ಕಾಬೂಲ್: ತಾಲಿಬಾನ್ ಆಡಳಿತದ ವಸ್ತ್ರಸಂಹಿತೆ ವಿರುದ್ಧ ಅಫ್ಗಾನಿಸ್ತಾನದ ಮಹಿಳೆಯರು #DoNotTouchMyClothes ಮತ್ತು #AfghanistanCulture ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ.
ಕಪ್ಪು ಬುರ್ಖಾ ಬದಲಿಗೆ ಅಫ್ಗಾನಿಸ್ತಾನದ ವಿವಿಧೆಡೆಯ ಸಾಂಪ್ರದಾಯಿಕ ಉಡುಗೆ ತೊಟ್ಟ ಫೊಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ.
‘ಇದು ಅಫ್ಗಾನಿಸ್ತಾನದ ಸಂಸ್ಕೃತಿ. ನಾನು ಅಫ್ಗಾನಿಸ್ತಾನದ ಸಾಂಪ್ರದಾಯಿಕ ದಿರಿಸು ಧರಿಸಿದ್ದೇನೆ’ ಎಂದು ಅಲ್ಲಿನ ಇತಿಹಾಸ ತಜ್ಞೆ ಡಾ. ಬಹಾರ್ ಜಲಾಲಿ ಟ್ವೀಟ್ ಮಾಡಿದ್ದಾರೆ.
‘ಇದು ಅಫ್ಗಾನಿಸ್ತಾನದ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಇನ್ನೊಂದು ಸಾಂಪ್ರದಾಯಿಕ ಉಡುಗೆ. ನಾನು ಹದಿಹರೆಯದವಳಾಗಿದ್ದಾಗ ತೆಗೆದ ಫೋಟೊವಿದು. ನಮ್ಮನ್ನು ಅಳಿಸಿಹಾಕಲು ಬಯಸುವವರು ನಮ್ಮ ಸಂಸ್ಕೃತಿಯನ್ನು ಸ್ವಾಧೀನಪಡಿಸಿಕೊಳ್ಳಲು ನಾವು ಬಿಡುವುದಿಲ್ಲ’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಅಫ್ಗಾನಿಸ್ತಾನದ ಮಹಿಳೆಯರ ಆನ್‌ಲೈನ್ ಅಭಿಯಾನಕ್ಕೆ ಟ್ವಿಟರ್‌ನಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಅನೇಕ ಮಂದಿ ವಿದೇಶಿಯರೂ ಬೆಂಬಲ ಸೂಚಿಸಿ ಟ್ವೀಟ್‌ಗಳನ್ನು ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.