ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಲೈವ್‌ ಸ್ಟ್ರೀಮಿಂಗ್‌: ಡಾಲ್ಬಿ ಆನ್‌

Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ

ವಿಡಿಯೊ ಅಥವಾ ಆಡಿಯೊ ಗುಣಮಟ್ಟದಲ್ಲಿ ರಾಜಿಯಾಗದಂತೆ ಲೈವ್ ಸ್ಟ್ರೀಮ್ (ನೇರ ಪ್ರಸಾರ) ಮಾಡಲು ಡಾಲ್ಬಿ ಆನ್ (Dolby On) ಅಪ್ಲಿಕೇಷನ್ ಸಹಕಾರಿ.

ವರ್ಷದ ಆರಂಭದಲ್ಲೇ ಬಿಡುಗಡೆಯಾಗಿರುವ ಈ ಆ್ಯಪ್ ಮೂಲಕ ಉನ್ನತ ಗುಣಮಟ್ಟದ ಮ್ಯೂಸಿಕ್ ಮತ್ತು ವಿಡಿಯೊ ರೆಕಾರ್ಡಿಂಗ್ ಸಹ ಮಾಡಬಹುದು. ಮೊಬೈಲ್ ಮೂಲಕವೇ ಯುಟ್ಯೂಬ್, ವಿಮಿಯೊ ಪ್ಲಾಟ್‌ಫ್ಲಾರ್ಮ್‌ಗಳಲ್ಲಿ ಲೈವ್ ಸ್ಟ್ರೀಮ್ ಮಾಡಬಹುದು.

ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಬ್ಬರೂ ಡಾಲ್ಬಿ ಆನ್‌ ಬಳಸಬಹುದು. ಎರಡು ವಿಧಾನಗಳ ಮೂಲಕ ಸುಲಭವಾಗಿ ಲೈವ್‌ ಸ್ಟ್ರೀಮಿಂಗ್‌ಗೆ ಇದನ್ನು ಬಳಸಬಹುದು. ಮೊದಲಿಗೆ ಅದರ ಟ್ವಿಚ್ ಇಂಟಿಗ್ರೇಷನ್ ಮತ್ತು ಎರಡನೆಯದು ಆರ್‌ಟಿಎಂಪಿ (ರಿಯಲ್-ಟೈಮ್ ಮೆಸೇಜಿಂಗ್ ಪ್ರೊಟೊಕಾಲ್).

ಡಾಲ್ಬಿ ಆನ್ ಒಳಗೆ ಬರುವ ಶಬ್ದ ಆಲಿಸುತ್ತದೆ ಮತ್ತು ಆಡಿಯೊ ಎಫೆಕ್ಟ್‌ಗಳಾದ ಕಂಪ್ರೆಷನ್, ಇಕ್ಯೂ, ಲಿಮಿಟಿಂಗ್, ನಾಯ್ಸ್ ರಿಡಕ್ಷನ್, ಸ್ಟೀರಿಯೊ ವೈಡೆನಿಂಗ್, ಡಿ-ಎಸ್ಸಿಂಗ್‌ಗಳನ್ನುಸ್ವಯಂಚಾಲಿತವಾಗಿ ಅಳವಡಿಸಿಕೊಳ್ಳುತ್ತದೆ. ಮನೆಯಲ್ಲಿಯೇ ಸ್ಟುಡಿಯೊ ಗುಣಮಟ್ಟದ ಆಡಿಯೊ, ವಿಡಿಯೊ ರೆಕಾರ್ಡ್ ಹಾಗೂ ಲೈವ್ ಸ್ಟ್ರೀಮ್‌ ಮಾಡಲು ಅವಕಾಶ ನೀಡುತ್ತದೆ.

ಡಾಲ್ಬಿ ಆನ್ ಆ್ಯಪ್ ಸೂಕ್ತ ರೀತಿಯಲ್ಲಿ ಬಳಸಲು ಕೆಲ ಸಲಹೆಗಳು ಇಲ್ಲಿವೆ:

* ಫೋನ್ ಅಥವಾ ಟ್ಯಾಬ್ಲೆಟ್ ಮೂಲಕ ಆ್ಯಪ್‌ ತೆರೆದು ವಿಡಿಯೊದಲ್ಲಿ ನಿಮ್ಮ ಫ್ರೇಮ್ ಹೊಂದಿಸಿಕೊಳ್ಳಿ ಮತ್ತು ಸ್ಥಳದಲ್ಲಿ ಸಾಕಷ್ಟು ಬೆಳಕು ಇರುವುದನ್ನು ದೃಢಪಡಿಸಿಕೊಳ್ಳಿ. ಕೇವಲ ಆಡಿಯೊ ರೆಕಾರ್ಡಿಂಗ್‌ಗಳಿಗೆ ಫೋನ್ ಸರಿಯಾದ ಅಂತರದಲ್ಲಿರಿಸಿ (ಉದಾಹರಣೆಗೆ, ನಿಮ್ಮ ಧ್ವನಿ ಮತ್ತು ಗಿಟಾರ್‌ನ ದೂರ ಸರಿಯಾದ ಅಂತರದಲ್ಲಿರಬೇಕು).

* ಆಡಿಯೊ ಲೆವೆಲ್‌ (ಧ್ವನಿ ಮಟ್ಟ) ಪರೀಕ್ಷಿಸಿಕೊಳ್ಳಿ ಮತ್ತು ಇನ್-ಆ್ಯಪ್ ಮೀಟರ್ ಮೇಲೆ ಕಣ್ಣಿರಿಸಿ. ಅದು ಕೆಂಪು ಇದ್ದರೆ ನಿಮ್ಮ ವಾಲ್ಯೂಮ್ ಕಡಿಮೆ ಮಾಡಿ ಅಥವಾ ಫೋನ್ ದೂರದಲ್ಲಿರಿಸಿ.

* ಲೈವ್‌ ಸ್ಟ್ರೀಮಿಂಗ್‌ ಆಯ್ಕೆ ಬಳಸುತ್ತಿದ್ದರೆ, ಫೇಸ್‌ಬುಕ್ ಅಥವಾ ಟ್ವಿಚ್ ಫೀಡ್‌ಗಳು ಹತ್ತಿರದಲ್ಲಿ ಪ್ರತ್ಯೇಕ ಡಿವೈಸ್‌ಗಳಲ್ಲಿ ಲಭ್ಯವಾಗುತ್ತಿರುವಂತೆ ನೋಡಿಕೊಳ್ಳಿ. ಈ ಮೂಲಕ ವೀಕ್ಷಕರ ಪ್ರತಿಕ್ರಿಯೆ ನೋಡಿ ಅದಕ್ಕೆ ತಕ್ಕಂತೆ ಲೈವ್ ಮುಂದುವರಿಸಬಹುದು.

* ಮೊಬೈಲ್‌ ಡೇಟಾದಲ್ಲಿ ಕಾರ್ಯನಿರ್ವಹಿಸಿದರೂ ಅತ್ಯುತ್ತಮ ಫಲಿತಾಂಶಗಳಿಗೆ ವೈಫೈ ಸಂಪರ್ಕ ಬಳಸಬಹುದು. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಇದು ಉಚಿತವಾಗಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT