ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಮನ್ ಗಿಲ್–ಸಾರಾ ತೆಂಡೂಲ್ಕರ್ ಬೆನ್ನುಬಿದ್ದ ಡೀಪ್‌ಫೇಕ್‌!

ಸಹೋದರನ ಜೊತೆ ಇರುವ ಫೋಟೊ ತಿರುಚಿದ ಕಿಡಿಗೇಡಿಗಳು
Published 10 ನವೆಂಬರ್ 2023, 11:16 IST
Last Updated 10 ನವೆಂಬರ್ 2023, 11:16 IST
ಅಕ್ಷರ ಗಾತ್ರ

ಬೆಂಗಳೂರು: ಇಂಟರ್‌ನೆಟ್ ಲೋಕದಲ್ಲಿ ಡೀಪ್‌ಫೇಕ್ ಎಂಬ ಮಾಯಾಜಾಲ ಇತ್ತೀಚಿಗೆ ಹೆಚ್ಚು ಸದ್ದು ಮಾಡುತ್ತಿದ್ದು, ನಟ–ನಟಿಯರಿಗೆ, ಸೆಲಿಬ್ರಿಟಿಗಳಿಗೆ, ಕ್ರಿಕೆಟ್ ಆಟಗಾರರಿಗೆ ಇದರಿಂದ ತುಂಬಾ ಮುಜುಗರವಾಗುತ್ತಿದೆ.

ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೊ ಸಾಕಷ್ಟು ಸದ್ದು ಮಾಡಿ, ಕಡೆಗೆ ಆ ವಿಷಯ ಕೇಂದ್ರ ಸರ್ಕಾರದ ಐಟಿ ಇಲಾಖೆಯ ಗಮನಕ್ಕೂ ಹೋಗಿ ಕ್ರಮದ ಮಾತಾಯಿತು..

ಇದೀಗ ಈ ಡೀಪ್‌ಫೇಕ್ ಎಂಬ ಕೆಟ್ಟ ನಡೆ ಟೀಂ ಇಂಡಿಯಾದ ಉದಯೋನ್ಮುಖ ಬ್ಯಾಟರ್ ಶುಭಮನ್ ಗಿಲ್‌ ಹಾಗೂ ಸಚಿನ್ ತೆಂಡೂಲ್ಕರ್ ಮಗಳು ಮತ್ತು ರೂಪದರ್ಶಿ ಸಾರಾ ತೆಂಡೂಲ್ಕರ್ ಅವರಿಗೂ ತಟ್ಟಿದ್ದು, ಕಿಡಿಗೇಡಿಗಳು ಅವರ ಬೆನ್ನುಬಿದ್ದಿದ್ದಾರೆ.

ಈಗಾಗಲೇ ಕ್ರಿಕೆಟ್ ಹಾಗೂ ಬಾಲಿವುಡ್ ವಲಯದಲ್ಲಿ ಈ ಇಬ್ಬರ ಬಗ್ಗೆ ರೂಮರ್ ಇದೆ. ಸಾರಾ –ಶುಭಮನ್ ಲವ್ ಮಾಡುತ್ತಿದ್ದಾರೆ ಎನ್ನುವ ಮಾತಿದೆ. ಆದರೆ ಯಾರೊಬ್ಬರೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಅದು ಅವರ ಖಾಸಗಿತನ.

ಆದರೆ, ಈ ಸಾಮಾಜಿಕ ಜಾಲತಾಣದಲ್ಲಿರುವ ಕುಚೋದ್ಯೋಗಿಗಳು ಅವರನ್ನು ಬೆಂಬಿಡದೇ ಕಾಡುತ್ತಿದ್ದಾರೆ. ಡೀಪ್‌ಫೇಕ್ ಕುತಂತ್ರಜ್ಞಾನ ಬಳಸಿಕೊಂಡು ಸಾರಾ–ಶುಭಮನ್ ಫೋಟೊ ಜೋಡಿಸಿ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ.

ಅಸಲಿಗೆ ಆ ಫೋಟೊ ಸಾರಾ ಅವರು ಸಹೋದರ ಅರ್ಜುನ್ ತೆಂಡೂಲ್ಕರ್ ಅವರ ಜೊತೆಗಿರುವ ಫೋಟೊ. ಕಿಡಿಗೇಡಿಗಳು ಅದನ್ನೇ ಡೀಪ್‌ಫೇಕ್ ಮಾಡಿದ್ದಾರೆ.

ಇತ್ತಿಚಿಗೆ ನಟಿ ಕತ್ರಿನಾ ಕೈ‍ಫ್ ಅವರನ್ನೂ ಡೀಪ್‌ಫೇಕ್ ಮಾಡಲಾಗಿತ್ತು. ಅಶ್ಲೀಲವಾಗಿ ಅವರ ಫೋಟೊವನ್ನು ತಿರುಚಿ ಹರಿಬಿಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT