ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಡ್ರಾಯ್ಡ್ ಬಳಕೆದಾರರೆ ಗಮನಿಸಿ; ಟ್ವಿಟರ್ ಹೊಸ ಆವೃತ್ತಿ ಅಪ್‌ಡೇಟ್ ಮಾಡಬೇಡಿ!

Last Updated 22 ಜನವರಿ 2020, 6:19 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಂಡ್ರಾಯ್ಡ್‌ ಫೋನ್‌ ಬಳಕೆದಾರರಿಗೆ ಪದೇ ಪದೇ ಟ್ವಿಟರ್‌ ಆ್ಯಪ್‌ ಕ್ರ್ಯಾಷ್‌ ಆಗುವ ಸಮಸ್ಯೆ ಎದುರಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟ್ವಿಟರ್‌ ಅಪ್‌ಡೇಟ್‌ ಮಾಡಿಕೊಂಡವರು ಪೇಚಿಗೆ ಸಿಲುಕಿದ್ದು, 'ನಾವು ಸೂಚಿಸುವವರೆಗೂ ಹೊಸ ಆವೃತ್ತಿ ಅಪ್‌ಡೇಟ್‌ ಮಾಡಿಕೊಳ್ಳಬೇಡಿ' ಎಂದು ಟ್ವಿಟರ್‌ ಪ್ರಕಟಿಸಿಕೊಂಡಿದೆ.

ಆ್ಯಪ್‌ನ ಹೊಸ ಆವೃತ್ತಿ ಅಪ್‌ಡೇಟ್‌ ಆಗಿರುವ ಫೋನ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದನ್ನು ಟ್ವಿಟರ್‌ ಒಪ್ಪಿಕೊಂಡಿದೆ. ಪ್ಲೇ ಸ್ಟೋರ್‌ನಲ್ಲಿ ಇತ್ತೀಚಿನ ಆವೃತ್ತಿ 8.28 ಅಪ್‌ಡೇಟ್ ಮಾಡಿಕೊಳ್ಳುತ್ತಿದ್ದಂತೆ ಆ್ಯಪ್‌ ತೆರೆದುಕೊಳ್ಳಲು ಸಮಸ್ಯೆ ಎದುರಾಗಿದ್ದನ್ನು ಹಲವು ಟ್ವೀಟಿಗರು ದೂರಿದ್ದರು. ಈ ಬಗ್ಗೆ ಆ್ಯಂಡ್ರಾಯ್ಡ್‌ ಪೊಲೀಸ್‌ ಮೊದಲಿಗೆ ವರದಿ ಮಾಡಿತ್ತು.

ದೂರು ಪಡೆದಿರುವ ಟ್ವಿಟರ್‌, ಬಗ್‌ ಕಂಡು ಬಂದಿರುವುದನ್ನು ಖಚಿತ ಪಡಿಸಿದೆ. ಸಮಸ್ಯೆ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ಟ್ವಿಟರ್‌ ಸಪೋರ್ಟ್‌ ಖಾತೆಯ ಮೂಲಕ ತಿಳಿಸಿದೆ.

'ಆ್ಯಂಡ್ರಾಯ್ಡ್‌ ಬಳಕೆದಾರರಲ್ಲಿ ಆ್ಯಪ್‌ ತೆರೆಯುತ್ತಿದ್ದಂತೆ ಕ್ರ್ಯಾಷ್‌ ಆಗುತ್ತಿರುವುದು ಕಂಡು ಬಂದಿದೆ. ಸಮಸ್ಯೆ ಬಗೆಹರಿದಿರುವುದನ್ನು ಖಚಿತ ಪಡಿಸುವವರೆಗೂ ಅಪ್‌ಡೇಟ್‌ ಮಾಡಿಕೊಳ್ಳಬೇಡಿ. ಅನಾನುಕೂಲಕ್ಕೆ ವಿಷಾದಿಸುತ್ತೇವೆ!' ಎಂದು ಪ್ರಕಟಿಸಿದೆ.

ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ಗೆ ಆಟೋ ಅಪ್‌ಡೇಟ್‌ ನೀಡಿರುವುದನ್ನು ಬದಲಿಸಿಕೊಳ್ಳಬೇಕು. ಇನ್ನೂ ಅಪ್‌ಡೇಟ್‌ ಮಾಡಿಕೊಳ್ಳದಿರುವವರು ಟ್ವಿಟರ್‌ ಖಚಿತ ಪಡಿಸುವವರೆಗೂ ಕಾಯಬೇಕಿದೆ. ಈಗಾಗಲೇ ಅಪ್‌ಡೇಟ್‌ ಮಾಡಿಕೊಂಡಿರುವವರು, ಮೊಬೈಲ್‌ ಸೆಟ್ಟಿಂಗ್ಸ್‌ನಲ್ಲಿ ಆ್ಯಪ್‌ ಇನ್ಫೊಗೆ ಆಯ್ಕೆ ಮಾಡಿ; ಟ್ವಿಟರ್‌ ಆ್ಯಪ್‌ನ ಡೇಟಾ ಮತ್ತು ಕ್ಯಾಷ್‌ ಕ್ಲಿಯರ್‌ ಮಾಡಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT