ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ರಾಕೆಟ್‌ನಿಂದ ವನ್‌ವೆಬ್‌ನ 34 ಉಪಗ್ರಹಗಳು ನಭಕ್ಕೆ

Last Updated 22 ಆಗಸ್ಟ್ 2021, 7:54 IST
ಅಕ್ಷರ ಗಾತ್ರ

ಮಾಸ್ಕೊ: ಬ್ರಾಡ್‌ಬ್ಯಾಂಡ್ ಸೇವೆ ನೀಡುತ್ತಿರುವ ಬ್ರಿಟನ್‌ನ ವನ್‌ವೆಬ್‌ ಸಂಸ್ಥೆಯ 34 ಉಪಗ್ರಹಗಳನ್ನು ರಷ್ಯಾದ ಸೂಯೆಜ್‌ ರಾಕೆಟ್‌ ಶನಿವಾರ ರಾತ್ರಿ ಯಶಸ್ವಿಯಾಗಿ ನಭಕ್ಕೆ ಸೇರಿಸಿದೆ.

ಕಜಕಿಸ್ತಾನದ ಬೈಕನೋರ್‌ ಉಡಾವಣಾ ಕೇಂದ್ರದಿಂದ ಈ ಉಡಾವಣೆ ನಡೆಯಿತು. ಈ ವರ್ಷ ವನ್‌ವೆಬ್‌ ಉಪಗ್ರಹಗಳ 5ನೇ ಉಡಾವಣೆ ಇದಾಗಿದ್ದು, ಜುಲೈ 1ರಂದು ಈ ಹಿಂದಿನ ಉಡಾವಣೆ ನಡೆದಿತ್ತು. ಈ ಮೂಲಕ ವನ್‌ವೆಬ್‌ನ 288 ಉಪಗ್ರಹಗಳು ಇದೀಗ ಅಂತರಿಕ್ಷದಲ್ಲಿ ಸುತ್ತುವಂತಾಗಿದ್ದು, ಜಗತ್ತಿನ ಮೂಲೆ ಮೂಲೆಗೆ ಬ್ರಾಡ್‌ಬ್ಯಾಂಡ್ ಸೇವೆ ನೀಡುತ್ತಿವೆ. ಮುಂದಿನ ವರ್ಷದೊಳಗೆ 650ರಷ್ಟು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಸೇರಿಸುವ ಗುರಿಯನ್ನು ಸಂಸ್ಥೆ ಇಟ್ಟುಕೊಂಡಿದೆ.

ವನ್‌ವೆಬ್‌ ಸದ್ಯ ಎಲಾನ್‌ ಮಸ್ಕ್‌ ಮತ್ತು ಜೆಫ್‌ ಬೆಜೋಸ್‌ ಒಡೆತನದ ಕಂಪನಿಗಳ ಜತೆಗೆ ಸ್ಪರ್ಧೆ ನಡೆಸುತ್ತಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT