ಬಾಸ್ಟನ್: ಕೃತಕ ಬುದ್ಧಿಮತ್ತೆ ಸಹಾಯದಿಂದ ಪ್ರೊಟೀನ್ ರಚನೆಗಳನ್ನು ಸಂಗೀತವನ್ನಾಗಿ ಮಾರ್ಪಡಿಸುವ ನೂತನ ವ್ಯವಸ್ಥೆಯೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಮರಳಿ ಇಂತಹ ಸಂಗೀತದಿಂದ ಪಡೆಯುವ ಪ್ರೊಟೀನ್‌ಗಳು ಹಿಂದೆಂದೂ ಪ್ರಕೃತಿಯಲ್ಲಿ ಕಂಡಿರದ ವಿನೂತನ ಪ್ರೊಟೀನ್‌ಗಳೇ ಆಗಿರಲಿವೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಸಂಶೋಧಕರು ಈ ವಿಧಾನವನ್ನು ಅಭಿವೃದ್ಧಿಪಡಿಸಿದ್ದು, ಪ್ರೊಟೀನ್‌ಗಳಲ್ಲಿನ ಅಮೈನೋ ಆ್ಯಸಿಡ್‌ಗಳ ಸರಣಿಯನ್ನು ಸಂಗೀತ ಸರಣಿಯನ್ನಾಗಿ ಪರಿವರ್ತಿಸುವುದು ಸಾಧ್ಯವಾಗಿದೆ. ಈ ವಿಧಾನದಲ್ಲಿ ಕಣಗಳ ಭೌತಿಕ ಗುಣಗಳನ್ನಾಧರಿಸಿ ಸ್ವರಗಳನ್ನು ನಿರ್ಧರಿಸಲಾಗುತ್ತದೆ.

ಕ್ವಾಂಟಮ್ ರಾಸಯನಿಕ ವಿಜ್ಞಾನ ಬಳಸಿ ಪ್ರತಿಯೊಂದು ಅಮೈನೋ ಆ್ಯಸಿಡ್‌ನ ಕಣದಿಂದಲೇನೈಜ ಕಂಪನ ತರಂಗಾಂತರಗಳನ್ನು ಎಣಿಕೆ ಮಾಡಿ ಸ್ವರಗಳ ಏರಿಳಿತ ಮತ್ತು ಅವುಗಳ ನಡುವಣ ಪರಸ್ಪರ ಸಂಬಂಧವನ್ನು ಲೆಕ್ಕ ಹಾಕಲಾಗುತ್ತದೆ. ಯಾವುದೇ ವಿಧದ ಪ್ರೊಟೀನ್‌ನ ದೀರ್ಘ ಸರಣಿಯು ಸ್ವರ ಪ್ರಸ್ತಾರದ ಸರಣಿಯೇ ಆಗಿಬಿಡುವುದು ವಿಶೇಷ!

ಹೀಗೆ ಪಡೆದ ಮಾಧುರ್ಯ ಕಿವಿಗೆ ಬಿದ್ದ ಮೇಲೆ ಇದೀಗ ವಿಶಿಷ್ಟ ರಚನಾತ್ಮಕ ಕಾರ್ಯ ನಿರ್ವಹಿಸುವ ಕೆಲವು ನಿರ್ದಿಷ್ಟ ಅಮೈನೋ ಆ್ಯಸಿಡ್‌ನ ಸರಣಿಗಳ ವ್ಯತ್ಯಾಸವನ್ನು ಗುರುತಿಸುವುದು ಸಾಧ್ಯವಾಗುತ್ತಲಿದೆ ಎಂದು ಎಂಐಟಿಯ ಪ್ರೊ. ಮಾರ್ಕಸ್ ಬ್ಯುಲರ್ ಹೇಳಿದ್ದಾರೆ.ಇದರ ಸಂಪೂರ್ಣ ಪರಿಕಲ್ಪನೆ ಪ್ರೊಟೀನ್‌ಗಳನ್ನು ಇನ್ನು ಉತ್ತಮ ರೀತಿಯಲ್ಲಿ ಅರಿಯುವುದು ಮತ್ತು ಅವುಗಳ ವಿಸ್ತೃತ ವೈವಿಧ್ಯವನ್ನು ಗುರುತಿಸುವುದು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.