನ್ನು ನೀಡುವರು. ಔಷಧದ ನಿಜವಾದ ಪರಿಣಾಮವನ್ನು ಅಳೆಯಲು ಔಷಧ ಸಂಶೋಧಕರು ಈ ವಿಧಾನವನ್ನು ಬಳಸುತ್ತಾರೆ. ಎರಡೂ ಗುಂಪುಗಳಲ್ಲಿ ಒಂದೇ ಪ್ರತಿಕ್ರಿಯೆ ಮತ್ತು ಪರಿಣಾಮ ಕಂಡುಬಂದಲ್ಲಿ ಔಷಧವು ನಿರೀಕ್ಷಿಸಿದಷ್ಟು ಪರಿಣಾಮಕಾರಿಯಲ್ಲ ಎಂದು ತೀರ್ಮಾನಿಸಲಾಗುತ್ತದೆ. ಅಂದರೆ ಅದು ಆ ಔಷಧದ ವೈಫಲ್ಯ ಎಂದು ಪರಿಗಣಿಸಲಾಗುತ್ತದೆ. ಅದರ ಸುಧಾರಣೆಗಾಗಿ ಮಾಡಬೇಕಾದ ಬದಲಾವಣೆಗಳ ಹುಡುಕಾಟದಲ್ಲಿ ಸಂಶೋಧನೆ ಮುಂದುವರೆಯುತ್ತದೆ.

ಪ್ಲಾಸಿಬೊಗಳನ್ನು ನಿಜವಾದ ಔಷಧ ಎಂದು ರೋಗಿಗಳಿಗೆ ನಂಬಿಸಿ ಕೊಡುವುದು ಒಂದು ವಿಧಾನವಾದರೆ, ಅವು ಹಾನಿಮಾಡದ ನಕಲಿ ಔಷಧವೆಂದು ಮೊದಲೇ ತಿಳಿಸಿ ಕೊಡುವ ಪ್ರಯೋಗವೂ ಉಂಟು. ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ‘ಸೈನ್ಸ್ ಟ್ರಾಂಸ್ಲೇಷನಲ್ ಮೆಡಿಸಿನ್’ ಎನ್ನುವ ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿರುವ ಸಂಶೋಧನೆಯೊಂದರ ವರದಿ ಅಚ್ಚರಿ ಮೂಡಿಸುವಂತಿದೆ. ಮೈಗ್ರೇನ್ ನ ಚಿಕಿತ್ಸೆಗಾಗಿ ರೋಗಿಗಳ ಎರಡು ಗುಂಪುಗಳನ್ನು ರಚಿಸಲಾಗಿತ್ತು. ಒಂದು ಗುಂಪಿಗೆ ಔಷಧವನ್ನು ಅದರ ಹೆಸರು ಕಾಣುವಂತೆ ನೀಡಲಾಗಿದೆ. ಮತ್ತೊಂದು ಗುಂಪಿಗೆ ಕೊಡುತ್ತಿರುವುದು ಔಷಧವಲ್ಲದೆ ಪ್ಲಾಸಿಬೊ ಎಂದು ತಿಳಿಸಿ ಕೊಡಲಾಗಿದೆ. ಪ್ಲಾಸಿಬೊ ಎಂದು ತಿಳಿದು ಅದನ್ನು ಸೇವಿಸಿದ ಗುಂಪಿನಲ್ಲಿ ತಲೆನೋವು ಶೇ 50ರಷ್ಟು ಕಡಿಮೆಯಾಗಿರುವುದು ಈ ಸಂಶೋಧನೆಯಲ್ಲಿ ಕಂಡುಬಂದಿದೆ. ಔಷಧವೋ ಅಲ್ಲವೋ - ಒಂದು ಗುಳಿಗೆ ತೆಗೆದುಕೊಳ್ಳುವುದರಿಂದ, ಬಿಳಿಯ ಕೋಟುಗಳನ್ನು ತೊಟ್ಟ ವೈದ್ಯರು ನೀಡುವ ಗಮನದಿಂದ, ಅವರೊಟ್ಟಿಗಿನ ಮಾತುಕತೆಯಿಂದ ರೋಗಿಗಳ ಮನಸ್ಸಿನ ಮೇಲೆ ಪರಿಣಾಮವಾಗುವುದು, ಅದರಿಂದ ನೋವು ಸ್ವಲ್ಪವಾದರೂ ಕಡಿಮೆಯಾಗುವುದು ಎಂದು ಸಂಶೋಧಕರು ಈ ಅಧ್ಯಯನದಿಂದ ಅಭಿಪ್ರಾಯ ಪಟ್ಟಿದ್ದಾರೆ.

ಒಟ್ಟಿನಲ್ಲಿ ನಮ್ಮ ದೇಹದ ಒಳ ಹೊರಗಿನ ಬಾಧೆಗಳಿಗೆ ಮನಸ್ಸೇ ಕೇಂದ್ರಸ್ಥಾನವೆನ್ನುವುದು ನಿಚ್ಚಳ. ಸಕಾರಾತ್ಮಕ ವಾತಾವರಣದಿಂದ ಮನಸ್ಸೆಂಬ ಕೇಂದ್ರಕ್ಕೆ ಸ್ಥೈರ್ಯ ನೀಡುವುದು ಚಿಕಿತ್ಸೆಗೆ ಅತ್ಯವಶ್ಯಕ ಎನ್ನುವುದು ನಿರ್ವಿವಾದವಾದ ಸತ್ಯ. ಕೇಂದ್ರವೊಂದೇ ಮುಖ್ಯ ಮಿಕ್ಕಿದ್ದೆಲ್ಲವೂ ಗೌಣವೆನ್ನುವುದು ಸಾಧುವಲ್ಲ. ಆದರೆ ಕೇಂದ್ರದ ಮಹತ್ತ್ವವನ್ನು ಅರಿತು ಅದರೆಡೆಗೂ ಸೂಕ್ತ ಗಮನವನ್ನು ಹರಿಸಿದರೆ ಚಿಕಿತ್ಸೆಯು ಒಳಗಿನಿಂದ ಪುಷ್ಟಗೊಳ್ಳುತ್ತದೆ, ಆರೋಗ್ಯವು ನಮ್ಮದಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.