ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಯಾನ ಮಿಷನ್‌: ‘ವಿಕಾಸ್‌‘ ಎಂಜಿನ್‌ನ ಪರೀಕ್ಷಾರ್ಥ ಪ್ರಯೋಗ ಯಶಸ್ವಿ -ಇಸ್ರೋ

ಅಕ್ಷರ ಗಾತ್ರ

ಚೆನ್ನೈ:ಇಸ್ರೊದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗಗನಯಾನ ಮಿಷನ್‌‘ನ ಭಾಗವಾಗಿ ‘ವಿಕಾಸ್‌‘ ಎಂಜಿನ್‌ನಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೊ ಬುಧವಾರ ತಿಳಿಸಿದೆ.

ಮಾನವಸಹಿತ ಗಗನಯಾನ ಯೋಜನೆ ಇದಾಗಿದ್ದು, ಜಿಎಸ್‌ಎಲ್‌ವಿ ಎಂಕೆ3 ನೌಕೆಯು ಭಾರತದ ನಾಲ್ವರುಗಗನಯಾತ್ರಿಗಳನ್ನು ಹೊತ್ತೊಯ್ಯಲಿದೆ. ಈ ರಾಕೆಟ್‌ನಲ್ಲಿ ವಿಕಾಸ್‌ ಎಂಜಿನ್‌ ಬಳಕೆ ಮಾಡಲಾಗುತ್ತಿದ್ದು, ಇದು 3ನೇ ಯಶಸ್ವಿ ಪರೀಕ್ಷೆ ಎಂದು ಇಸ್ರೊ ಟ್ವೀಟ್‌ ಮಾಡಿದೆ.

2022ರ ಆಗಸ್ಟ್ 15ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ತುಂಬುವ ಹಿನ್ನೆಲೆಯಲ್ಲಿ ಈ ಮಾನವಸಹಿತ ಗಗನಯಾನವನ್ನು ಕೈಗೊಳ್ಳುವುದಾಗಿ ಭಾರತ ಸರ್ಕಾರ ಘೋಷಣೆ ಮಾಡಿತ್ತು. ಇದರ ಭಾಗವಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇನ್ನುಗಗನಯಾನ ಮಾಡಲಿರುವ ಭಾರತೀಯ ಗಗನಯಾತ್ರಿಗಳು ಈಗಾಗಲೇ ರಷ್ಯಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಇಸ್ರೊ ಟ್ವೀಟ್‌ಗೆವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಸ್ಪೇಸ್‌ಎಕ್ಸ್‌ ಕಂಪನಿಯ ಸಿಇಒ ಎಲಾನ್ ಮಸ್ಕ್ ಇಸ್ರೋಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT