ನವದೆಹಲಿ: ಸೌರಮಂಡಲದಾಚೆ ಜೀವಿಗಳು ಇರಬಹುದೇ ಎಂಬ ಕುತೂಹಲ ಒಂದೆಡೆಯಾದರೆ, ಈ ಬಗ್ಗೆ ನಿರಂತರ ಅನ್ವೇಷಣೆಗಳು ಸಹ ನಡೆಯುತ್ತಲೇ ಇವೆ. ಈ ನಡುವೆ ‘ಕೆ2–18’ ಎಂಬ ನಕ್ಷತ್ರವೊಂದರ ಸುತ್ತ ಪರಿಭ್ರಮಿಸುತ್ತಿರುವ ಗ್ರಹವೊಂದರಲ್ಲಿ(ಎಕ್ಸೊಪ್ಲಾನೆಟ್) ಜೀವಿಗಳ ಅಸ್ತಿತ್ವದ ಸಾಧ್ಯತೆ ಕುರಿತ ‘ಪ್ರಬಲ ಸಾಕ್ಷ್ಯ’ಗಳು ಲಭ್ಯವಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ.

ಈ ಎಕ್ಸೊಪ್ಲಾನೆಟ್ಗೆ ‘ಕೆ2–18ಬಿ’ ಎಂದು ಹೆಸರಿಸಲಾಗಿದ್ದು, ಇದು ಭೂಮಿಯಿಂದ 120 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಇದು ಭೂಮಿಗಿಂತ 8.5 ಪಟ್ಟು ಹೆಚ್ಚು ಭಾರವಿದೆ.

ಜ್ಯೋತಿರ್ವರ್ಷ ಎಂದರೆ ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ. ಈ ಲೆಕ್ಕದಂತೆ, ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು 8 ನಿಮಿಷ ಬೇಕು.

ಸಮುದ್ರದಲ್ಲಿನ ಜೀವಿಗಳು ಉತ್ಪತ್ತಿ ಮಾಡುವಂತಹ ಮಾಲಕ್ಯೂಲ್ಗಳು ಈ ಎಕ್ಸೊಪ್ಲಾನೆಟ್ನಲ್ಲಿ ಪತ್ತೆಯಾಗಿವೆ. ಇದು ಜೀವಿಗಳ ಅಸ್ತಿತ್ವ ಕುರಿತ ಇಂತಹ ಅಭಿಪ್ರಾಯ ತಳೆಯಲು ಕಾರಣವಾಗಿದೆ. ಆದರೆ, ಈ ಬಗ್ಗೆ ನಿರ್ಣಯಕ್ಕೆ ಬರಲು ಇನ್ನಷ್ಟು ದತ್ತಾಂಶಗಳ ಅಗತ್ಯವಿದೆ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.

ಬ್ರಿಟನ್ನ ಕೇಂಬ್ರಿಜ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಕುರಿತ ಅಧ್ಯಯನ ನಡೆಸಿದೆ. ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ದಾಖಲಿಸಿರುವ ದತ್ತಾಂಶಗಳನ್ನು ಈ ತಂಡ ವಿಶ್ಲೇಷಿಸಿದೆ.

‘ಈ ಎಕ್ಸೊಪ್ಲಾನೆಟ್ನಲ್ಲಿ ಡೈಮಿಥೈಲ್ ಸಲ್ಫೈಡ್ ಹಾಗೂ ಡೈಮಿಥೈಲ್ ಡೈಸಲ್ಫೈಡ್ ಅಂಶಗಳು ಇರುವುದು ಈ ದತ್ತಾಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಈ ರಾಸಾಯನಿಕಗಳನ್ನು ಭೂಮಿ ಮೇಲಿನ ಕೆಲ ಸೂಕ್ಷ್ಮಾಣುಜೀವಿಗಳು ಉತ್ಪತ್ತಿ ಮಾಡುತ್ತವೆ. ಜೀವಿಗಳಿಗೆ ಪೂರಕವಾದ ವಾತಾವರಣವನ್ನು ಈ ಎಕ್ಸೊಪ್ಲಾನೆಟ್ ಹೊಂದಿರಬಹುದು ಎಂಬುದಕ್ಕೆ ಈ ಅಂಶಗಳು ಬಲವಾದ ಸಾಕ್ಷ್ಯ ಒದಗಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.